ಈ ದೇಶದಲ್ಲಿ ಪಿಜ್ಜಾ ಜಾಹೀರಾತಿನಲ್ಲಿ ಮಹಿಳೆಯರನ್ನ ತೋರಿಸಿದ್ರೆ ಮುಗೀತು ಕಥೆ..​

ಆ ದೇಶ ಇನ್ನೂ ಯಾವ ಯುಗದಲ್ಲಿದೆ ಅನ್ನೋದೆ ಗೊತ್ತಿಲ್ಲ,. ವಿಶ್ವದ ಮಹಿಳೆಯರು ಎಲ್ಲೆಡೆ ತಮ್ಮ ಸ್ಥಾನವನ್ನು ಗಟ್ಟಿಗೊಳಿಸುತ್ತಿರುವ ಈ ಹೈ- ಸ್ಪೀಡ್​ ಕಾಲದಲ್ಲಿ ಅಲ್ಲಿ ಮಹಿಳೆಯರಿಗೆ ನಿರ್ಬಂಧದ ಮೇಲೆ ನಿರ್ಬಂಧ ಹೇರಲಾಗ್ತಿದೆ. ಧಾರ್ಮಿಕ ನಿಯಮ ಎಂಬ ಕಟ್ಟುಪಾಡುಗಳಿಗೆ ಜೋತುಬಿದ್ದು ಹೊಸ ಹೊಸ ರೂಲ್ಸ್​ ತರಲಾಗ್ತಿದೆ. ಹೌದು, ನಾವ್​ ಹೇಳ್ತಾ ಇರೋದು ಇರಾನ್​ ದೇಶದಲ್ಲಿ ಹೊಸದಾಗಿ ಜಾರಿಗೆ ಬಂದಿರುವ ವಿಚಿತ್ರವಾದ ರೂಲ್ಸ್​ ಬಗ್ಗೆ

ಇದು ಕೇವಲ ಟಿವಿಯಲ್ಲಿ ಬರುವ ಪುಟ್ಟ ಜಾಹೀರಾತು. ಆ ಜಾಹೀರಾತಿನ ಅರ್ಥ, ಮನೆಯವರೆಲ್ಲಾ ಒಟ್ಟಿಗೆ ಕೂತು ಆ ಬ್ರಾಂಡ್​ನ​ ಟೀಯನ್ನು ಕುಡಿದರೆ, ಸುಂದರವಾಗಿರುತ್ತೆ ಅನ್ನೋದು. ಇನ್ನು (iran girl with pizza picture) ಈ ಚಿತ್ರವೂ ಸಹ ಒಂದು ಪಿಜ್ಜಾ ಕಂಪನಿಯ ಜಾಹಿರಾತು. ಸುಂದರವಾದ ಚೆಲುವೆ, ಕೈಯಲ್ಲಿ ಪಿಜ್ಜಾ ಹಿಡಿದು, ಒಂದು ಕಂಪನಿಗೋಸ್ಕರ ಪ್ರಚಾರ ಮಾಡ್ತಾ ಇರೋದು. ಇಂತಹ ಜಾಹೀರಾತಿನಲ್ಲಿ ಏನಾದರೂ ತಪ್ಪು ನಿಮಗೆ ಕಾಣುತ್ತಾ ? ನಮಗೇನೂ ಕಾಣ್ತಿಲ್ಲ.. ಆದ್ರೆ, ಇರಾನ್​ ಸರ್ಕಾರಕ್ಕೆ ಇಂದು ಮಹಾತಪ್ಪಂತೆ.. ಇಂತಹ ಜಾಹೀರಾತುಗಳು ಸುಖಾಸುಮ್ಮನೆ ಪ್ರಚೋದನೆ ನೀಡ್ತಾವಂತೆ.

ಇರಾನ್​ನಲ್ಲಿ ಸದಾ ಮಹಿಳೆಯರ ತಲೆಯ ಮೇಲೆ ನಿರ್ಬಂಧದ ತೂಗುಗತ್ತಿ ನೇತಾಡ್ತಾನೆ ಇರುತ್ತೆ. ಅಲ್ಲಿನ ಸರ್ಕಾರದ ಸರ್ವಾಜ್ಞೆಯನ್ನು ಪಾಲಿಸಿ ಪಾಲಿಸಿ ಸ್ತ್ರೀಯರು ಹೈರಾಣಾಗಿ ಹೋಗ್ತಿದ್ದಾರೆ.. ಈಗಲೂ ಒಂದು ಸಮೀಕ್ಷೆ ಪ್ರಕಾರ ವಿಶ್ವದ ಅತ್ಯಂತ ಸುಂದರ ಯುವತಿಯರು ಇರೋದು ಇರಾನ್​ ದೇಶದಲ್ಲೇ. ಆದರೆ ಆ ಹುಡುಗಿಯರ ಸೌಂದರ್ಯ ಕೇವಲ ಮನೆಯವರಿಗೆ ಸೀಮಿತ. ಮನೆ ಹೊರಗೆ ಅವರು ಕಾಲಿಡಬೇಕಾದರೆ, ಮನೆಯ ಹಿರಿಯನ ಅನುಮತಿ ಪಡೆಯಬೇಕು. ಮನೆಯಿಂದಾಚೆ ಹೋಗಲು ಹಿಜಬ್ ನಿಯಮ ಪಾಲಿಸಲೇಬೇಕು. ಹೊರಗಡೆ ಗಂಡಸರ ಜೊತೆ ಮಾತನಾಡುವಂತಿಲ್ಲಾ, ಕೈಕುಲುಕುವಂತಿಲ್ಲಾ. ಇದೆಲ್ಲಾ ಪದ್ಧತಿಗಳು ಇನ್ನೂ ಚಾಲ್ತಿಯಲ್ಲಿದೆ. ಇದೆಲ್ಲಾ ಓಕೆ ಧರ್ಮವನ್ನ ನಂಬುವವರು ಅದನ್ನ ಪಾಲಿಸುವವರಿಗೆ ಇದೆಲ್ಲಾ ದೊಡ್ಡ ಸಮಸ್ಯೆಯೇ ಅಲ್ಲ. ಆದ್ರೆ, ಇವೆಲ್ಲಾ ರೂಲ್ಸ್​ಗಳ ಮಧ್ಯೆ ಈಗ ಇರಾನ್ ಸರ್ಕಾರ ಮತ್ತೊಂದು ತಲೆಬುಡವಿಲ್ಲದ ನಿಯಮ ಜಾರಿಗೆ ತಂದಿದೆ.

 

ಮಹಿಳೆಯರು ಪಿಜ್ಜಾ ತಿನ್ನುವ ಜಾಹೀರಾತುಗಳಲ್ಲಿ ಕಾಣುವಂಗಿಲ್ಲ!
ಪಿಜ್ಜಾ ಜಾಹೀರಾತಿನಲ್ಲಿ ಮಹಿಳೆಯರನ್ನು ಬಳಸಿದರೆ ಶಿಕ್ಷೆ ಫಿಕ್ಸ್​!

ಹೌದು, ಇದೇ ನೋಡಿ ಇರಾನ್​ನ ಹೊಸ ರೂಲ್ಸ್​.. ಅಲ್ಲಿನ ಪಿಜ್ಜಾ ತಿನ್ನುವ ಜಾಹೀರಾತಿನಲ್ಲಿ ಮಹಿಳೆಯರನ್ನು ತೋರಿಸುವ ಹಾಗಿಲ್ವಂತೆ.. ಇತ್ತೀಚೆಗೆ ಒಂದು ಜಾಹೀರಾತಿನಲ್ಲಿ ಒಬ್ಬ ಮಹಿಳೆ ತನ್ನ ಹಿಜಬ್​ ತೆಗೆದು ನಟಿಸಿದ್ದಳಂತೆ, ಈ ಕಾರಣಕ್ಕೆ ಅಲ್ಲಿನ ಅಧಿಕಾರಿಗಳು, ಆ ಜಾಹೀರಾತಿನ ನಿರ್ಮಾಪಕರನ್ನು ಹಾಗೂ ತಂಡವನ್ನು ಶಿಕ್ಷೆಗೆ ಗುರಿ ಮಾಡಿತ್ತು. ಆ ಪದ್ಧತಿಗೆ ಮತ್ತೊಂದು ರೂಲ್ಸ್​ ಆ್ಯಡ್​ ಆಗ್ತಾ ಇದೆ. ಪಿಜ್ಜಾ ಜೊತೆ ಸ್ಯಾಂಡ್​ವಿಚ್​ ಆಗಲೀ ಅಥವಾ ಯಾವುದೇ ಕೆಂಪು ಬಣ್ಣವಿರುವ ಪಾನಿಯಾವಾಗಲಿ ಸೇವಿಸುವುದನ್ನು ತೋರಿಸುವ ಹಾಗಿಲ್ಲ. ಹಾಗೊಂದು ವೇಳೆ ತೋರಿಸಿದರೇ ಅವರನ್ನು ಕಠಿಣ ಶಿಕ್ಷೆಗೆ ಗುರಿ ಮಾಡಲಾಗುತ್ತೆ ಅನ್ನೋದು ಇರಾನ್​ ಸರ್ಕಾರದ ಕಟ್ಟಾಜ್ಞೆ.

ಗಂಡಸರು ಸ್ತ್ರೀಯರಿಗೆ ಟೀ ಕೊಡುವ ಜಾಹಿರಾತಿಗೂ ನಿರ್ಬಂಧ!
ಹುಡುಗಿಯರು ಲೆದರ್​ ಗ್ಲೌಸ್​ ಹಾಕಿದರೂ ಅವರಿಗೆ ಪ್ರಾಬ್ಲಂ!

ನೀವು ಆಗಲೇ ನೋಡಿದ ಹಾಗೆ ಟೀ ಕುಡಿಯುವ ಜಾಹೀರಾತೊಂದರಲ್ಲಿ ಗಂಡಸರ ಸರಿಸಮರಾಗಿ ಹೆಂಗಸರು ಕೂತು ಚಹಾ ಸೇವಿಸುತ್ತಿದ್ದಾರೆ. ಆದರೆ, ಈ ಜಾಹೀರಾತು ಕೂಡ ಇರಾನ್ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.ಇನ್ಮುಂದೆ ಇರಾನ್ ದೇಶದಲ್ಲಿ ಗಂಡಸರು ಟೀ ಸರ್ವ್​ ಮಾಡುವ ಹಾಗೇ ತೋರುವ ಯಾವುದೇ ಜಾಹಿರಾತನ್ನು ನಿರ್ಮಾಣ ಮಾಡುವಂತಿಲ್ಲ. ಜೊತೆಗೆ ಹುಡುಗಿಯರು ಲೆದರ್​ ಗ್ಲೌಸ್​ ಹಾಕಿಕೊಂಡು ಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎನ್ನುತ್ತಿದೆ ಇರಾನ್​.

ಇಂತಹ ಜಾಹಿರಾತಿನಲ್ಲಿ ತಪ್ಪೇನಿದೆ ? ಯಾಕೆ ಈ ಹೊಸ ರೂಲ್ಸ್​ ? ಎನ್ನುವ ಸಹಜ ಪ್ರಶ್ನೆಯನ್ನು ನೀವು ಕೇಳಬಹುದು. ಆದರೆ ಈ ನಿರ್ಧಾರಕ್ಕೆ ಇರಾನ್​ ಸರ್ಕಾರ ಸೂಕ್ತ ಉತ್ತರವನ್ನು ನೀಡಿಲ್ಲ. ಬದಲಿಗೆ ನೇರವಾಗಿ ಇಂತಹ ಜಾಹೀರಾತುಗಳನ್ನು ನಿರ್ಮಿಸಬಾರದು ಎಂದು ಸ್ಟೇಟ್ಮೆಂಟ್​ ಕೊಡ್ತಾ ಇದೆ. ಅಷ್ಟಕ್ಕೂ ಈ ವಿಚಿತ್ರ ರೂಲ್ಸ್​ ನಿರ್ಧಾರವನ್ನು ಮಾಡಿದವಱರು ?

ಇಸ್ಲಾಮಿಕ್​ ರಿಪಬ್ಲಿಕ್​ ಆಫ್​ ಇರಾನಿಯನ್​ ಬ್ರಾಡ್​ಕಾಸ್ಟ್ ಸಮೀಕ್ಷೆ!
ಇರಾನ್​ ಸೆನ್ಸಾರ್​ ಬೋರ್ಡ್​ನಿಂದ ಈ ವಿಚಿತ್ರ ಹೇಳಿಕೆ!

ಇಸ್ಲಾಮಿಕ್​ ರಿಪಬ್ಲಿಕ್​ ಆಫ್​ ಇರಾನಿಯನ್​ ಬ್ರಾಡ್​ಕಾಸ್ಟ್​ ಎನ್ನುವ ಈ ಸೆನ್ಸಾರ್​ ಇಲಾಖೆ ಸಿನಿಮಾ ಹಾಗೂ ಜಾಹೀರಾತುಗಳನ್ನು ಪರಿಷ್ಕರಿಸಿ ಅದರಲ್ಲಿದ್ದ ಅಶ್ಲೀಲ ಹಾಗೂ ಪ್ರಚೋದನಾತ್ಮಕ ಅಂಶಗಳನ್ನು ಎಡಿಟ್​ ಮಾಡಲು ಹೇಳುತ್ತದೆ. ಅಸಲಿಗೆ ಇದೊಂದು ಸೆನ್ಸಾರ್​ ಬೋರ್ಡ್​. ಆ ಇಲಾಖೆಯ ಮುಖ್ಯಸ್ಥ ಅಮೀರ್​- ಹೊಸೇನ್​- ಶಮ್ಶದ್​ ಈ ಹೊಸ ರೂಲ್ಸ್​ ಅನ್ನು ಹೊರಡಿಸಿರೋದು.. ಇತ್ತೀಚೆಗೆ ಮಹಿಳೆಯರನ್ನು ಬಳಸಿಕೊಂಡು ಹಲವು ಜಾಹಿರಾತುಗಳು ಬರುತ್ತಿದ್ದು, ಅವುಗಳು ಬೇರೆ ಬೇರೆ ರೀತಿಯ ಬೆಳವಣಿಗೆಗಳಿಗೆ ಸ್ಫೂರ್ತಿ ತುಂಬುತ್ತೆ ಅನ್ನೋದು ಅವರ ವಾದ. ಆದರೆ, ಇದಕ್ಕಾಗಿ ಮಹಿಳೆ ಪಿಜ್ಜಾ ತಿನ್ನುವ ಆ್ಯಡ್ಸ್​​ ನಿಂತು ಹೋದರೆ.. ಎಲ್ಲಾ ಸರಿ ಹೋಗುವುದಾ ಅನ್ನೋದೇ ಈಗಿರೋ ಪ್ರಶ್ನೆ. ಇರಾನ್​ ಇತ್ತೀಚೆಗೆ ಕೆಲವು ಹೊಸ ರೂಲ್ಸ್​ಗಳನ್ನು ಜಾರಿ ಮಾಡಿದ್ದಾರೆ. ಅದರಲ್ಲಿ ಮಹಿಳೆಯರಿಗೆ ಆಸ್ಪದ ನೀಡುವ ಕೆಲವು ವಿಚಾರಗಳು ಇದ್ದರೆ, ಅವರನ್ನು ಕುಗ್ಗಿಸುವ ರೂಲ್ಸ್​ಗಳು ಇವೆ

ಇರಾನ್​ ಸ್ತ್ರೀಯರಿಗೆ ಹೊಸ ಫ್ರೀಡಂ!

ಇರಾನ್​ ಮಹಿಳೆಯರು ಒಬ್ಬೊಂಟಿಯಾಗಿ ಹೊರ ಹೋಗಬಹುದು, ನಗರದಲ್ಲಿರುವ ಸ್ಟೇಡಿಯಂಗಳಿಗೆ ತಮ್ಮ ನೆಚ್ಚಿನ ಕ್ರೀಡೆ ವೀಕ್ಷಿಸಲು ಹೋಗಬಹುದು, ಮದುವೆ ಹಾಗೂ ಪಾರ್ಟಿಯಲ್ಲಿ ಭಾಗವಹಿಸಬಹುದು ಅನ್ನೋದು ಫ್ರೀಡಂ ಆದರೆ, ಮಹಿಳೆಯರ ಗರ್ಭಪಾತದ ಮೇಲೆ ಅವರಿಗೆ ಹಕ್ಕಿಲ್ಲ ಮತ್ತು ಸಂಪಾದನೆಯಲ್ಲಿ ಮನೆಯ ಗಂಡಸರಿಗೆ ಪಾಲು ನೀಡಬೇಕು ಅನ್ನೋದು ಅವರ ಮೇಲಿರೋ ಇತ್ತೀಚಿನ ನಿರ್ಭಂದ.

ಈ ನಿರ್ಭಂದದ ಜೊತೆ ಹೊಸದಾಗಿ ಜಾಹಿರಾತಿನ ರೂಲ್ಸ್​ ಸೇರಿಕೊಂಡಿದೆ. ಪಿಜ್ಜಾ ತಿನ್ನುವ ಜಾಹಿರಾತಿನಲ್ಲಿ ಮಹಿಳೆಯ ತೆರೆದ ಬಾಯಿ ಕಾಣಿಸುತ್ತದೆ, ಅಲ್ಲದೆ ಒಬ್ಬ ಪುರುಷ ಮಹಿಳೆಗೆ ಟೀ ಸರ್ವ್​ ಮಾಡಿದರೆ ಅಥವಾ ಮಹಿಳೆ ಲೆದರ್​​ ಗ್ಲೌಸ್​ ಧರಿಸಿದರೆ ಅದನ್ನು ಪ್ರಬಲ್ಯ ತೋರಿಸದಂತಾಗುತ್ತದೆ ಅನ್ನೋದು ಅವರ ನಂಬಿಕೆ ಎಂದು ತಜ್ಞರು ಹೇಳುತ್ತಾರೆ. ಆದರೆ ಅದು ಇರಾನ್​ ಸರ್ಕಾರದ ಮೂಢತನವನ್ನು ಎತ್ತಿ ಹಿಡಿಯುತ್ತಿದೆ.

ಕೇವಲ ಜಾಹಿರಾತು ಎಂದು ಈ ವಿಚಾರದಲ್ಲಿ ಕಡೆಗಣಿಸಬಹುದು, ಆದರೆ ಆ ರೂಲ್ಸ್​ ತಂದಿರುವವರ ಹಿಂದಿನ ಮನಸ್ಥಿತಿಯನ್ನು ನೆನೆದರೆ ಇರಾನ್​ನಲ್ಲಿನ ಮಹಿಳೆಯರ ಬಗ್ಗೆ ಕನಿಕರ ಹುಟ್ಟುತ್ತದೆ. ಇನ್ನು ಆ ದೇಶದ ಮಹಿಳೆಯರು ಒಬ್ಬರ ಕೈಗೊಂಬೆಯಾಗಿದ್ದಾರೆ ಎಂದರೇ ನಿಜಕ್ಕೂ ವಿಷಾದನೀಯ.

News First Live Kannada

Leave a comment

Your email address will not be published. Required fields are marked *