ಈ ನಾಡಿನ ಜನತೆಯನ್ನು ಭಿಕಾರಿ ಮಾಡುವುದು ನಿಲ್ಲಿಸಿ, ಜನರಿಗೆ ಸ್ವಂತ ದುಡಿಮೆ ಕೊಡಬೇಕಿದೆ: ಮಾಜಿ ಸಿಎಂ ಕುಮಾರಸ್ವಾಮಿ | JDS leader, Ex CM HD Kumaraswamy at Dharwad during legislative council election canvass meeting


ಈ ನಾಡಿನ ಜನತೆಯನ್ನು ಭಿಕಾರಿ ಮಾಡುವುದು ನಿಲ್ಲಿಸಿ, ಜನರಿಗೆ ಸ್ವಂತ ದುಡಿಮೆ ಕೊಡಬೇಕಿದೆ:  ಮಾಜಿ ಸಿಎಂ  ಕುಮಾರಸ್ವಾಮಿ

ಈ ನಾಡಿನ ಜನತೆಯನ್ನು ಭಿಕಾರಿ ಮಾಡುವುದು ನಿಲ್ಲಿಸಿ, ಜನರಿಗೆ ಸ್ವಂತ ದುಡಿಮೆ ಕೊಡಬೇಕಿದೆ: ಮಾಜಿ ಸಿಎಂ ಕುಮಾರಸ್ವಾಮಿ

ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ಆಕಸ್ಮಿಕವಾಗಿ ಮುಖ್ಯಮಂತ್ರಿಯೂ ಆದೆ. ಸಿಎಂ ಆಗಿ ಕೆಲಸ ಮಾಡಿದ್ದೇನೆ. ಬೇರೆಯವರ ರೀತಿ ದುರಂಹಕಾರ ತೋರಿಸಲಿಲ್ಲ. ಅದೆಂತಹುದೋ ಪುಕ್ಕಟ್ಟೆ ಅಕ್ಕಿ ಅಂತೆ! ಐದು ಕೆಜಿ ಅಕ್ಕಿಯನ್ನು ಹತ್ತು ಕೆಜಿ ಅಂತೆಲ್ಲ ನಾನು ಹೇಳೋದಿಲ್ಲ – ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಧಾರವಾಡ: ಧಾರವಾಡದಲ್ಲಿ ನಡೆದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಪ್ರಚಾರ ಸಭೆಯಲ್ಲಿ (Legislative Council Election) ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (Ex CM HD Kumaraswamy) ಅವರು ಸಿದ್ದರಾಮಯ್ಯ (Siddaramaiah) ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಹೆಸರು ಹೇಳದೇ ಅಕ್ಕಿ ಯೋಜನೆ ಪ್ರಸ್ತಾಪಿಸಿ, ಈ ನಾಡಿನ ಜನತೆಯನ್ನು ಭಿಕಾರಿ ಮಾಡುವುದು ನಿಲ್ಲಿಸಿ, ಜನರಿಗೆ ಸ್ವಂತ ದುಡಿಮೆ ಕೊಡಬೇಕಿದೆ ಎಂದಿದ್ದಾರೆ.

2023ಕ್ಕೆ ಯಾರು ಏನೇ ಹೇಳಲಿ ಜೆಡಿಎಸ್ ಪಕ್ಷ ಮತ್ತೆ ಬರುತ್ತೆ. 2023ರಲ್ಲಿ ನಾಡಿನ ಜನರ ಜೀವನ ಸರಿಪಡಿಸುವ ಸರ್ಕಾರ ಬರುತ್ತೆ. ಅಂತಹ ಒಂದು ಆತ್ಮವಿಶ್ವಾಸ ಇದೆ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ಆಕಸ್ಮಿಕವಾಗಿ ಮುಖ್ಯಮಂತ್ರಿಯೂ ಆದೆ. ಸಿಎಂ ಆಗಿ ಕೆಲಸ ಮಾಡಿದ್ದೇನೆ. ಬೇರೆಯವರ ರೀತಿ ದುರಂಹಕಾರ ತೋರಿಸಲಿಲ್ಲ. ಅದೆಂತಹುದೋ ಪುಕ್ಕಟ್ಟೆ ಅಕ್ಕಿ ಅಂತೆ! ಐದು ಕೆಜಿ ಅಕ್ಕಿಯನ್ನು ಹತ್ತು ಕೆಜಿ ಅಂತೆಲ್ಲ ನಾನು ಹೇಳೋದಿಲ್ಲ. ಈ ನಾಡಿನ ಜನತೆಯನ್ನು ಭಿಕಾರಿ ಮಾಡುವುದು ನಿಲ್ಲಿಸಿ, ನಾಡಿನ ಜನರಿಗೆ ಸ್ವಂತ ದುಡಿಮೆ ಕೊಡಬೇಕಿದೆ. ಮತ್ತೊಬ್ಬರಿಗೆ ಸಹಾಯ ಮಾಡೋ ಶಕ್ತಿ ಕೊಡುವುದು ನನ್ನ ಕಾರ್ಯಕ್ರಮ. ಎಷ್ಟು ದಿನ ಪುಕ್ಕಟ್ಟೆ ಅಕ್ಕಿ ಕೊಟ್ಟು ಅದೇ ಜಾಗದಲ್ಲಿ ಇಡ್ತೀರಿ? ಅವರನ್ನು ಆರ್ಥಿಕವಾಗಿ, ಶಕ್ತಿಯುತವಾಗಿ ಬೆಳೆಸಲು ಸಾಧ್ಯವಿಲ್ಲವಾ? ಜನರಿಗೆ ಶಕ್ತಿ ತುಂಬಿಸುವುದು ನನ್ನ ಕಾರ್ಯಕ್ರಮ. ಅವರನ್ನು ಆರ್ಥಿಕವಾಗಿ ಬೆಳೆಸಲು ಸಾಧ್ಯ ಇಲ್ಲವಾ? ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಪ್ರಶ್ನಿಸಿದರು.

ಹೊರಟ್ಟಿಗೆ ಬೇರೆ ಕಡೆ ಹೋದರೆ ಅನುಕೂಲ ಎನ್ನುವ ಭಾವನೆ ಇತ್ತೇನೋ…

ಹೊರಟ್ಟಿ ಪಕ್ಷ ಬಿಟ್ಟ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಪಕ್ಷ ಬಿಡುತ್ತೇನೆ ಅಂದವರಿಗೆ ಏನು ಹೇಳಬೇಕು? ಹೋಗುತ್ತೇನೆ ಅನ್ನೋರನ್ನು ತಡೆಯಲು ಆಗುತ್ತಾ? ಒಳ್ಳೆ ಭವಿಷ್ಯಕ್ಕೆ ಹೋಗಿರಬಹುದು. ವೈಯಕ್ತಿಕವಾಗಿ ಯಾರ ಭವಿಷ್ಯ ಹಾಳಾಗಲಿ ಎಂದು ಬಯಸೋಲ್ಲ. ಬೇರೆ ಕಡೆ ಹೋದರೆ ಅನುಕೂಲ ಎನ್ನುವ ಭಾವನೆ ಇತ್ತು. ಹಾಗಿದ್ದಾಗ ಅವರ ಭವಿಷ್ಯ ನಾನೇಕೆ ಹಾಳು ಮಾಡಲಿ? ಎಂದು ಭಾಷಣದಲ್ಲಿ ಕುಮಾರಸ್ವಾಮಿ ಹೇಳಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *