ಈ ಫೋಟೋದಲ್ಲಿರುವ ಖ್ಯಾತ ನಟ-ನಟಿ ಯಾರು ಎಂದು ಗುರುತಿಸುತ್ತೀರಾ? | Janhvi Kapoor And Arjun Kapoor Childhood Photo goes viral


ಈ ಫೋಟೋದಲ್ಲಿರುವ ಖ್ಯಾತ ನಟ-ನಟಿ ಯಾರು ಎಂದು ಗುರುತಿಸುತ್ತೀರಾ?

ಖ್ಯಾತ ನಟ-ನಟಿ ಯಾರು ಎಂದು ಗುರುತಿಸುತ್ತೀರಾ?

ಸೆಲೆಬ್ರಿಟಿಗಳು ಕೆಲವೊಮ್ಮೆ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದನ್ನು ನೋಡೋಕೆ ಅಭಿಮಾನಿಗಳಿಗೂ ಕುತೂಹಲ ಇರುತ್ತದೆ. ಈಗ ಬಾಲಿವುಡ್​ನ ನಟ-ನಟಿಯ ಬಾಲ್ಯದ​ ಫೋಟೋ (Childhood Photo) ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಕೆಲ ಫ್ಯಾನ್ಸ್ ‘ಇದು ಯಾರು ಎಂದು ಗುರುತಿಸಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇವರು ಬೇರಾರೂ ಅಲ್ಲ ಅರ್ಜುನ್ ಕಪೂರ್ (Arjun Kapoor) ಹಾಗೂ ಜಾನ್ವಿ ಕಪೂರ್ (Janhvi Kapoor).

ಜಾನ್ವಿ ಕಪೂರ್ ಮತ್ತು ಅರ್ಜುನ್ ಕಪೂರ್ ಇಬ್ಬರೂ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರ ಮಕ್ಕಳು. ಇವರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಅರ್ಜುನ್ ಕಪೂರ್ ಅವರು ಬೋನಿ ಕಪೂರ್ ಹಾಗೂ ಮೋನಾ ಕಪೂರ್ ಮಗ. ಜಾನ್ವಿ ಕಪೂರ್ ಬೋನಿ ಕಪೂರ್ ಹಾಗೂ ಶ್ರೀದೇವಿ ಮಗಳು. ಅರ್ಜುನ್ ಹಾಗೂ ಜಾನ್ವಿ ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಾಕಷ್ಟು ಬೇಡಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ. ಅರ್ಜುನ್ ಹಾಗೂ ಜಾನ್ವಿ ಇಬ್ಬರೂ ನಿಂತಿರುವ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ ಬೋನಿ ಕಪೂರ್.

‘ಖುಷಿ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಅಮೆರಿಕಕ್ಕೆ ತೆರಳಿದ್ದರು ಜಾನ್ವಿ ಹಾಗೂ ಅರ್ಜುನ್. ಅರ್ಜುನ್ ಅವರು ಜಾನ್ವಿ ಅವರ ಜಡೆಯನ್ನು ಹಿಡಿದುಕೊಂಡು ನಿಂತಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ‘ಫೋಟೋ ತುಂಬಾನೇ ಕ್ಯೂಟ್​ ಆಗಿದೆ’ ಎಂದು ಬರೆದುಕೊಂಡಿದ್ದಾರೆ. ‘ಜಾನ್ವಿ ಜತೆ ಅರ್ಜುನ್ ಕಪೂರ್ ಬಾಲ್ಯವನ್ನು ಇಷ್ಟು ಸುಂದರವಾಗಿ ಕಳೆದಿದ್ದರು ಎಂಬುದು ಗೊತ್ತಿರಲಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ಫೋಟೋಗೆ ಜಾನ್ವಿ ಹಾಗೂ ಅರ್ಜುನ್ ಪ್ರತಿಕ್ರಿಯಿಸಿಲ್ಲ.

ಜಾನ್ವಿ ಕಪೂರ್ ಅವರು ವೆಕೇಶನ್​ ಮೂಡ್​ನಲ್ಲಿದ್ದಾರೆ. ಅವರು ಊಟಿಗೆ ತೆರಳಿದ್ದಾರೆ. ಅಲ್ಲಿ ಟೀ ಪ್ಲ್ಯಾಂಟೇಷನ್​ನಲ್ಲಿ ಅವರು ಸಮಯ ಕಳೆದಿದ್ದಾರೆ. ಸಾಕಷ್ಟು ಅಡ್ವೆಂಚರ್ ಗೇಮ್​ಗಳನ್ನು ಆಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಾನ್ವಿ ಕಪೂರ್ ಅವರು ಸ್ಟಾರ್ ಕಿಡ್. ಈ ಕಾರಣಕ್ಕೆ ಅವರಿಗೆ ಸುಲಭವಾಗಿ ಬಾಲಿವುಡ್​ಗೆ ಎಂಟ್ರಿ ಸಿಕ್ಕಿದೆ. ಮೊದಲ ಸಿನಿಮಾ ‘ಧಡಕ್’ ಮೂಲಕ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಆದರೆ, ದೊಡ್ಡ ಗೆಲುವನ್ನು ಅವರು ಕಂಡಿಲ್ಲ.

ಅರ್ಜುನ್ ಕಪೂರ್ ಅವರು ಮಲೈಕಾ ಅರೋರಾ ಜತೆ ಸುತ್ತಾಟ ನಡೆಸುತ್ತಿದ್ದಾರೆ. ಮಲೈಕಾ ಅವರಿಗೆ ಇತ್ತೀಚೆಗೆ ಕಾರು ಅಪಘಾತ ಸಂಭವಿಸಿತ್ತು. ಈ ವೇಳೆ ಅವರಿಗೆ ಗಾಯಗಳು ಆಗಿದ್ದವು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿತ್ತು. ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದರು. ಅವರ ನಿವಾಸದಲ್ಲಿ ಅರ್ಜುನ್ ಕಪೂರ್ ಕಾಣಿಸಿಕೊಂಡಿದ್ದರು.  

TV9 Kannada


Leave a Reply

Your email address will not be published.