ಈ ಬಗ್ಗೆ ರಾಹುಲ್​​ ದ್ರಾವಿಡ್​​, ಅಜಿಂಕ್ಯಾ ರಹಾನೆ ದಿಢೀರ್​​ ಅಸಮಾಧಾನ ಹೊರಹಾಕಿದ್ದೇಕೆ?

ನ್ಯೂಜಿಲೆಂಡ್​ ​​ವಿರುದ್ಧ ಟಿ20 ಕ್ರಿಕೆಟ್​ ಸರಣಿ ಗೆದ್ದ ಬೆನ್ನಲ್ಲೀಗ ಟೀಂ ಇಂಡಿಯಾ ಮತ್ತೊಂದು ಸವಾಲಿಗೆ ರೆಡಿಯಾಗಿದೆ. ನಾಯಕ ಅಜಿಂಕ್ಯಾ ರಹಾನೆ ನೇತೃತ್ವದ ಟೀಮ್​​ ಇಂಡಿಯಾ ಇದೇ ತಿಂಗಳು ನವೆಂಬರ್​​ 25ರಿಂದ ನ್ಯೂಜಿಲೆಂಡ್​ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್​​ ಪಂದ್ಯಕ್ಕಾಗಿ ಉತ್ತರ ಪ್ರದೇಶದ ಕಾನ್ಪುರ್​ ತಲುಪಿದೆ.

ಇನ್ನು, ಭಾರತ ಮತ್ತು ಟೀಂ ಇಂಡಿಯಾ ಗ್ರೀನ್​ ಪಾರ್ಕ್ ತಲುಪಿವೆ. ಕೋವಿಡ್​ನಿಂದಾಗಿ ಬಯೋಬಬಲ್​ನಲ್ಲಿರುವ ಭಾರತ ಅಭ್ಯಾಸ ಶುರು ಮಾಡಿದೆ. ಇದರ ಬೆನ್ನಲ್ಲೇ ಕೋಚ್​ ದ್ರಾವಿಡ್ ಹಾಗೂ ಕ್ಯಾಪ್ಟನ್ ರಹಾನೆ ಪಿಚ್​​ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಸ್ಟೇಡಿಯಂ ಪಿಚ್​ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

​​ಬಯೋ ಬಬಲ್ ಬ್ರೇಕ್ ಮಾಡಬೇಡಿ ಎಂದು ಬಿಸಿಸಿಐ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ. ಹೀಗಿದ್ದರೂ ನಾಯಕ ಅಜಿಂಕ್ಯಾ ರಹಾನೆ ಹಾಗೂ ಕೋಚ್​ ರಾಹುಲ್​ ದ್ರಾವಿಡ್​ ಈ ರೂಲ್ಸ್​ ಬ್ರೇಕ್​​ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

News First Live Kannada

Leave a comment

Your email address will not be published. Required fields are marked *