ಅದ್ಯಾಕೋ ಏನೋ ಸ್ಯಾಂಡಲ್​ವುಡ್​ನ ಗೋಲ್ಡನ್ ಸ್ಟಾರ್ ಗಣೇಶ್​ ಬರ್ತ್​ಡೇ ಕಳೆದ ಮೂರು ವರ್ಷದಿಂದ ಆಚರಣೆ ಮಾಡಲು ಆಗುತ್ತಲೇ ಇಲ್ಲ. ಈ ವರ್ಷವೂ ಗಣೇಶ್ ತಮ್ಮ ಜನ್ಮದಿನದಂದು ಗೋಲ್ಡನ್ ಫ್ಯಾನ್ಸ್​​ ಜೊತೆಗೆ ಬರ್ತ್​ಡೇ ಸೆಲೆಬ್ರೇಷನ್ ಮಾಡಿಕೊಳ್ತಿಲ್ಲ.

ಕಾರಣ ನಮಗೂ ಗೊತ್ತು ನಿಮಗೂ ಗೊತ್ತು. ಸರ್ಕಾರದ ಕೋವಿಡ್ ನಿಬಂಧನೆಗಳು ಹಾಗೂ ಗಣೇಶ್​​ಗೆ ಆಗಿರೋ ಆ ನೋವು ಹಾಗೂ ಸಾಮಾಜಿಕ ಕಳಕಳಿ ಮತ್ತು ಅಭಿಮಾನಿಗಳ ಯೋಗ ಕ್ಷೇಮ.  ಗಣೇಶ್ ಈ ಬಾರಿ ಅಭಿಮಾನಿಗಳಿಗೆ ತಮ್ಮ ಬರ್ತ್​ಡೇ ಸಂಭ್ರಮವನ್ನ ಆಚರಿಸದಿರಲು ನೀಡುವ ಕಾರಣವೇನು ಅನ್ನೋ ಪತ್ರವನ್ನ ಓದಿ..

ಗೆ,
ಪ್ರೀತಿಯ ಅಭಿಮಾನಿ
ಗೆಳೆಯರಿಗೆ
ವಿಷಯ : ಹುಟ್ಟುಹಬ್ಬದ ಅನುಪಸ್ಥಿತಿ ಬಗ್ಗೆ
ಎಲ್ಲರಿಗೂ ನಿಮ್ಮ ಗಣೇಶ್ ಮಾಡುವ ನಮಸ್ಕಾರಗಳು. ಮೊದಲಿಗೆ ನನಗೆ ಅರಿವಿದ್ದೊ, ಅರಿವಿಲ್ಲದೆಯೋ ಈ ಕೋವಿಡ್ ಸಮಯದಲ್ಲಿ ನನ್ನ ಹೆಸರಿನಲ್ಲಿ ಮಾಡಿರುವ ಕೆಲಸಗಳಿಗೆ ನಿಮಗೆ ಪ್ರಣಾಮಗಳು. ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಪ್ರತಿ ವರ್ಷವೂ ನನ್ನ ಜನ್ಮದಿನವನ್ನ ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿರುವಿರಿ. ಆದರೆ ಈ ವರ್ಷ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಿಕ್ಕು ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು , ಆತ್ಮೀಯರು , ಗೆಳೆಯರು ಬಲಿಯಾದದ್ದು ನೋವು ತರಿಸಿದೆ. ಅದೆಷ್ಟೋ ಜನರ ಜೀವನಗಳು ನಲುಗಿ ಹೋಗಿವೆ. ಇಷ್ಟೆಲ್ಲ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲವೆಂದಿನಿಸಿ ಈ ವರ್ಷದ ಜನ್ಮದಿನವನ್ನ ಆಚರಿಸಿಕೊಳ್ಳದಿರಲು ಇಚ್ಛಿಸಿರುತ್ತೇನೆ.. ಅಲ್ಲದೇ ಜನ್ಮದಿನದಂದು ನಾನು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿರುತ್ತೇನೆ. ಪ್ರತಿ ವರ್ಷವೂ ಪ್ರೀತಿಯಿಂದ ಹುಟ್ಟು ಹಬ್ಬ ಆಚರಣೆಗೆ ನೀವುಗಳು ಪ್ರೀತಿಯಿಂದ ತರುವ ಕೇಕ್ , ಹಾರ , ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೆ ಅದೇ ಖರ್ಚಿನ ಮೊತ್ತವನ್ನ ಕೊರೊನಾ ಸಂಕಷ್ಟದಲ್ಲಿರುವ ಮತ್ತಷ್ಟು ಜೀವಿಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ.. ಅದೇ ನನಗೆ ಶ್ರೀರಕ್ಷೆ
ಇಂತಿ ನಿಮ್ಮವ
ಗಣೇಶ್

ಇದು ಗಣೇಶ್ ಅವರ ಮನದಾಳದ ಮನವಿಯ ಪತ್ರ. ಗಣೇಶ್ ತಮ್ಮ 42ನೇ ಬರ್ತ್​ಡೇ ದಿನ ಅಭಿಮಾನಿಗಳನ್ನ ಮೀಟ್ ಆಗದಿದ್ದರು ಟೀಸರ್ ಮತ್ತು ಹೊಸ ಹೊಸ ಸಿನಿಮಾಗಳ ಪೋಸ್ಟರ್ ಮೂಲಕ ದರ್ಶನ ಕೊಡೋ ಸಾಧ್ಯಗಳಿವೆ. ಸಖತ್, ತ್ರಿಬಲ್ ರೈಡಿಂಗ್, ಗಾಳಿಪಟ-2 ಸೇರಿದಂತೆ ಮುಂತಾದ ಹೊಸ ಸಿನಿಮಾಗಳಲ್ಲಿ ಗಣೇಶ್ ಅಭಿನಯ ಮಾಡ್ತಿದ್ದಾರೆ.

The post ಈ ಬಾರಿಯೂ ಬರ್ತ್​ಡೇ ಆಚರಿಸೋದಿಲ್ಲ ಗೋಲ್ಡನ್ ಸ್ಟಾರ್ appeared first on News First Kannada.

Source: newsfirstlive.com

Source link