ಈ ಬಾರಿಯ ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಎಷ್ಟು ಗಂಟೆಗೆ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಉತ್ತರ | Bigg Boss OTT Kannada Show Starting time and where to watch Bigg Boss OTT


ಟಿವಿಯಲ್ಲಿ ಪ್ರಸಾರ ಆಗುವಾಗ ‘ಬಿಗ್ ಬಾಸ್’ ಹೇಗಿತ್ತೋ ವೂಟ್​ನಲ್ಲೂ ಬಹುತೇಕ ಅದೇ ರೀತಿ ಇರಲಿದೆ. ವಾರಾಂತ್ಯದಲ್ಲಿ ಸುದೀಪ್ ಅವರು ಆಗಮಿಸಿ ‘ಬಿಗ್ ಬಾಸ್’ನಲ್ಲಿ ಪಂಚಾಯ್ತಿ ಮಾಡಲಿದ್ದಾರೆ.

ಈ ಬಾರಿಯ ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಎಷ್ಟು ಗಂಟೆಗೆ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಉತ್ತರ

ಬಿಗ್ ಬಾಸ್

ಹೊಸ ವಿನ್ಯಾಸದೊಂದಿಗೆ ಈ ಬಾರಿಯ ‘ಬಿಗ್ ಬಾಸ್’ ಒಟಿಟಿಯಲ್ಲಿ (Bigg Boss) ಪ್ರಸಾರ ಕಾಣುತ್ತಿದೆ. ಈ ಕಾರಣಕ್ಕೆ ಶೋಗೆ ‘ಬಿಗ್ ಬಾಸ್ ಒಟಿಟಿ’ ಎಂದೇ ಹೆಸರು ಇಡಲಾಗಿದೆ. ಪ್ರತಿ ವರ್ಷ ‘ಬಿಗ್ ಬಾಸ್’ ಟಿವಿಯಲ್ಲಿ ಪ್ರಸಾರ ಕಾಣುತ್ತಿತ್ತು. ಆದರೆ, ಈ ಬಾರಿ ಆ ಆಯ್ಕೆ ಇಲ್ಲ. ಪ್ರತಿ ವರ್ಷದಂತೆ ಸುದೀಪ್ ಅವರು ‘ಬಿಗ್ ಬಾಸ್’ ನಡೆಸಿಕೊಡಲಿದ್ದಾರೆ. ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ವೀಕ್ಷಿಸೋದು ಎಲ್ಲಿ?

ಈ ಬಾರಿ ‘ಬಿಗ್ ಬಾಸ್​’ ಅನ್ನು ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದು. ವೂಟ್ ಆ್ಯಪ್​​ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಇಲ್ಲವಾದರೆ, ನೀವು ‘ಬಿಗ್ ಬಾಸ್’ ನೋಡಲು ಆಗುವುದಿಲ್ಲ. ದಿನದ 24 ಗಂಟೆ ವೂಟ್ ಆ್ಯಪ್​ನಲ್ಲಿ ಲೈವ್ ವೀಕ್ಷಿಸಬಹುದು. ಇದರ ಜತೆಗೆ ನಿತ್ಯ ಏನೆಲ್ಲ ಆಯಿತು ಎಂಬುದನ್ನು ಒಂದು ಅಥವಾ ಒಂದೂವರೆ ಗಂಟೆ ಸಂಚಿಕೆ ಮೂಲಕ ಪ್ರೇಕ್ಷಕರ ಎದುರು ಇಡಲಾಗುತ್ತದೆ. ಈ ಸಂಚಿಕೆ ಪ್ರಸಾರದ ಸಮಯ ಇನ್ನಷ್ಟೇ ನಿಗದಿ ಆಗಬೇಕಿದೆ. ಶನಿವಾರ (ಆಗಸ್ಟ್ 6) ಮೊದಲ ಸಂಚಿಕೆ 7 ಗಂಟೆಯಿಂದ ಪ್ರಸಾರ ಕಾಣಲಿದೆ.

ಟಿವಿಯಲ್ಲಿ ಯಾವಾಗ

‘ಬಿಗ್ ಬಾಸ್ ಒಟಿಟಿ’ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ. ಆದರೆ, ಈ ಸೀಸನ್ ಮುಗಿದ ಬಳಿಕ ಟಿವಿಯಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಿದೆ. ‘ಬಿಗ್ ಬಾಸ್’ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ ಎಂಬ ಬಗ್ಗೆ ಅನೇಕರಿಗೆ ಬೇಸರವಿದೆ. ಅಂಥವರು ಒಂದೂವರೆ ತಿಂಗಳು ಕಾಯಲೇಬೇಕು. ಈ ಸೀಸನ್ ಮುಗಿದ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಲಿದೆ.

ವಾರಾಂತ್ಯಕ್ಕೆ ಸುದೀಪ್

ಟಿವಿಯಲ್ಲಿ ಪ್ರಸಾರ ಆಗುವಾಗ ‘ಬಿಗ್ ಬಾಸ್’ ಹೇಗಿತ್ತೋ ವೂಟ್​ನಲ್ಲೂ ಬಹುತೇಕ ಅದೇ ರೀತಿ ಇರಲಿದೆ. ವಾರಾಂತ್ಯದಲ್ಲಿ ಸುದೀಪ್ ಅವರು ಆಗಮಿಸಿ ‘ಬಿಗ್ ಬಾಸ್’ನಲ್ಲಿ ಪಂಚಾಯ್ತಿ ಮಾಡಲಿದ್ದಾರೆ. ಈ ಬಾರಿಯ ಎಪಿಸೋಡ್​ನಲ್ಲೂ ಸುದೀಪ್ ಖಡಕ್ ನಿರೂಪಣೆ ಗಮನ ಸೆಳೆಯಲಿದೆ.

ಬಿಗ್ ಬಾಸ್ ಮನೆಯಲ್ಲಿ ಬದಲಾವಣೆ

TV9 Kannada


Leave a Reply

Your email address will not be published. Required fields are marked *