ಈ ಬಾರಿ ಕೂಟದಲ್ಲಿ ಒಲಿಂಪಿಕ್ಸ್ ಮಾದರಿಯ ತಂತ್ರಜ್ಞಾನ ಬಳಕೆ


ಮಂಗಳೂರು:  ಕಂಬಳ.. ಕರಾವಳಿ ಭಾಗದ ಅಪ್ಪಟ ಗ್ರಾಮೀಣ ಕ್ರೀಡೆ. ತುಳುನಾಡ ಸಂಸ್ಕೃತಿಯ ಭಾಗವೇ ಆಗಿ ಹೋಗಿರೋ ಕಂಬಳದ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಸದ್ಯ ಈ ದೇಸಿ ಕ್ರೀಡೆಗೆ ಸದ್ಯ ಹೈಟೆಕ್ ಟೆಕ್ನಾಲಜಿಯ ಸ್ಪರ್ಶ ಸಿಗಲಿದೆ. ಕಂಬಳದಲ್ಲಿ ಒಲಂಪಿಕ್ ಮಾದರಿಯ ತಂತ್ರಜ್ಞಾನ ಬಳಸಲು ಸಿದ್ಧತೆ ನಡೆದಿದೆ. ಅಷ್ಟಕ್ಕೂ ಯಾವುದು ಆ ತಂತ್ರ ಅಂತೀರಾ.


ಕಂಬಳ.. ಕರಾವಳಿ ಜನರ ಸಾಂಸ್ಕೃತಿಕ ಕ್ರೀಡಾಹಬ್ಬ.. ಕೆಸರುಗದ್ದೆಯ ಅಖಾಡಕ್ಕೆ ಕೋಣಗಳನ್ನು ಇಳಿಸಿ, ತಮ್ಮ ಕೋಣವೇ ಗೆಲ್ಲಬೇಕೆಂದು ಪಟ್ಟುಹಿಡಿದು ಬಿರುಸಿನ ಓಟ ಓಡುತ್ತಾರೆ.. ಬೇರೆ ಯಾವ ಕ್ರೀಡೆಗಳಿಗೂ ಇರದಷ್ಟು ಕ್ರೇಜ್​ ಕಂಬಳಕ್ಕೆ ಕರಾವಳಿ ಭಾಗದಲ್ಲಿದೆ.. ಕರಾವಳಿಗರ ಜೀವನದ ಅವಿಭಾಜ್ಯ ಅಂಗವೇ ಆಗಿರುವ ಕಂಬಳಕ್ಕೆ ಸದ್ಯ ಹೈಟೆಕ್ ಟೆಕ್ನಾಲಜಿಯ ಸ್ಪರ್ಶ ನೀಡಲು ಸಿದ್ಧತೆಗಳು ನಡೆದಿವೆ.

ಕಂಬಳಕ್ಕೆ ಹೈಟೆಕ್ ತಂತ್ರಜ್ಞಾನ
ಕಂಬಳ ಕ್ರೀಡೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ
ನಿಖರ ರಿಸಲ್ಟ್ ನೀಡಲು ಹೈಟೆಕ್ ತಂತ್ರಜ್ಞಾನ ಬಳಕೆ
ಕಂಬಳದಲ್ಲಿ ಒಲಿಂಪಿಕ್ಸ್ ಮಾದರಿಯ ಸೆನ್ಸರ್ ಬಳಕೆ
ಹೈಟೆಕ್ ಲೇಸರ್ ಬೀಮ್ ನೆಟ್ ವರ್ಕ್ ಸೆನ್ಸರ್ ಬಳಕೆ
ಫೋಟೋ ಫಿನಿಶ್ ರಿಸಲ್ಟ್ ನಿಖರವಾಗಿ ಹೇಳಲಿರುವ ಸೆನ್ಸರ್

ಜನಪದ ಕ್ರೀಡೆ ಕಂಬಳದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ನಿರ್ಧರಿಸಲಾಗಿದೆ. ಕಂಬಳ ಓಟದಲ್ಲಿ ನಿಖರ ಫಲಿತಾಂಶ ಪಡೆಯಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ. ಕಂಬಳದಲ್ಲಿ ಒಲಿಂಪಿಕ್ಸ್ ಮಾದರಿಯ ಸೆನ್ಸರ್ ಬಳಸಲು ಮುಂದಾಗಿದ್ದು, ಹೈಟೆಕ್ ಲೇಸರ್ ಬೀಮ್ ನೆಟ್ ವರ್ಕ್ ಸೆನ್ಸರ್ ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಈ ಸೆನ್ಸಾರ್ ಸಹಾಯದಿಂದ ಫೋಟೋ ಫಿನಿಶ್ ರಿಸಲ್ಟ್​ನಲ್ಲಿ ನಿಖರ ಫಲಿತಾಂಶವನ್ನು ಪಡೆಯಬಹುದಾಗಿದೆ.

ಕಂಬಳ ಕ್ರೀಡಾಕೂಟದ ಫಲಿತಾಂಶದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ತಂತ್ರಜ್ಞಾನದ ಅಳವಡಿಕೆಗೆ ನಿರ್ಧರಿಸಲಾಗಿದೆ. ಕಂಬಳೋತ್ಸವಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಕರಾವಳಿಗರು ಕೋಣಗಳ ಓಟವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ

News First Live Kannada


Leave a Reply

Your email address will not be published. Required fields are marked *