ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪಿಡುಗು ತೀವ್ರವಾಗಿರುವ ಹಿನ್ನೆಲೆ ಇಡೀ ರಾಜ್ಯ ಚಿಂತಾಜನಕ ಸ್ಥಿತಿಯಲ್ಲಿದೆ, ಹೀಗಾಗಿ ಈ ಬಾರಿ ಯಾರೂ ನನ್ನ ಜನ್ಮದಿನ ಆಚರಿಸಬಾರದು ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಆ ದಿನ ಊರಲ್ಲಿ ಇರುವುದಿಲ್ಲ..

ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಬಂಧು-ಬಳಗದವರು ಯಾರೂ ಸಹ ನನ್ನ ಜನ್ಮದಿನದ ಆಚರಣೆ ಮಾಡಬೇಡಿ.. ರಾಜ್ಯ ತೀವ್ರ ಸಂಕಷ್ಟ ಸಮಯ ಎದುರಿಸುತ್ತಿದೆ. ಕೊರೊನಾ ರುದ್ರತಾಂಡವ ಆಡುತ್ತಿದೆ. ಈ ಸಮಯದಲ್ಲಿ ಸಂಭ್ರಮಾಚರಣೆ ವಿಹಿತವಲ್ಲ. ಹೀಗಾಗಿ ಈ ಬಾರಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ನೀವೂ ಸಹ ನನ್ನ ಜನ್ಮದಿನ ಆಚರಿಸುವುದಾಗಲಿ, ಶುಭಾಶಯ ಕೋರುವುದಾಗಲಿ, ಶುಭಾಶಯ ಕೋರಲು ದೂರವಾಣಿ ಕರೆ ಮಾಡುವುದಾಗಲಿ ಬೇಡ.

ಆ ದಿನ ಊರಲ್ಲಿ ಇರುವುದಿಲ್ಲ. ಹೀಗಾಗಿ ಯಾರೂ ಕೂಡ ಶುಭಾಶಯ ಕೋರಲು ನಿವಾಸದ ಬಳಿ ಬರುವುದು ಬೇಡ. ಮಾಧ್ಯಮಗಳಲ್ಲಿ ನನಗೆ ಶುಭಾಶಯ ಕೋರಿ ಯಾರೊಬ್ಬರೂ ಜಾಹೀರಾತು ನೀಡಬಾರದು. ರಿಸ್ಥಿತಿಯ ಗಂಭೀರತೆ ಅರಿತು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಯಾರು ಕೂಡ ಈ ವಿಚಾರದಲ್ಲಿ ತಪ್ಪು ಭಾವಿಸಬಾರದು. ನಿಮ್ಮ ಪ್ರೀತಿ, ವಿಶ್ವಾಸ, ಆಶೀರ್ವಾದ ನನ್ನ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಧ್ಯಮ ಹೇಳಿಕೆ ಮೂಲಕ ಡಿ. ಕೆ. ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.

The post ‘ಈ ಬಾರಿ ನನ್ನ ಬರ್ತ್​ಡೇ ಆಚರಿಸಬೇಡಿ’.. ಡಿ. ಕೆ. ಶಿವಕುಮಾರ್ ನಿರ್ಧಾರಕ್ಕೆ ಕಾರಣ ಏನು..? appeared first on News First Kannada.

Source: newsfirstlive.com

Source link