‘ಈ ಬಾರಿ ನಿಮ್ಮಿಂದ ಸ್ವಲ್ಪ ದೂರ, ಆದರೆ ಬೇಗ ಮರಳುವೆ’ ಎಂದು ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ   | Rashmika Mandanna trip to Dubai She says She will come back soon


‘ಈ ಬಾರಿ ನಿಮ್ಮಿಂದ ಸ್ವಲ್ಪ ದೂರ, ಆದರೆ ಬೇಗ ಮರಳುವೆ’ ಎಂದು ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ  

ರಶ್ಮಿಕಾ

ಅತ್ಯಂತ ಬ್ಯುಸಿಯಾಗಿರುವ ನಟಿಯರ ಪೈಕಿ ರಶ್ಮಿಕಾ ಮಂದಣ್ಣ ಒಬ್ಬರು. ಅವರ ಕಾಲ್​ಶೀಟ್​​ ಪಡೆಯೋದು ಅಷ್ಟು ಸುಲಭದ ಮಾತಲ್ಲ. ಒಟ್ಟೊಟ್ಟಿಗೆ ಮೂರು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಬಾಲಿವುಡ್​ ಹಾಗೂ ಟಾಲಿವುಡ್​ ಸಿನಿಮಾ ಕೆಲಸಗಳನ್ನು ಒಟ್ಟೊಟ್ಟಿಗೆ ನಿರ್ವಹಿಸುತ್ತಿದ್ದಾರೆ. ಈ ಕಾರಣಕ್ಕೆ ಅವರು ಹೈದರಾಬಾದ್​ನಿಂದ ಮುಂಬೈಗೆ ಮುಂಬೈನಿಂದ ಹೈದರಾಬಾದ್​ಗೆ ಸುತ್ತಾಡಬೇಕಾಗಿತ್ತು. ಈಗ ಸಿನಿಮಾ ಕೆಲಸಗಳಿಂದ ರಶ್ಮಿಕಾ ಬ್ರೇಕ್​ ತೆಗೆದುಕೊಂಡು ವಿದೇಶಕ್ಕೆ ಹಾರಿದ್ದಾರೆ. ಅಷ್ಟೇ ಅಲ್ಲ ‘ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದನ್ನು ಊಹಿಸಿ’  ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

ರಶ್ಮಿಕಾ ನಟನೆಯ ‘ಪುಷ್ಪ’ ಸಿನಿಮಾ ಡಿಸೆಂಬರ್​ 17ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಸಂಪೂರ್ಣ ಕೆಲಸ ಪೂರ್ಣಗೊಳಿಸಿದ್ದಾರೆ ಅವರು. ಇದರ ಜತೆಗೆ ಹಿಂದಿಯ ‘ಮಿಷನ್​ ಮಜ್ನು’ ಹಾಗೂ ‘ಗುಡ್​ಬೈ’ ಸಿನಿಮಾ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ. ಇದರ ಜತೆಗೆ ಇನ್ನೂ ಕೆಲ ಸಿನಿಮಾಗಳು ಮಾತುಕತೆ ಹಂತದಲ್ಲಿವೆ. ರಶ್ಮಿಕಾ ಶೀಘ್ರವೇ ‘ಪುಷ್ಪ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಲಿದ್ದಾರೆ. ಅದಕ್ಕೂ ಮೊದಲು ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ರಶ್ಮಿಕಾ ಅವರು ಬೋರ್ಡಿಂಗ್​ ಪಾಸ್ ಹಾಗೂ ಪಾಸ್​ಪೋರ್ಟ್​ ಫೋಟೋ ಹಾಕಿ ‘ಈ ಬಾರಿ ನಿಮ್ಮಿಂದ ಸ್ವಲ್ಪ ದೂರ, ಆದರೆ ಬೇಗ ಮರಳುವೆ’ ಎಂದು ಬರೆದುಕೊಂಡಿದ್ದಾರೆ. ಬೋರ್ಡಿಂಗ್​ ಪಾಸ್​ನಲ್ಲಿ ‘DU’ ಎಂದಷ್ಟೇ ಕಾಣಿಸಿದೆ. ಹೀಗಾಗಿ, ರಶ್ಮಿಕಾ ದುಬೈಗೆ ತೆರಳುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಅವರು ಎಲ್ಲಿಗೆ ತೆರಳುತ್ತಿದ್ದಾರೆ ಎಂಬ ಪ್ರಶ್ನೆಗೆ ಅವರ ಕಡೆಯಿಂದಲೇ ಉತ್ತರ ಬರಬೇಕಿದೆ.

ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯಾಗಿದ್ದಾರೆ. ಸ್ಟಾರ್​ ನಟರ ಜತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್​ನಲ್ಲಿ ರಶ್ಮಿಕಾ 3ನೇ ಸಿನಿಮಾ ಒಪ್ಪಿಕೊಂಡಿರುವ ಸಾಧ್ಯತೆ ಇತ್ತೀಚೆಗೆ ದಟ್ಟವಾಗಿತ್ತು. ಹಿಂದಿ ಚಿತ್ರರಂಗದಲ್ಲಿ ವಿಶೇಷ ರೀತಿಯ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡವರು ನಿರ್ದೇಶಕ ಆನಂದ್​ ಎಲ್​. ರಾಯ್​. ಅವರು ನಿರ್ದೇಶಿಸಿದ ‘ತನು ವೆಡ್ಸ್​ ಮನು’ ಚಿತ್ರವನ್ನು ಪ್ರೇಕ್ಷಕರು ಸಖತ್​ ಮೆಚ್ಚಿಕೊಂಡಿದ್ದರು. ಸದ್ಯ ಅವರು ಅಕ್ಷಯ್​ ಕುಮಾರ್​ ಜೊತೆ ಎರಡು ಸಿನಿಮಾ ಮಾಡುತ್ತಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ‘ರಕ್ಷಾ ಬಂಧನ್​’ ಮತ್ತು ‘ಅತರಂಗಿ ರೇ’ ಚಿತ್ರಕ್ಕೆ ಆನಂದ್​ ನಿರ್ದೇಶನ ಮಾಡುತ್ತಿದ್ದಾರೆ. ಅಂಥ ಪ್ರತಿಭಾನ್ವಿತ ನಿರ್ದೇಶಕನ ಕಚೇರಿ ಎಂದು ರಶ್ಮಿಕಾ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಚಿತ್ರ-ವಿಚಿತ್ರ ಫೋಟೋ ಪೋಸ್

TV9 Kannada


Leave a Reply

Your email address will not be published. Required fields are marked *