ಬೆಂಗಳೂರು: ರಾಜ್ಯದಲ್ಲಿ ಜೂನ್ 7 ರವರೆಗೂ ಮತ್ತೆ ಲಾಕ್​​ಡೌನ್ ವಿಸ್ತರಣೆಯಾಗಿದ್ದು, ಕೋವಿಡ್ ನಿಯಮ ಉಲ್ಲಂಘಿಸಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.. ಯಾವುದೇ ಮುಲಾಜು ನೋಡೋದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಪ್ರತಿಯೊಂದು ವಾಹನಗಳನ್ನ ಚೆಕ್ ಮಾಡ್ತೀವಿ, ನಿಗಾ ವಹಿಸಲಿದ್ದೇವೆ. ಟ್ರಾಫಿಕ್ ಪೊಲೀಸರು, ಸಿವಿಲ್ ಪೊಲೀಸರು ಜಂಟಿ ಕಾರ್ಯಾಚರಣೆ ಮುಂದುವರಿಯಲಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ಮಾಡಲಿದ್ದೇವೆ‌. ಅನಗತ್ಯವಾಗಿ ವಾಹನಗಳಲ್ಲಿ ಓಡಾಡುವವರ ಮೇಲೆ ಮತ್ತಷ್ಟು ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಲಾಕ್ಡೌನ್​​​ನಲ್ಲಿ ಟಫ್ ಆಗಿ ನಿಯಮ ಜಾರಿಗೆ ತರಲಿದ್ದೇವೆ ಎಂದು ತಿಳಿಸಿದರು.

ಇತ್ತ ರಾಜ್ಯದಲ್ಲಿ ಮೇ 24 ರಿಂದ ಜೂನ್ 07ರ ವರೆಗೂ ಲಾಕ್​​ಡೌನ್ ಮುಂದುವರೆದಿದ್ದು, ಈ ಹಿಂದಿನ ಮಾರ್ಗ ಸೂಚಿ ನಿಯಮಗಳು ಮುಂದುವರಿಸಲಾಗುತ್ತದೆ. ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಬಿಎಸ್​​ವೈ ತಿಳಿಸಿದ್ದರು.

The post ಈ ಬಾರಿ ಮುಲಾಜು ನೋಡೋದಿಲ್ಲ, ನಿಯಮ ಉಲ್ಲಂಘಿಸಿದ್ರೆ ನಿರ್ದಾಕ್ಷಿಣ್ಯ ಕ್ರಮ- ಕಮಲ್​ ಪಂತ್ appeared first on News First Kannada.

Source: newsfirstlive.com

Source link