ಸೂರ್ಯ ಸೌರಮಂಡಲದ ಕೇಂದ್ರ ಬಿಂದು. ಸಂಪೂರ್ಣ ಸೌರಮಂಡಲದ ನಿಯಮಿತ ಚಲನೆಗೆ, ಗ್ರಹಕಾಯಗಳ ಪಯಣಕ್ಕೆ ಮತ್ತು ಭೂಮಿಯ ಮೇಲೆ ಜೀವ ಸಂಕುಲದ ಅಸ್ತಿತ್ವಕ್ಕೂ ಈ ಸೂರ್ಯನೇ ಕಾರಣ. ಎಷ್ಟೋ ಶತಮಾನಗಳಿಂದಲೂ ಸೂರ್ಯನ ಅಸ್ತಿತ್ವ ಮತ್ತವನ ಕಾರ್ಯವೈಖರಿ ಬಗ್ಗೆ ಮಾನವನಿಗೆ ಭಾರೀ ಕುತೂಹಲ. ಖಗೋಳ ವಿಜ್ಞಾನ ಮಾತ್ರ ನಮ್ಮ ಈ ಕೌತುಕವನ್ನು ತಣಿಸುವ ಕೆಲಸ ಮಾಡುತ್ತಲೇ ಇದೆ. ಅದರಲ್ಲೂ ಆಧುನಿಕ ಖಗೋಳ ವಿಜ್ಞಾನವೂ ಸೂರ್ಯನ ಗರ್ಭವನ್ನೂ ತಲುಪಿ ಮಾಹಿತಿ ಕಲೆ ಹಾಕುತ್ತಿದೆ. ಹೀಗಿರುವಾಗಲೇ ಸೂರ್ಯನಲ್ಲಿ ಸಂಭವಿಸಿದ ಸೌರ ಸ್ಪೋಟದ ಬಗ್ಗೆ ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ಕೇಂದ್ರ((ಎಸ್​​ಡಬ್ಲ್ಯುಪಿಸಿ) ಮಾಹಿತಿ ನೀಡಿದೆ.

ಹೌದು, ಎರಡು ದಿನಗಳ ಕೆಳಗೆ ಜುಲೈ 3ನೇ ತಾರೀಕಿನಂದು ಕಳೆದ 4 ವರ್ಷಗಳಲ್ಲಿ ಎಂದೂ ಸಂಭವಿಸದಂತ ಬೃಹತ್ ಸೌರ ಸ್ಫೋಟ ವಿದ್ಯಮಾನ ಸೂರ್ಯನಲ್ಲಿ ಸಂಭವಿಸಿದೆ ಎಂದು ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ಕೇಂದ್ರ ಸ್ಪಷ್ಟಪಡಿಸಿದೆ. ಇದು ಸೌರಮಂಡಲದ ಮಧ್ಯದಲ್ಲಿರುವ “AR2838” ಎಂದು ಕರೆಯಲ್ಪಡುವ ಸೂರ್ಯನ ಜಾಗದಲ್ಲೇ ಬೃಹತ್ ಸೌರ ಸ್ಫೋಟ ವಿದ್ಯಮಾನ ಸಂಭವಿಸಿದೆ ತಿಳಿಸಿದೆ.

ಬಾಹ್ಯಾಕಾಶ ಹವಾಮಾನ ಮುನ್ಸೂಚನಾ ಕೇಂದ್ರದ ಪ್ರಕಾರ, ವರ್ಗ X1.5 ರ ಸ್ಫೋಟಗಳು ಎಂದು ಕರೆಯಲ್ಪಡುವ ಈ ವಲಯವು ಸೂರ್ಯನ ಬೆಳಕು ಬಿಳುತ್ತಿರುವ ಭೂಮಿಯ ಬಾಗದಲ್ಲಿ ಒಂದು ಗಂಟೆ ಕಾಲ ತನ್ನ ಪರಿನಾಮ ಬಿರಿದರೆ ಕಡಿಮೆ-ಆವರ್ತನ ಸಂಪರ್ಕ ಸಂವಹನ ತರಂಗಗಳಲ್ಲಿ ವ್ಯತ್ಯಾಸಗಳು ಉಂತಾಗುತ್ತವೆ ಎನ್ನಲಾಗುತ್ತಿದೆ.

ಪ್ರತಿ ಬಾರಿಯೂ ಮೂರು ವಿಭಿನ್ನ ರೀತಿಯ ಸೌರ ಸ್ಫೋಟಗಳು ಪ್ರತ್ಯೇಕ ಸಮಯದಲ್ಲಿ ಸಂಭವಿಸುತ್ತವೆ. ಆದರೆ ಈ ಬಾರಿ ಹಾಗೇ ಆಗಲಿಲ್ಲ. ಹೀಗಾಗಿ ಇದು ಅಪರೂಪದ ವಿದ್ಯಮಾನ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ. ಇದರಿಂದ ನಾವು ವಿವಿಧ ರೀತಿಯ ಸೌರ ಸ್ಫೋಟಗಳ ಎಲ್ಲಾ ಅಂಶಗಳನ್ನು ಒಂದು ಪುಟ್ಟ ಪ್ಯಾಕೇಜ್ನಲ್ಲಿ ನೋಡಬಹುದು ಎಂಬುದನ್ನು ಈ ವಿದ್ಯಮಾನ ದೃಢಪಡಿಸಿದೆ.

The post ಈ ಬಾರಿ ಸಂಭವಿಸಿದ ಬೃಹತ್ ಸೌರ ಸ್ಫೋಟ ವಿಜ್ಞಾನಿಗಳ ನಿದ್ದೆ ಕೆಡಿಸಿದ್ಯಾಕೆ? appeared first on News First Kannada.

Source: newsfirstlive.com

Source link