‘ಈ ಮನುಷ್ಯ ಹೇಗೆ ಸಾಲ ಮನ್ನಾ ಮಾಡ್ತಾನೆ ಎಂದು ಅನ್ನಿಸಿತ್ತು’- ಹೆಚ್​ಡಿಕೆ ಬಗ್ಗೆ ಮಾಜಿ ಪ್ರಧಾನಿ ಮಾತು

ಬೆಂಗಳೂರು: ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಜೆಡಿಎಸ್ ಕಾರ್ಯಾಗಾರದ ಬಗ್ಗೆ ಮಾತನಾಡಿದರು. ಸೆಪ್ಟೆಂಬರ್ 28 ರಿಂದ 7 ದಿನಗಳ ಕಾರ್ಯಗಾರ ಅಂತ್ಯವಾಗಿದೆ. ಬಿಡದಿಯಲ್ಲಿ ನಡೆದ ಕಾರ್ಯಗಾರದಲ್ಲಿ ಶಾಸಕರು ಪರಿಷತ್ ಸದಸ್ಯರು, ಜೆಡಿಎಸ್ ಸದಸ್ಯರು ಭಾಗಿಯಾಗಿದ್ದರು. ಮಹಿಳಾ ಕಾರ್ಯಗಾರದಲ್ಲಿ 800 ಜನ ಭಾಗಿಯಾಗಿದ್ದರು. ಪ್ರತಿದಿನ ಆನ್‌ಲೈನ್‌ನಲ್ಲಿ ನಾನು ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

ಅಲ್ಲದೇ ಕುಮಾರಸ್ವಾಮಿ ಅವ್ರೇ ಎಲ್ಲಾ ಪ್ಲಾನ್ ಮಾಡಿ ಕಾರ್ಯಗಾರ ನಡೆಸಿದ್ದಾರೆ. ಮಿಷನ್ 123 ಹೆಸರಿನಲ್ಲಿ ಕಾರ್ಯಗಾರ ನಡೆಯಿತು. 2023 ರ ಚುನಾವಣೆಗೆ ಪಂಚರತ್ನ ಯೋಜನೆ ಸಿದ್ಧವಾಗಿದೆ. ನೀವು ಅಧಿಕಾರ ನೀಡಿದರೆ ಈ ಯೋಜನೆಗಳನ್ನ ಕಾರ್ಯಗತ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. 2023ಕ್ಕೆ ನಮ್ಮ ಪಕ್ಷಕ್ಕೆ ಶಕ್ತಿ ಕೊಟ್ಟರೆ.. ಪಂಚ‌ರತ್ನ ಯೋಜನೆ ಕಾರ್ಯಗತಗೊಳಿಸಬಹುದು ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜತೆ ನಾನು ಸರ್ಕಾರ ಮಾಡಿದ್ದಕ್ಕೆ ದೇವೇಗೌಡರ ಆರೋಗ್ಯ ಹಾಳಾಯ್ತು; HDK ಬೇಸರ

ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸೋನಿಯಾ ಗಾಂಧಿಗೆ ಹೇಳಿದ್ದೆ

ನಾನು ಅಧಿಕಾರಕ್ಕೆ ಬಂದ್ರೆ ಸಾಲಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ರು.. ಈ ಮನುಷ್ಯ ಹೇಗೆ ಮಾಡುತ್ತಾನೆ ಎಂದು ಅನ್ನಿಸುತ್ತಿತ್ತು.. ವಿಧಿಯಾಟ ಬೇರೆ ಇತ್ತು.. ಬಿಜೆಪಿ‌106, ಕಾಂಗ್ರೆಸ್78 ಜೆಡಿಎಸ್ 37 ಬಂತು. ನಿಚ್ಚಳ ಬಹುಮತ ಕಳೆದ ಬಾರಿ ಆಗಲಿಲ್ಲ. ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸೋನಿಯಾ ಗಾಂಧಿಗೆ ಹೇಳಿದ್ದೆ.. ಕಾಂಗ್ರೆಸ್‌ಗೆ ಹೆಚ್ಚು ಸೀಟುಗಳು ಬಂದಿದ್ದವು. ನಾವು ಮುಖ್ಯಮಂತ್ರಿ ಸ್ಥಾನ ಪಡೆದರೆ ಅಭಾಸ ಆಗುತ್ತದೆ.. ಹೀಗಾಗಿ ಖರ್ಗೆ ಅವರನ್ನೇ ಸಿಎಂ ಮಾಡಿ ಎಂದಿದ್ದೆ. ಖರ್ಗೆಯವರು ಕೂಡ ಅದಕ್ಕೆ ಒಪ್ಪಿದ್ದರು.

ಸಾಲಮನ್ನಾ ಮಾಡುತ್ತಿರಾ ಇಲ್ವಾ ಎಂದು ಏಕವಚನದಲ್ಲೇ ಮಾತನಾಡಿದ್ದರು

ಸೋನಿಯಾಗಾಂಧಿಗೆ ಒಪ್ಪಿಸುತ್ತೇನೆ ಎಂದು ಗುಲಾಮ್‌ನಬಿ ಆಜಾದ್ ಹೇಳಿದರು. ಕುಮಾರಸ್ವಾಮಿ ಸಿಎಂ ಆಗಬೇಕೆಂದು ಒಪ್ಪಿಸಿದರು.
ನೂರಾರು ಸೀಟು ಇಟ್ಟುಕೊಂಡಿದ್ದ ಯಡಿಯೂರಪ್ಪ ವಿಪಕ್ಷ ನಾಯಕ ಆದರು.. ಸಾಲಮನ್ನಾ ಮಾಡುತ್ತಿರಾ ಇಲ್ವಾ ಎಂದು ಏಕವಚನದಲ್ಲೇ ಮಾತನಾಡಿದ್ದರು. ಯಡಿಯೂರಪ್ಪ ಏಕವಚನದಲ್ಲಿ ಮಾತನಾಡಿದ್ದನ್ನು ಟಿವಿಯಲ್ಲೇ ನೋಡಿದ್ದೆ. ಬಜೆಟ್ ವಿಷಯದಲ್ಲಿ ಕೂಡ ಸಿದ್ದರಾಮಯ್ಯ ಷರತ್ತು‌ ಹಾಕಿದ್ದರು.. ಸಿದ್ದರಾಮಯ್ಯ ಅವರ ಎಲ್ಲ ಭಾಗ್ಯಗಳನ್ನು ಮುಂದುವರಿಸಲು ಷರತ್ತು ಹಾಕಿದ್ದರು. ಸಿದ್ದರಾಮಯ್ಯ ಅವರ 50 ಸಾವಿರ ಸಾಲಮನ್ನಾ ಜೊತೆಗೆ ಕುಮಾರಸ್ವಾಮಿ ಕೂಡ ಸಾಲ‌ಮನ್ನಾ ಮಾಡಿದರು.

ಕುಮಾರಸ್ವಾಮಿ ಆರ್ಥಿಕ ತಜ್ಞ ಏನಲ್ಲ.. ಸಿದ್ದರಾಮಯ್ಯರ ಹಾಗೆ ಸಾಕಷ್ಟು ಬಾರಿ ಬಜೆಟ್ ಮಂಡಿಸಿಲ್ಲ. ಆದರೆ ಸಂಪನ್ಮೂಲ ಕ್ರೋಢೀಕರಿಸಿ ಯೋಜನೆ ತಂದರು. ಹಿಂದಿನ ಎಲ್ಲ ಯೋಜನೆಗಳಿಗೆ ಹಣ‌ ಹೊಂದಿಸಿದರು. ಹೇಳಿದ‌ ಮಾತನ್ನು ಕುಮಾರಸ್ವಾಮಿ ನಡೆಸಿಕೊಂಡು ಬಂದ್ರು.

News First Live Kannada

Leave a comment

Your email address will not be published. Required fields are marked *