ಈ ಮಹಿಳಾ ಡ್ರೈವರ್ ಸೀಟಿನ ಪಕ್ಕದಲ್ಲಿ ಆಕೆಯ ಮಗು ಮಲಗಿತ್ತು – Meet Nandini a woman Uber driver from Bengaluru who has impressed netizens with juggling her work and motherhood


Uber Woman Driver : ‘ನನ್ನ ಉಳಿತಾಯದ ಹಣದಿಂದ ಫುಡ್​ ಟ್ರಕ್​ ಆರಂಭಿಸಿದ್ದೆ. ಆದರೆ ಕೊವಿಡ್​ನಿಂದಾಗಿ ನಷ್ಟವನ್ನು ಅನುಭವಿಸಿದೆ. ಈಗ ಆ ಹಣವನ್ನು ಮರುಸಂದಾಯ ಮಾಡಿಕೊಳ್ಳಲು ಈ ಕೆಲಸ ಮಾಡುತ್ತಿದ್ದೇನೆ.’ ನಂದಿನಿ, ಉಬರ್​ ಡ್ರೈವರ್.

ಈ ಮಹಿಳಾ ಡ್ರೈವರ್ ಸೀಟಿನ ಪಕ್ಕದಲ್ಲಿ ಆಕೆಯ ಮಗು ಮಲಗಿತ್ತು

Meet Nandini a woman Uber driver from Bengaluru

Viral Video : ದೃಢಚಿತ್ತ ಮತ್ತು ಆತ್ಮವಿಶ್ವಾಸ ಹೊಂದಿದ ಮಹಿಳೆಯರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ಆಗಾಗ ಅವರ ಜೀವನಗಾಥೆಯನ್ನು ಓದುತ್ತಿರುತ್ತೀರಿ. ಇದೀಗ ಬೆಂಗಳೂರಿನ ಮಹಿಳಾ ಉಬರ್ ಡ್ರೈವರೊಬ್ಬರ  ಕಥೆಯನ್ನು ನೀವು ಓದಬಹುದು. ಕ್ಲೌಡ್‌ಸೆಕ್ ಕಂಪನಿಯ ಸಹಸಂಸ್ಥಾಪಕ ರಾಹುಲ್ ಸಾಸಿ ಎನ್ನುವವರು ಲಿಂಕಡಿನ್​ನಲ್ಲಿ ಈ ಕಥೆ ಹಂಚಿಕೊಂಡಿದ್ದಾರೆ. ರಾಹುಲ್​ ಅವರ ಸ್ನೇಹಿತರು ಅವರಿಗಾಗಿ ಕ್ಯಾಬ್​ ಬುಕ್ ಮಾಡಿದ್ದರು. ಸ್ವಲ್ಪ ಹೊತ್ತಿನ ಮೇಲೆ ಅವರನ್ನು ಪಿಕ್ ಮಾಡಲು ಮಹಿಳಾ ಡ್ರೈವರ್ ಬಂದರು. ಮುಂದೇನಾಯಿತು ಎನ್ನುವುದನ್ನು ಓದಿ.

ನಿನ್ನೆ ನನ್ನ ಸ್ನೇಹಿತ ನನಗಾಗಿ ಉಬರ್ ಕ್ಯಾಬ್​ ಬುಕ್ ಮಾಡಿದ್ದರು. ಆಗ ಮಹಿಳಾ ಡ್ರೈವರ್ ಪಿಕ್​ ಮಾಡಿದರು. ಸ್ವಲ್ಪ ದೂರ ಪ್ರಯಾಣ ಸಾಗುತ್ತಿದ್ದಂತೆ ಡ್ರೈವರ್ ಸೀಟಿನ ಪಕ್ಕ ಮಗುವೊಂದು ಮಲಗಿರುವುದು ಕಂಡಿತು. ಮೇಡಮ್ ಇದು ನಿಮ್ಮ ಮಗಳೇ ಎಂದು ಕೇಳಿದೆ. ಅದಕ್ಕೆ ಆಕೆ, ಹೌದು ಸರ್ ನನ್ನ ಮಗಳೇ. ಈಗವಳ ಶಾಲೆಗೆ ರಜೆ. ಹಾಗಾಗಿ ನಾನೇ ಅವಳನ್ನು ನೋಡಿಕೊಳ್ಳುತ್ತಿದ್ದೇನೆ ಎಂದರು.

ನಂತರ ನಂದಿನಿ ತಮ್ಮ ಕಥೆಯನ್ನು ಹೇಳತೊಡಗಿದರು. ಅವರೊಬ್ಬ ಉದ್ಯಮಿಯಾಗಬೇಕು ಎಂದು ಕನಸು ಕಂಡಿದ್ದರು. ತಮ್ಮ ಉಳಿತಾಯದ ಹಣದಿಂದ ಒಂದು ಫುಡ್​ ಟ್ರಕ್​ ಶುರುಮಾಡಿದರು. ಆದರೆ ಕೊವಿಡ್​ ಪರಿಣಾಮದಿಂದ ಅವರು ನಷ್ಟವನ್ನು ಅನುಭವಿಸಿದರು. ನಂತರ ಉಬರ್ ಡ್ರೈವರ್​ ಕೆಲಸಕ್ಕೆ ಸೇರಿದರು. ದಿನಕ್ಕೆ 12 ಗಂಟೆಗಳ ಕೆಲಸ. ಆನಂತರ ಕೆಲಸ ಮಾಡುವ ಶಕ್ತಿ ಮನಸ್ಸು ಉಳಿಯುವುದಿಲ್ಲ. ಆದರೆ ಕಳೆದುಕೊಂಡ ಹಣವನ್ನು ಮರುಹೊಂದಿಸುವುದು ಅನಿವಾರ್ಯ ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎಂದರು. ಉಬರ್ ಇಂಡಿಯಾ ಮುಖ್ಯಸ್ಥ ಪ್ರಭಜಿತ್​ ಸಿಂಗ್​ ಅವರು ನಂದಿನಿಗೆ ಹೆಚ್ಚಿನ ಸಹಾಯ ಬೇಕಾದಲ್ಲಿ ಮಾಡುವುದಾಗಿ ತಿಳಿಸಿದ್ದಾರೆ.

2,27,700 ಜನರು ಈ ಪೋಸ್ಟ್​ ಇಷ್ಟಪಟ್ಟಿದ್ದಾರೆ. ಈ ಮಹಿಳೆಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ.

TV9 Kannada


Leave a Reply

Your email address will not be published.