ಈ ಮೂವರ ಬಗ್ಗೆ ವ್ಯವಹರಿಸುವಾಗ ಸದಾ ಜಾಗ್ರತೆ ವಹಿಸಿ; ಅದರ ಜೊತೆಗೆ ಸಮಾನ ಅಂತರ ಕಾಪಾಡಿಕೊಳ್ಳಬೇಕು! ಯಾಕೆ ಗೊತ್ತಾ? | Chanakya niti in kannada maintain balanced behavior with these three persons know why


ಈ ಮೂವರ ಬಗ್ಗೆ ವ್ಯವಹರಿಸುವಾಗ ಸದಾ ಜಾಗ್ರತೆ ವಹಿಸಿ; ಅದರ ಜೊತೆಗೆ ಸಮಾನ ಅಂತರ ಕಾಪಾಡಿಕೊಳ್ಳಬೇಕು! ಯಾಕೆ ಗೊತ್ತಾ?

ಈ ಮೂವರ ಬಗ್ಗೆ ವ್ಯವಹರಿಸುವಾಗ ಸದಾ ಜಾಗ್ರತೆ ವಹಿಸಿ; ಅವರ ಜೊತೆಗೆ ಸಮಾನ ಅಂತರ ಕಾಪಾಡಿಕೊಳ್ಳಬೇಕು! ಯಾಕೆ ಗೊತ್ತಾ?

ಜೀವನದಲ್ಲಿ ನೀವು ಈ ಮೂವರ ಬಗ್ಗೆ ಎಚ್ಚರದಿಂದ ಇರಬೇಕು; ಅವರ ಜೊತೆಗಿನ ವ್ಯವಹಾರ ಸಮತೋಲನದಿಂದ ಕೂಡಿರಬೇಕು. ಆಚಾರ್ಯ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಈ ಕುರಿತು ಸವಿಸ್ತಾರವಾಗಿ ಹೇಳಿದ್ದಾನೆ. ಇದರ ಅರ್ಥ ಇಷ್ಟೇ ಅದೊಮ್ಮೆ ಈ ನೀತಿಯನ್ನು ಪಾಲಿಸದಿದ್ದರೆ ಸಂಕಷ್ಟಗಳು ತಪ್ಪಿದ್ದಲ್ಲ. ಇದು ದೂರವಿದ್ದಷ್ಟೂ ಸಂಕಷ್ಟಗಳೂ ಅಷ್ಟೇ ಪ್ರಮಾಣದಲ್ಲಿ ನಿಮ್ಮಿಂದ ದೂರವೇ ಉಳಿಯುತ್ತವೆ. ಚಾಣಕ್ಯ ತನ್ನನೀತಿ ಶಾಸ್ತ್ರದಲ್ಲಿ ಈ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾನೆ. ಚಾಣಕ್ಯ ತನ್ನ ಈ ನೀತಿಗಳನ್ನ ಜನರಿಗೆ ಹತ್ತಿರವಾಗಿ ಇರುವಂತೆ ತಿಳಿಯಹೇಳಿದ್ದಾನೆ. ಹಾಗಾಗಿಯೇ ಚಾಣಕ್ಯ ಹೇಳಿರುವ ಎಲ್ಲ ನೀತಿಗಳೂ ಇಂದಿಗೂ, ಎಂದೆಂದಿಗೂ ಜನರ ಶ್ರೇಯಸ್ಸಿಗಾಗಿ ಊರುಗೋಲಾಗಿ ನಿಲ್ಲುತ್ತದೆ. ನೀತಿ ನಿಯಮಗಳು ನಮ್ಮ ಎದುರಿಗೇ ಇವೆ; ಕೇವಲ ನಾವು ಅದನ್ನು ಮನಸ್ಸಿಟ್ಟು ಆಲಿಸಿ, ಪಾಲಿಸಬೇಕು ಅಷ್ಟೇ. ಚಾಣಕ್ಯನ ನೀತಿಶಾಸ್ತ್ರಗಳು ಜನರಿಗೆ ದೂರದಿಂದ ಕಠೋರವಾಗಿ ಕಂಡುಬರುತ್ತದೆ. ಆದರೆ ಅದರ ಸಮೀಪ ಸುಳಿದಾಗ ಅದೇ ನಮ್ಮ ಹಿತವಾಗಿ ಪರಿಣಮಿಸುತ್ತದೆ. ಸತ್ಯತೆಯ ದರ್ಶನವಾಗುತ್ತದೆ. ಈ ನೀತಿನಗಳ ಸಮ್ಮುಖದಲ್ಲಿ ಆಚಾರ್ಯ ಹೇಳೋದೇನು ಅಂದರೆ ಈ ಮೂರು ಜನರ ಎದುರು ನಾವು ಅತ್ಯಂತ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು, ಅಷ್ಟೇ!

ಶಕ್ತಿಶಾಲಿ ವ್ಯಕ್ತಿ:
ಅತ್ಯಂತ ಬಲಷ್ಠ ವ್ಯಕ್ತಿಗಳ ಜೊತೆ ಆಚಾರ್ಯ ಚಾಣಕ್ಯ ಹೇಳುವಂತೆ ನೀವು ತುಂಬಾ ದೂರವೂ ಉಳಿಯಬಾರದು; ಮತ್ತು ಅತ್ಯಂತ ನಿಕಟವೂ ಇರಬಾರದು. ಎಕೆಂದರೆ ಒಂದು ವೇಳೆ ನೀವು ಅವರ ಸಮೀಪ ತೆರಳಿದರೆ ಅಂದರೆ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದರೆ ಅವರ ವರ್ಚಸ್ಸಿನ ಕಾರಣದಿಂದಾಗಿ ನೀವು ಮಂಕಾಗುತ್ತೀರಿ. ಅದೇ ನೀವು ಅವರಿಂದ ದೂರವೇ ಉಳಿದುಬಿಟ್ಟರೆ ಅವರಿಂದ ಪ್ರಾಪ್ತಿಯಾಗಬಹುದಾಗಿದ್ದ ಎಲ್ಲ ಪ್ರಯೋಜನಗಳಿಂದ ನೀವೂ ದೂರವೇ ಉಳಿದುಬಿಡುತ್ತೀರಿ. ಹಾಗಾಗಿ ನೀವು ನಷ್ಟ ಅನುಭವಿಸಬೇಕಾಗುತ್ತದೆ. ಅದಕ್ಕೇ ಹೇಳಿದ್ದುಇಂತಹ ವ್ಯಕ್ತಿಗಳಿಂದ ನೀವು ಸಮಾನ ಅಂತರ ಕಾಪಾಡಿಕೊಳ್ಳಬೇಕಾಗುತ್ತದೆ.

ಅಗ್ನಿ:
ಆಚಾರ್ಯ ಚಾಣಕ್ಯ ಏನು ಹೇಳುತ್ತಾನೆ ಅಂದರೆ ಬೆಂಕಿ ಹಚ್ಚುವಾಗ ಅಥವಾ ಯಾವುದೇ ಅಗ್ನಿ ಕಾರ್ಯ ನಡೆಯುವಾಗ ತುಂಬಾ ಜಾಗ್ರತೆ ವಹಿಸುವುದು ಅತ್ಯಂತ ಅವಶ್ಯಕ. ಒಂದು ವೇಳೆ ನೀವು ಅಗ್ನಿಯಿಂದ ದೂರವೇ ಉಳಿದುಬಿಟ್ಟರೆ ಅಡುಗೆ ಮಾಡಿಕೊಳ್ಳಲು ಸಾಧ್ಯವೇ ಆಗದು. ಅಥವಾ ಅದೇ ಅಗ್ನಿಯ ಸಮೀಪ ಇದ್ದುಬಿಟ್ಟರೆ ಅದೇ ಅಡುಗೆ ಸೀದು ಹೋಗುತ್ತದೆ. ಅಂದರೆ ಅಡುಗೆ ಮಾಡುವುದೇ ಸಾಧ್ಯವಾಗದು. ಹಾಗಾಗಿ ಅಗ್ನಿ ಜೊತೆ ಸಮಾನ ಅಂತರ ಕಾಪಾಡಿಕೊಳ್ಳಬೇಕು.

ಸ್ತ್ರೀ:
ಇನ್ನು ಮೂರನೆಯ ವಿಷಯ – ಮಹಿಳೆ. ಹೌದು ಮಹಿಳೆಯ ವಿಷಯದಲ್ಲಿಯೂ ಅತ್ಯಂತ ಎಚ್ಚರವಿರಬೇಕು. ಮಹಿಳೆಯ ಮುಂದೆ ನೀವು ಕರಗಿದರೆ ಜೀವನ ಕಷದಟ ಕಷ್ಟವಾಗಿಬಿಡುತ್ತದೆ. ಅಂದರೆ ಆಚಾರ್ಯ ಚಾಣಕ್ಯ ಸ್ತ್ರೀ ವಿಷಯದಲ್ಲಿ ಹೇಳುವುದು ಏನೆಂದರೆ ಮಹಿಳೆಯ ಎದುರು ಪುರುಷ ಸಮತೋಲನದಿಂದ ನಡೆದುಕೊಳ್ಳಬೇಕು. ಅತಿಯಾಗಿ ಆಡಬಾರದು. ಒಂದು ವೇಳೆ ಮಹಿಳೆಗೆ ಅತ್ಯಂತ ಸಮೀಪವಾಗಿ ಹೋದರೆ ಅಸೂಯೆ, ಅಪಮಾನ ಅನುಭವಿಸಬೇಕಾದೀತು ಅನ್ನುತ್ತಾನೆ ಚಾಣಕ್ಯ. ಅದೇ ನೀವು ಮಹಿಳೆಯಿಂದ ದೂರವುಳಿದುಬಿಟ್ಟರೆ ನೀವು ಆ ಮಹಿಳೆಯ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ.

TV9 Kannada


Leave a Reply

Your email address will not be published. Required fields are marked *