ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಟೀ ಇಂಡಿಯಾ ಗೆದ್ದ ಬೀಗಿದೆ. ಈ ಪಂದ್ಯದ ಮೂಲಕ ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಸ್ಪಿನ್ನರ್ ರವಿ ಬಿಷ್ಣೋಯಿ ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನಾರಿದ್ದಾರೆ.
ಸದ್ಯ ಈ ಆಟಗಾರನ ಕುರಿತು ಕ್ಯಾಪ್ಟನ್ ರೋಹಿತ್ ಶರ್ಮಾ ಹಾಡಿ ಹೊಗಳಿದ್ದಾರೆ. ವಿ ಬಿಷ್ಣೋಯಿಗೆ ಉಜ್ವಲ ಭವಿಷ್ಯವಿದೆ. ಅವರು ಮುಂದೆ ಸ್ಟಾರ್ ಬೌಲರ್ ಆಗುತ್ತಾರೆ ಎಂದಿದ್ದಾರೆ. ದೇಸಿ ಟೂರ್ನಿಗಳಲ್ಲಿನ ಅವರ ಉತ್ತಮ ಪ್ರದರ್ಶನ ಗಮನಿಸಿ ಟೀಂ ಇಂಡಿಯಾಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಬೌಲಿಂಗ್ನಲ್ಲಿ ಸಾಕಷ್ಟು ಪಳಗಿದ್ದಾರೆ.
ಅವರ ಕೌಶಲ್ಯವನ್ನು ಉಪಯೋಗಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹಿಟ್ ಮ್ಯಾನ್ ರೋಹಿತ್ ತಿಳಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದ ರವಿ 17 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ.