ಈ ಯುವ ಆಟಗಾರನಿಂದಾಗಿ ಭುವನೇಶ್ವರ್​​​ ಪಾಲಿಗೆ ಮುಚ್ಚುತ್ತಾ ಟೀಂ​ ಇಂಡಿಯಾ ಬಾಗಿಲು.?


ಸಾಲಿಡ್​ ಪೇಸ್​, ಸಖತ್​​ ಸ್ಪೆಲ್​.. ಕರಾರುವಕ್​ ಬೌಲಿಂಗ್​.! ಎಸೆದ ಮೊದಲ ಓವರ್​ನಿಂದ ಹಿಡಿದು ಕೊನೆಯ ಓವರ್​ವರೆಗೂ ಅದೇ ಎನರ್ಜಿ. ವೇರಿಯೇಷೇಷನ್​, ಲೈನ್​ ಆ್ಯಂಡ್​ ಲೆಂಥ್​, ಪೇಸ್​​ ಈ ಮೂರು​ ವಿಚಾರದಲ್ಲಂತೂ ರಾಜಿಯೇ ಇಲ್ಲ. ನಮ್ಮ ಕನ್ನಡಿಗ ಆಟಗಾರ ಪ್ರಸಿದ್ಧ ಕೃಷ್ಣ.

ಮೊನ್ನೆ ವಿಂಡೀಸ್​ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಎಸೆದ 9 ಓವರ್​ಗಳಲ್ಲಿ ಒಂದೇ ಒಂದು ವೈಡ್​ ಅಥವಾ ನೋಬಾಲ್​ ಎಸೆಯದ ಪ್ರಸಿದ್ಧ ಕೇವಲ 12 ರನ್​ ನೀಡಿ ಬರೋಬ್ಬರಿ 4 ವಿಕೆಟ್​​ ಕಬಳಿಸಿದ್ರು. ಮಿಂಚಿನ ಪ್ರದರ್ಶನದ ಮೂಲಕ ತನ್ನ ಆಯ್ಕೆಯನ್ನ ಸಮರ್ಥಿಸಿಕೊಂಡರು. ಆ ಮೂಲಕ ಟೀಂ ಇಂಡಿಯಾದ ಅನುಭವಿ ಬೌಲರ್​ಗೆ ಅಡ್ಡಗಾಲು ಹಾಕ್ತಿದ್ದಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿವೆ.

News First Live Kannada


Leave a Reply

Your email address will not be published.