ನವದೆಹಲಿ: ಈ ವರ್ಷಾಂತ್ಯದ ವೇಳೆಗೆ ಅಂದ್ರೆ 2021 ರ ಡಿಸೆಂಬರ್ ವೇಳೆಗೆ ದೇಶದ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಇಂದು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.

ಡಿಸೆಂಬರ್​ ತಿಂಗಳ ಒಳಗೆ ದೇಶದಲ್ಲಿ 216 ಕೋಟಿ ಡೋಸ್​ ವ್ಯಾಕ್ಸಿನ್ ತಯಾರಿರಲಿದೆ. ಅಂದ್ರೆ 108 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಬಹುದಾಗಿದೆ ಎಂದು ಜಾವ್ಡೇಕರ್ ಹೇಳಿದ್ದಾರೆ. ಸದ್ಯ ದೇಶದಲ್ಲಿ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಜೂನ್ ಮಧ್ಯಂತರದ ವೇಳೆ ಸ್ಫುಟ್ನಿಕ್-ವಿ ವ್ಯಾಕ್ಸಿನ್ ಅಪೋಲೋ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ. ಇದರ ಜೊತೆಗೆ ಮೊಡೆರ್ನಾ ಲಸಿಕೆಯನ್ನೂ ಖರೀದಿಸಲು ಪ್ರಯತ್ನಗಳು ನಡೆಯುತ್ತಿವೆ.

ಒಟ್ಟಿನಲ್ಲಿ ಎಷ್ಟು ಬೇಗ ಇಡೀ ದೇಶಕ್ಕೆ ವ್ಯಾಕ್ಸಿನ್ ನೀಡಲಾಗುತ್ತದೋ ಅಷ್ಟು ಬೇಗ ದೇಶ ಕೊರೊನಾದಿಂದ ಮುಕ್ತವಾಗಲಿದೆ. ಜನರು ಮಾಸ್ಕ್​, ಕರ್ಫ್ಯೂ, ಲಾಕ್​ಡೌನ್, ಸೀಲ್​ಡೌನ್​ಗಳಿಲ್ಲದೆಯೇ ಆರಾಮವಾಗಿ ಮೊದಲಿನಂತೆ ಜೀವನ ಸಾಗಿಸಲು ಸಾಧ್ಯವಾಗುತ್ತದೆ.

The post ಈ ವರ್ಷಾಂತ್ಯಕ್ಕೆ ಎಲ್ಲರಿಗೂ ವ್ಯಾಕ್ಸಿನ್ ಎಂದ ಕೇಂದ್ರ: 2022ಕ್ಕೆ ಸಹಜತೆಗೆ ಮರಳುತ್ತಾ ಬದುಕು? appeared first on News First Kannada.

Source: newsfirstlive.com

Source link