ಬಿಗ್​ಬಾಸ್​ ಪ್ರಿಯರು ಪ್ರತಿ ವಾರದ ಅಂತ್ಯಕ್ಕೆ, ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‌ಗಾಗಿ ಕುತೂಹಲದಿಂದ ಕಾಯ್ತಾರೆ. ಸ್ಪರ್ಧಿಗಳಿಗೆ ಕಿಚ್ಚ ಕೇಳುವ ಪ್ರಶ್ನೆಗಳು, ಇಡೀ ವಾರದಲ್ಲಿ ನಡೆದ ಘಟನೆಗಳ ಬಗ್ಗೆ ಮಾಡೋ ತಮಾಷೆ, ಕೆಲವೊಮ್ಮೆ ಅವರು ನೀಡುವ ಸಲಹೆ ನಂತರ ಎಲಿಮಿನೇಷನ್.. ಇವೆಲ್ಲವೂ ಸ್ಪರ್ಧಿಗಳನ್ನ ಹಾಗೂ ಪ್ರೇಕ್ಷಕರನ್ನ ವೀಕೆಂಡ್​ ಎಪಿಸೋಡ್​​ಗೆ ಕಾಯುವಂತೆ ಮಾಡುತ್ತೆ. ಆದ್ರೆ ಈ ವಾರವೂ ಕಿಚ್ಚನ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಹೌದು. ಕಳೆದ ಕೆಲ ದಿನಗಳಿಂದ ಅನಾರೋಗ್ಯದ ಕಾರಣ ವಿಶ್ರಾಂತಿಯಲ್ಲಿದ್ದ ಕಿಚ್ಚ ಸುದೀಪ್‌ ಚೇತರಿಸಿಕೊಂಡಿದ್ದಾರೆ. ಆದ್ರೆ ಈ ವಾರವೂ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಅವರು ಗೈರಾಗಲಿದ್ದಾರೆ.

ಸದ್ಯ ಇರುವ ಸನ್ನಿವೇಶದಲ್ಲಿ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ಎಂದು ವಾಹಿನಿ ತಿಳಿಸಿದೆ.

The post ಈ ವಾರವೂ ಬಿಗ್​​ಬಾಸ್​ ವೀಕೆಂಡ್​ ಎಪಿಸೋಡ್​​ಗಳಲ್ಲಿ ಇರಲ್ಲ ಸುದೀಪ್ appeared first on News First Kannada.

Source: newsfirstlive.com

Source link