ಈ ವಾರ ಪ್ರೇಕ್ಷಕರ ಮುಂದೆ ಮೂರು ಡಿಫರೆಂಟ್ ಸಿನಿಮಾಗಳ ಮಹಾ ಸಿನಿಯಾಗವಾಗಲಿದೆ. ಒಂದಕ್ಕಿಂತ ಒಂದು ಡಿಫರೆಂಟ್ ಸಿನಿಮಾಸ್. ಹಾಗಾದ್ರೆ ಈ ವಾರ ತೆರೆಕಾಣುತ್ತಿರುವ ಮೂರು ಮಸ್ತ್ ಮೂವಿಗಳ್ಯಾವುವು..
ಕಾಣದ ಕೊರೊನಾ ಕಾಟ ಆಟ ಪಾಠ ಎಲ್ಲವೂ ಮುಗಿದು ಚಿತ್ರರಂಗ ಈಗ ನಿದಾನವಾಗಿ ಚೇತರಿಕೆಯ ಬೆಳ್ಳಿ ಬೆಳಕನ್ನ ಕಾಣುತ್ತಿದೆ.. ಕಳೆದ ವಾರ ಪ್ರೇಮಂ ಪೂಜ್ಯಂ ಸಿನಿಮಾದ ಸೂಪರ್ ಸಕ್ಸಸ್ನ ನಂತರ ಚಿತ್ರಮಂದಿಗಳ ಅಂಗಳದಲ್ಲಿ ಭರವಸೆಯ ತಂಗಾಳಿ ಬೀಸುತ್ತಿದೆ.. ಪ್ರೇಮಂ ಪೂಜ್ಯಂ ಸಿನಿಮಾ ನಂತರ ಈ ವಾರ ಮೂರು ಸಿನಿಮಾಗಳ ಬೆಳಕು ಬೆಳ್ಳಿ ತೆರೆಯನ್ನ ಬೆಳಗಲಿದೆ.. ಆ ಮೂರು ಸಿನಿಮಾಗಳ ಲೆಕ್ಕ ಮತ್ತು ನಿರೀಕ್ಷೆಯ ಮನಮೋಹಕ ನಿಮಗಾಗಿ..
ಈ ವಾರ ಮೂರು ಮಸ್ತ್ ಸಿನಿಮಾಗಳ ಮೇಳ
ಸೂಪರ್ ಕಾಪ್ ಆಗಿ ರಮೇಶ್ ಅರವಿಂದ್
ರಮೇಶ್ ಅರವಿಂದ್ ನಟನೆಯ ಜೊತೆಗೆ ನಿರ್ದೇಶನ ಮಾಡಿರುವ ಸೈಬರ್ ಕ್ರೈ ಥ್ರಿಲ್ಲರ್ ಬೇಸಡ್ ಸಿನಿಮಾ 100.. ಟ್ರೈಲರ್ ನಿಂದ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿರುವ 100 ಸಿನಿಮಾ ಅನೇಕ ವಿಚಾರಗಳಿಂದ ಘಮ ಗಮನ ಸೇಳೆಯುತ್ತಿದೆ.
ನಿರೀಕ್ಷೆಯ ‘‘ಗರುಡ ಗಮನ ವೃಷಭ ವಾಹನ’’
‘‘ಒಂದು ಮೊಟ್ಟೆಯ ಕಥೆ’’ ಖ್ಯಾತಿಯ ರಾಜ್ ಬಿ ಶೆಟ್ಟಿ ನಟನೆಯ ಹಾಗೂ ನಿರ್ದೇಶನದ ಸಿನಿಮಾ ‘‘ಗರುಡ ಗಮನ ವೃಷಭ ವಾಹನ’’.. ರಾಜ್ ಬಿ ಶೆಟ್ಟಿ ಜೊತೆ ಮಲ್ಟಿಟ್ಯಾಲೆಂಟೆಡ್ ರಿಷಬ್ ಶೆಟ್ಟಿ ಸೇರಿರೋದು ಗರುಡ ಗಮನ ವೃಷಭ ವಾಹನ ಚಿತ್ರದ ಮೇಲೆ ಸಖತ್ ನಿರೀಕ್ಷೆ ಮೂಡುವಂತೆ ಮಾಡಿದೆ.. ಟ್ರೈಲರು ಹಾಗೂ ಮೇಕಿಂಗು ಈಗಾಗಲೇ ಚಿತ್ರಪ್ರೇಮಿಗಳ ಮನಸನ್ನ ಗೆದ್ದಾಗಿದೆ.. ಇನೇನಿದ್ರು ಸಿನಿಮಾ ಹೆಂಗಿದೆ ಅನ್ನೋದನ್ನ ನೋಡಬೇಕು.
ಮನುರಂಜನ್ ಅಭಿನಯದ ‘‘ಮುಗಿಲ್ ಪೇಟೆ’’
ಮುಗಿಲ್ ಪೇಟೆ.. ಜೂನಿಯರ್ ಕ್ರೇಜಿಸ್ಟಾರ್ ಮನುರಂಜನ್ ನಟನೆಯ ಸಿನಿಮಾ.. ಮುಗಿಲ್ ಪೇಟೆ ಸಿನಿಮಾ ತಂಡದ ಮಂದಿ ಎರಡು ವರ್ಷದಿಂದ ಶೂಟಿಂಗ್ ಅಡ್ಡದಲ್ಲಿ ಸದ್ದು ಮಾಡ್ತಿದ್ದವರು ಸ್ಕ್ರೀನ್ ಮೇಲೆ ಸದ್ದು ಮಾಡಲು ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ.. ಭರತ್ ಎಸ್ ನವುಂದ ನಿರ್ದೇಶನದಲ್ಲಿ ಮುಗಿಲ್ ಪೇಟೆ ಮೂಡಿಬಂದಿದ್ದು ಹಾಡುಗಳು ಹಾಗೂ ಟೀಸರ್ನಿಂದ ಭರವಸೆ ಮೂಡಿಸಿದೆ..ಒಟ್ಟಿನಲ್ಲಿ ಈ ವಾರ ಪ್ರೇಕ್ಷಕರ ಭರ್ಜರಿಯಾದ ಸಿನಿ ಸುಗ್ಗಿಯೇ ಸಿಗಲಿದ್ದು ಯಾವ ಚಿತ್ರಕ್ಕೆ ಪ್ರೇಕ್ಷಕ ಬಹುಪರಾಕ್ ಎನ್ನುತ್ತಾನೋ ಕಾದು ನೋಡಬೇಕು.