ಈ ವಿಮಾನ ನಿಲ್ದಾಣದಲ್ಲಿ ಹಂದಿಗಳಿಗೂ ಉದ್ಯೋಗಾವಕಾಶ; ವಿಚಿತ್ರ ಕಾರಣಕ್ಕೆ ಬೇಸತ್ತು ನಿರ್ಧಾರ ತೆಗೆದುಕೊಂಡ ಆಡಳಿತ | Schiphol Airport of Amsterdam recruits pigs to scare away geese

ಈ ವಿಮಾನ ನಿಲ್ದಾಣದಲ್ಲಿ ಹಂದಿಗಳಿಗೂ ಉದ್ಯೋಗಾವಕಾಶ; ವಿಚಿತ್ರ ಕಾರಣಕ್ಕೆ ಬೇಸತ್ತು ನಿರ್ಧಾರ ತೆಗೆದುಕೊಂಡ ಆಡಳಿತ

ಸ್ಕಿಫೋಲ್​ ಏರ್​ಪೋರ್ಟ್​

ನೆದರ್​ಲ್ಯಾಂಡ್​​ ಆಂಸ್ಟರ್ಡ್ಯಾಮ್ ಸ್ಕಿಫೋಲ್​ ವಿಮಾನ ನಿಲ್ದಾಣ(Amsterdam’s Schiphol Airport)ದಲ್ಲಿ ವಿಚಿತ್ರ ಎನ್ನಿಸುವಂತ ಸಮಸ್ಯೆಯೊಂದು ಎದುರಾಗಿದೆ. ಈ ಸಮಸ್ಯೆ ನಿವಾರಣೆಗಾಗಿ ಅಲ್ಲಿ ಹಂದಿಗಳಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ. ಅರೆ..ಹಂದಿಗಳಿಗೂ ಏರ್​ಪೋರ್ಟ್​​ನಲ್ಲಿ ಕೆಲಸವಾ? ಹೀಗೊಂದು ಕುತೂಹಲ ಮೂಡಿದ್ದರೆ, ಈ ಸ್ಟೋರಿ ಓದಿ..

ನೆದರ್​ಲ್ಯಾಂಡ್​​ನ ಪ್ರಮುಖ ವಿಮಾನ ನಿಲ್ದಾಣ ಆಗಿರುವ ಸ್ಕಿಫೋಲ್​ ಏರ್​ಪೋರ್ಟ್​ ಸುಮಾರು 10.3 ಚದರ ಮೈಲುಗಳಷ್ಟು ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಇಲ್ಲಿ ಮಳೆಯಾದರೆ ನೀರು ನಿಲ್ಲುತ್ತದೆ. ಆ ಪ್ರದೇಶ ತುಂಬ ಫಲವತ್ತಾಗಿದ್ದು ಕೃಷಿ ಮಾಡಲು ಯೋಗ್ಯ ಭೂಮಿ. ತನ್ನಿಂದ ತಾನೆ ಅಲ್ಲಿ ಬೆಳೆಯುವ ಸೊಂಪಾದ ಮೇವು ತಿನ್ನಲು ವಿವಿಧ ಪ್ರಾಣಿಗಳು ಬರುತ್ತವೆ. ಅಷ್ಟೇ ಅಲ್ಲ ವಿವಿಧ ಪ್ರಬೇಧದ ಪಕ್ಷಿಗಳೂ ಬಂದು ನೆಲೆಸುತ್ತವೆ. ಇಲ್ಲಿ ಹುಲ್ಲು ಹುಲುಸಾಗಿ ಬೆಳೆಯುವ ಕಾರಣಕ್ಕೆ ಪಕ್ಷಿಗಳ ಸಂಖ್ಯೆ ಮಿತಿಮೀರುತ್ತಿದ್ದು, ವಿಮಾನಗಳಿಗೆ ಅಡಚಣೆಯಾಗುತ್ತಿದೆ. ಏರ್​ಪೋರ್ಟ್​​ನ ರನ್​ವೇಗಳ ನಡುವಲ್ಲಿ ಇರುವ ಕೃಷಿ ಯೋಗ್ಯ ಭೂಮಿಗಳಲ್ಲಿ ಹೆಬ್ಬಾತುಗಳ (geese) ಸಂಖ್ಯೆ ಮಿತಿಮೀರಿದೆ. ಹೆಬ್ಬಾತುಗಳು ರನ್​ವೇಗೆ ಬರುತ್ತವೆ..ಅವುಗಳನ್ನು ಸಂಭಾಳಿಸುವುದೇ ಕಷ್ಟವಾಗಿಬಿಟ್ಟಿದೆ.

ಈ ಹೆಬ್ಬಾತುಗಳ ಸಮಸ್ಯೆಯಿಂದ ಮುಕ್ತವಾಗಲು ಏರ್​ಪೋರ್ಟ್​​ ಪ್ರಾಧಿಕಾರ ಹಂದಿಗಳನ್ನು ತಂದುಬಿಟ್ಟಿದೆ. ರನ್​ ವೇ ಮಧ್ಯ ಇರುವ ಪ್ರದೇಶದಲ್ಲಿ ಹಂದಿಗಳನ್ನು ಬಿಡಲಾಗಿದ್ದು, ಅವು ಅತ್ತಿಂದಿತ್ತ ಗಸ್ತು ತಿರುಗಿದಂತೆ ಓಡಾಡುತ್ತಿವೆ. ಇದರಿಂದಾಗಿ ಹೆಬ್ಬಾತುಗಳು ಬೆದರುತ್ತಿವೆ. ಸುಮಾರು 20 ಹಂದಿಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ.

ಯುರೋಪ್​ನ ಮೂರನೇ ಅತಿದೊಡ್ಡ ಏರ್​ಪೋರ್ಟ್​ ಆಗಿರುವ ಈ ಸ್ಕಿಫೋಲ್​ ಏರ್​ಪೋರ್ಟ್​​ನಲ್ಲಿ ಜನಜಂಗುಳಿ ಜಾಸ್ತಿ. ಹಾಗೇ, ಇಲ್ಲಿಂದ ಹೋಗುವ, ಇಲ್ಲಿಗೆ ಬರುವ ವಿಮಾನಗಳ ಸಂಖ್ಯೆಯೂ ಹೆಚ್ಚು. ಕಾರ್ಗೋ ವ್ಯವಸ್ಥೆಯೂ ದೊಡ್ಡಮಟ್ಟದಲ್ಲಿದ್ದು, ಸಾಗಣೆ ವಿಮಾನಗಳ ಸಂಚಾರವೂ ಜಾಸ್ತಿಯಿದೆ. ಈ ಏರ್​ಪೋರ್ಟ್​ನಲ್ಲಿಆರು ರನ್​ವೇಗಳಿದ್ದು, ಅದರ ಮಧ್ಯೆಯೆಲ್ಲ ಕೃಷಿಯೋಗ್ಯ ಭೂಮಿಯಿದೆ. ಅಲ್ಲಿನ ಸೊಂಪಾದ ಹುಲ್ಲು, ನಿಂತ ನೀರಿನ ಜಾಗ ಪ್ರಾಣಿ-ಪಕ್ಷಿಗಳ ಬೀಡಾಗಿದೆ.

ಇದನ್ನೂ ಓದಿ: ‘ಇನ್ಮೇಲೆ ಒಳ್ಳೇ ಮನುಷ್ಯ ಆಗ್ತೀನಿ’; ಎನ್​ಸಿಬಿ ಅಧಿಕಾರಿಗಳಿಗೆ ಭರವಸೆ ನೀಡಿದ ಶಾರುಖ್​ ಪುತ್ರ ಆರ್ಯನ್​ ಖಾನ್​

ಸಿಂದಗಿ ಉಪಚುನಾವಣೆ: ಬಿಜೆಪಿಗೆ ಮುಖ್ಯಮಂತ್ರಿಯ ಆಸರೆ, ಕಾಂಗ್ರೆಸ್​ಗೆ ಅನುಕಂಪದ ನಿರೀಕ್ಷೆ, ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್ ತಂತ್ರ

TV9 Kannada

Leave a comment

Your email address will not be published. Required fields are marked *