ಬೆಂಗಳೂರು: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರ ವೇಳೆ ನಗರದಲ್ಲಿರುವ ವಿದ್ಯುತ್ ಚಿತಾಗಾರಗಳ ಬಳಿ ಎದುರಾಗುತ್ತಿದ್ದ ಸಮಸ್ಯೆಗಳನ್ನು ತಪ್ಪಿಸಲು ತಾವರೆಕೆರೆಯ ಬಳಿ ಸರ್ಕಾರ ಬಯಲು ಚಿತಾಗಾರ ನಿರ್ಮಾಣ ಮಾಡಿತ್ತು. ನಿತ್ಯ ಇಲ್ಲಿ ಸೋಂಕಿನಿಂದ ಸಾವನ್ನಪ್ಪಿದ ಹಾಗೂ ನಾನ್​​ ಕೋವಿಡ್​​ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ. ಆದರೆ ಬಯಲು ಚಿತಾಗಾರ ಬಳಿಯೂ ಆ್ಯಂಬುಲೆನ್ಸ್​​ಗಳು ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯಗಳು ಕಂಡು ಬಂದಿದೆ.

ತಾವರೆಕೆರೆ ಬಯಲು ಚಿತಾಗಾರದ 4 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಒಟ್ಟಿಗೆ 20 ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರಂತೆ ಇಂದು ಬೆಳಗ್ಗೆಯೇ ಕೋವಿಡ್​​​ನಿಂದ ಸಾವನ್ನಪ್ಪಿದ 13 ಮೃತದೇಹ ಹಾಗೂ 2 ನಾನ್​​ ಕೋವಿಡ್​​ ಮೃತದೇಹಗಳ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ. ಶವಾಗಾರದ ಸಿಬ್ಬಂದಿ ಕೋವಿಡ್​ನಿಂದ ಮೃತ ಪಟ್ಟವರ ಬಗ್ಗೆ ಮಾಹಿತಿ ದಾಖಲಿಸಿಕೊಳ್ಳುತ್ತಿದ್ದು, ಈಗಾಗಲೇ ಒಟ್ಟು 40 ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲು ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಚಿತಾಗಾರದ ಎದುರು ಒಟ್ಟು 32 ಆ್ಯಂಬುಲೆನ್ಸ್​​​​​ಗಳು ಸಾಲುಗಟ್ಟಿ ನಿಂತಿವೆ. ಇನ್ನೂ ಸುಮನಹಳ್ಳಿ ಮತ್ತು ಮೇಡಿ ಅಗ್ರಹಾರ ಚಿತಾಗಾರ ಬಳಿಯ ರಸ್ತೆಯ ಮೇಲೂ ಆ್ಯಂಬುಲೆನ್ಸ್ ಗಳು ಸಾಲುಗಟ್ಟಿ ನಿಂತಿವೆ.

The post ಈ ಸಾವಿಗೆ ಕೊನೆ ಎಂದು? ಇಂದೂ ತಾವರೆಕೆರೆ ಚಿತಾಗಾರದ ಬಳಿ ಸಾಲು ಗಟ್ಟಿ ನಿಂತ 40 ಆ್ಯಂಬುಲೆನ್ಸ್​​ಗಳು appeared first on News First Kannada.

Source: newsfirstlive.com

Source link