ಮಂಗಳೂರು: ಪ್ರೊಬೇಷನರಿ ಮಹಿಳಾ ಪಿಎಸ್​​​ಐ ಕೊರೊನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪ್ರೊಬೇಷನರಿ ಪಿಎಸ್ಐ ಆಗಿ ಕರ್ತವ್ಯದಲ್ಲಿದ್ದ ಕೋಲಾರ ಮೂಲದ ಶ್ಯಾಮಿಲಿ (24) ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಶ್ಯಾಮಿಲಿ ಅವರು 7 ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಎರಡು ತಿಂಗಳ ಹಿಂದೆ ಇಲಾಖೆಯಿಂದ ರಜೆ ಪಡೆದು ಕೋಲಾರಕ್ಕೆ ತೆರಳಿದ್ದರು. ಅವರಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮೇ 2ರಂದು ಕೋಲಾರದ ಆರ್.ಎಂ. ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಪಿಎಸ್​ಐ ಶಾಮಿಲಿ (24) ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ಕುರಿತು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದು, 24 ವರ್ಷದ ಶಾಮಿಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆಯಿಂದ ಪಿಎಸ್​​ಐ ಸಾವನ್ನಪ್ಪಿದ್ದು, ಮೃತಳ ಆತ್ಮಕ್ಕೆ ಶಾಂತಿ ಸಿಗಲಿ. ಪೊಲೀಸರೊಂದಿಗೆ ಸಹಕರಿಸಿ. ಮನೆಯಲ್ಲಿ ಇರಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

The post ಈ ಸಾವು ನ್ಯಾಯವೇ? 7 ತಿಂಗಳ ಗರ್ಭಿಣಿಯಾಗಿದ್ದ ಪಿಎಸ್​​ಐ ಕೊರೊನಾ ಸೋಂಕಿಗೆ ಬಲಿ appeared first on News First Kannada.

Source: newsfirstlive.com

Source link