ಟಾಪ್ 10 ಸುದ್ದಿಗಳ ಸಂಕ್ಷಿಪ್ತ ಹೂರಣ ಇಲ್ಲಿದೆ

1. ರಾಜ್ಯದಲ್ಲಿ ನಿನ್ನೆ 24,714 ಸೋಂಕಿತರು ಡಿಸ್ಚಾರ್ಜ್
ರಾಜ್ಯದಲ್ಲಿ ನಿನ್ನೆ 44,631 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಂದೇ ದಿನ 292 ಮಂದಿ ಸೋಂಕಿನಿಂದಾಗ ಪ್ರಾಣ ಬಿಟ್ಟಿದ್ದರೆ, ಆದ್ರೆ ನಿನ್ನೆ ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಕೂಡ ಹೆಚ್ಚಿದೆ. ರಾಜ್ಯದಲ್ಲಿ ಒಟ್ಟು 24,714 ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ಆಗಿದ್ದಾರೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೂಡ ನಿನ್ನೆ 13,946 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

2. ಬೆಡ್ ಸಿಗದೆ ಆಸ್ಪತ್ರೆ ಮುಂದೆ ಪ್ರಾಣಬಿಟ್ಟ ಸೋಂಕಿತ
ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಕ್ಸಿಜನ್ ದುರಂತ ನಡೆದ ಎರಡೇ ದಿನದಲ್ಲಿ ಇದೇ ಆಸ್ಪತ್ರೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಬೆಡ್ ಸಿಗದೆ ಸೋಂಕಿತನೊಬ್ಬ ಆಸ್ಪತ್ರೆ ಮುಂದೆಯೇ ಪ್ರಾಣ ಬಿಟ್ಟಿದ್ದಾನೆ. ಹೋಂ ಐಸೋಲೇಷನ್ನಲ್ಲಿದ್ದ ನಗರದ ಅಂಬೇಡ್ಕರ್ ಬಡಾವಣೆಯ ಯುವಕ ಅಭಿಷೇಕ್ ಎಂಬಾತನನ್ನು ಸ್ಯಾಚುರೇಷನ್ ಕಡಿಮೆಯಾಗಿ ಅಡ್ಮಿಟ್ ಮಾಡಿಸಲು ಕರೆತರಲಾಗಿತ್ತು. ಆದರೆ ತಕ್ಷಣ ಬೆಡ್ ಸಿಗದೆ ಆಸ್ಪತ್ರೆಯ ಆವರಣದಲ್ಲೇ ಆತ ಪ್ರಾಣ ಬಿಟ್ಟಿದ್ದಾನೆ. ಬೆಡ್ ಸಿಗದೆ ಅಭಿಷೇಕ್ ಮೃತಪಟ್ಟಿದ್ದಕ್ಕೆ ಸಂಬಂಧಿಕರು, ಸ್ನೇಹಿತರು ರೊಚ್ಚಿಗೆದ್ದಿದ್ರು. ಆಸ್ಪತ್ರೆಗೆ ನುಗ್ಗಿ ಕಿಟಕಿ ಗ್ಲಾಸ್‌ ಪುಡಿಪುಡಿ ಮಾಡಿದ್ರು. ಸ್ಥಳಕ್ಕಾಗಮಿಸಿದ ಎಎಸ್ಪಿ ಅನಿತಾ ಬಿ ಹದ್ದಣ್ಣನವರ್ ವಾತಾವರಣ ತಿಳಿಗೊಳಿಸಿದ್ರು.

3. ಐಸಿಯುನಲ್ಲಿ ಕರೆಂಟ್ ಇಲ್ಲದೆ ಪ್ರಾಣಬಿಟ್ಟ ಸೋಂಕಿತ
ಮಂಡ್ಯ ಮಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿ ಕೊರೊನಾ ಸೋಂಕಿತ ಮೃತಪಟ್ಟಿದ್ದಾನೆ. 29 ವರ್ಷದ ಇಂಡುವಾಳು ಗ್ರಾಮದ ಸುನೀಲ್​​​ಗೆ 14 ದಿನಗಳ ಹಿಂದೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಮಿಮ್ಸ್ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ಮಧ್ಯಾಹ್ನ ವಿದ್ಯುತ್ ಸಂಪರ್ಕ ಕಡಿತವಾದಾಗ ಬ್ಯಾಕಪ್ ಇಲ್ಲದಿರೋದ್ರಿಂದ ಸುನೀಲ್ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಅಲ್ದೆ ಮೃತದೇಹ ಕೊಡಲು ವೈದ್ಯರು ನಿರಾಕರಿಸಿದ್ದರು. ಆಸ್ಪತ್ರೆಯಲ್ಲಿ ಗೋಳಾಡಿ, ಅವ್ಯವಸ್ಥೆ ವಿರುದ್ಧ ಕಿಡಿಕಾರಿದಕ್ಕೆ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಆರೋಪ ಮಾಡಲಾಗಿದೆ. ಬಳಿಕ ಪೊಲೀಸರ ಮಧ್ಯಸ್ಥಿಕೆಯಿಂದ ಮೃತನ ಶವ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

4. ಮೃತ ಸೋಂಕಿತ ಮಗುವನ್ನ ಬಿಟ್ಟು ಪೋಷಕರು ಪರಾರಿ
ಕೊರೊನಾ ಸೋಂಕಿನಿಂದ ಮೃತಪಟ್ಟ ಎರಡು ತಿಂಗಳ ಮಗುವನ್ನ ಪೋಷಕರು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾದ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ಆರೋಗ್ಯ ಸಮಸ್ಯೆಯಿದ್ದ ಮಗುವನ್ನ ಸೋಮವಾರ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಮಗು ಆಸ್ಪತ್ರೆಗೆ ಬಂದ ಕೆಲವೇ ಹೊತ್ತಿಗೆ ಸಾವನ್ನಪ್ಪಿದೆ. ಬಳಿಕ ಮಗುವನ್ನು ಪರೀಕ್ಷಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮಗು ಸೋಂಕಿನಿಂದ ಸಾವನ್ನಪ್ಪುತ್ತಿದ್ದಂತೆ ಪೋಷಕರಿಗೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿತ್ತು. ಆದರೆ ಪೋಷಕರು ಸತ್ತ ಮಗುವನ್ನೂ ಬಿಟ್ಟು ಪರಾರಿಯಾಗಿದ್ದಾರೆ.

5. ತಂದೆಯ ಚಿತೆಗೆ ಹಾರಿದ ಮಗಳು
ಕೊರೊನಾ ಸೋಂಕಿನಿಂದ ಮೃತಪಟ್ಟ ತಂದೆಯ ಸಾವಿನಿಂದ ದುಃಖಿತಳಾದ ಮಗಳು, ಸುಡುವ ಚಿತೆಗೆ ಹಾರಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. 73 ವರ್ಷದ ದಾಮೋದರ್ದಾಸ್ ಶಾರದಾ, ಮಂಗಳವಾರ ಬೆಳಿಗ್ಗೆ ಕೊರೊನಾದಿಂದ ಸಾವನ್ನಪ್ಪಿದ್ದರು. ರೋಗಿಯ ಸಾವಿನ ನಂತರ ಅಂತ್ಯಕ್ರಿಯೆಗಾಗಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಆದರೆ ಅಂತ್ಯಕ್ರಿಯೆಯ ವೇಳೆ ಕಿರಿಯ ಮಗಳು ಸ್ಮಶಾನದ ಒಳಗೆ ಹೋಗಬೇಕೆಂದು ಹಟ ಹಿಡಿದಿದ್ದಾಳೆ. ಈ ವೇಳೆ ಇದ್ದಕ್ಕಿದ್ದಂತೆ ಒಳ ಹೋದ ಪುತ್ರಿ ಚಂದ್ರಕಲಾ ತಂದೆಯ ಸುಡುವ ಚಿತೆಗೆ ಹಾರಿದ್ದಾರೆ ಅಂತಾ ಪೊಲೀಸರು ತಿಳಿಸಿದ್ದಾರೆ. ಇನ್ನು ಅಕೆಯನ್ನ ಬಾರ್ಮರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೇಕಡಾ 70ರಷ್ಟು ದೇಹ ಸುಟ್ಟು ಹೋಗಿದೆ ಅಂತಾ ತಿಳಿಸಿದ್ದಾರೆ.

6. ಮೃಗಾಲಯದ 8 ಸಿಂಹಗಳಿಗೆ ಕೊರೊನಾ ಧೃಢ
ಹೈದರಾಬಾದ್ ಮೃಗಾಲಯದಲ್ಲಿನ 8 ಸಿಂಹಗಳಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಇದೇ ಮೊದಲ ಬಾರಿ ಭಾರತದಲ್ಲಿ ಪ್ರಾಣಿಗಳಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಆತಂಕ ಹೆಚ್ಚಿಸಿದೆ. ಹೈದರಾಬಾದ್ ನೆಹರು ಜೂಲಾಜಿಕಲ್ ಪಾರ್ಕ್ ನ 8 ಸಿಂಹಗಳಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಏಪ್ರಿಲ್ 19ರಂದು ಮೃಗಾಲಯದಲ್ಲಿದ್ದ 4 ಹೆಣ್ಣು ಮತ್ತು 4 ಗಂಡು ಸಿಂಹಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆರ್ಟಿಸಿಪಿಆರ್ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ.

7. ಡಿಆರ್​​​ಡಿಓದಿಂದ 5 ಆಕ್ಸಿಜನ್ ಸ್ಥಾವರಗಳ ಸ್ಥಾಪನೆ
ಭಾರತದಲ್ಲಿ ಕೋವಿಡ್ ಪ್ರಕರಣಗಳ ತೀವ್ರ ಉಲ್ಬಣದ ಹಿನ್ನಲೆಯಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನ ಒದಗಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ – ಡಿ.ಆರ್.ಡಿ.ಓ ಮುಂದಾಗಲಿದೆ ಎಂದು ರಕ್ಷಣಾ ಸಚಿವಾಲು ತಿಳಿಸಿದೆ. ಇನ್ನು ಇದರ ಭಾಗವಾಗಿ ದೆಹಲಿಯಲ್ಲಿ ಐದು ಆಕ್ಸಿಜನ್ ಸ್ಥಾವರಗಳನ್ನ ಮೂರು ತಿಂಗಳೊಳಗೆ ನಿರ್ಮಿಸಲಾಗುವುದು ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದ್ದು, ಇದು ಪಿಎಂ ನಿಧಿಯ ಅನುದಾನದಲ್ಲಿ ಸ್ಥಾಪನೆ ಮಾಡಲಾಗುವುದೆಂದು ಅಧಿಕೃತ ಮೂಲಗಳು ತಿಳಿಸಿವೆ.

8. ‘ಕೊರೊನಾ ತಡೆಗಟ್ಟಲು ಲಾಕ್​ಡೌನ್ ಒಂದೇ ಅಸ್ತ್ರ’
ದೇಶವನ್ನೂ ಸಂಪೂರ್ಣ ಲಾಕ್​ಡೌನ್ ಮಾಡದಿದ್ರೆ ಕೊರೊನಾ 3ನೇ ಅಲೆ ಅಪ್ಪಳಿಸತ್ತೆ ಅಂತಾ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ. ಕೆಲ ರಾಜ್ಯಗಳಲ್ಲಿ ಕೊರೊನಾ ತಡೆಗಟ್ಟಲು ವೀಕೆಂಡ್ ಲಾಕ್​ಡೌನ್ ಹಾಗೂ ಕ್ಲೋಸ್​​ಡೌನ್ ಘೋಷಿಸಿದ್ದಾರೆ. ಆದ್ರೆ ದೇಶಾದ್ಯಂತ ಲಾಕ್​ಡೌನ್ ಮಾಡಿ ಜನ ಒಬ್ಬರಿಗೊಬ್ಬರು ಅಂತರ ಪಾಲಿಸಿದ್ರೆ ಮಾತ್ರ ನಾವು ಕೊರೊನಾದಿಂದ ಬಚಾವ್ ಆಗಲು ಸಾಧ್ಯ ಅಂತಾ ಗುಲೇರಿಯಾ ಸಲಹೆ ನೀಡಿದ್ದಾರೆ.

9. ಮುಖ್ಯಮಂತ್ರಿಯಾಗಿ ದೀದಿ ಪ್ರಮಾಣ ವಚನ
ಟಿಎಂಸಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಮಮತಾ ಇವತ್ತು ಮೂರನೇ ಅವಧಿಗೆ ಸಿಎಂ ಆಗಿ ಗದ್ದುಗೆ ಏರಲಿದ್ದಾರೆ. ಬೆಳಗ್ಗೆ 10.45ಕ್ಕೆ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಅವರೊಬ್ರೆ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ವಾರಾಂತ್ಯ ಅಥವಾ ಮುಂದಿನ ವಾರ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಕೊರೊನಾ ಉಲ್ಬಣ ಹಿನ್ನೆಲೆ ರಾಜಭವನದಲ್ಲಿ ಸರಳ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರ ಆಯ್ದ ಪ್ರಮುಖ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

10. ಕೊರೊನಾದಿಂದಾಗಿ ಬಿಸಿಸಿಐಗೆ 2000 ಕೋಟಿ ನಷ್ಟ
ಕೊರೊನಾ ಸೋಂಕಿನ ಪರಿಣಾಮ ಈ ಬಾರಿಯ ಐಪಿಎಲ್ ಟೂರ್ನಿಯು ಮೇಲೆ ಬಿದ್ದಿದೆ, ಇದರಿಂದ ಬಿ.ಸಿ.ಸಿ.ಐ ಗೆ ಸುಮಾರು 2 ಸಾವಿರ ಕೋಟಿ ನಷ್ಟವಾಗಿದೆ. ಸದ್ಯ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರೋದ್ರಿಂದ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಇದರಿಂದ ಟೂರ್ನಿಯ ಪ್ರಸಾರ ಹಕ್ಕನ್ನು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಭಾರೀ ನಷ್ಟವಾಗಿದ್ದು, ಈ ಹೊರೆ ಇದೀಗ ಬಿ.ಸಿ.ಸಿಐ ನ ಹೆಗಲೇರಿದೆ. ಇದರ ಜೊತೆಗೆ ಟೈಟಲ್ ಪ್ರಾಯೋಜಕತ್ವ ಪಡೆದಿರುವ ವಿವೋ, ಹಾಗೆಯೇ ಸಹಪ್ರಾಯೋಜಕತ್ವ ಪಡೆದಿರುವ ಅನ್ಅಕಾಡೆಮಿ, ಡ್ರೀಮ್ ಇಲೆವೆನ್, ಟಾಟಾ ಮೋಟರ್ಸ್ ನಿಂದ ಬರಬೇಕಿದ್ದ ಮೊತ್ತ ಕೂಡ ಇದೀಗ ಬಿಸಿಸಿಐಗೆ ನಷ್ಟವಾಗಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​ಅಪ್​ appeared first on News First Kannada.

Source: newsfirstlive.com

Source link