1. ಕೇಂದ್ರದಿಂದ ರಾಜ್ಯಕ್ಕೆ ಆಕ್ಸಿಜನ್ ನೆರವು
ರಾಜ್ಯದಲ್ಲಿ ತಲೆದೋರಿರುವ ಪ್ರಾಣವಾಯು ಆಕ್ಸಿಜನ್​​​​ ಕೊರತೆ ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಲಾ 20 ಟನ್ ಸಾಮರ್ಥ್ಯದ 2 ಲಿಕ್ವಿಡ್ ಆಕ್ಸಿಜನ್ ಕಂಟೇನರ್​ಗಳನ್ನ ರಾಜ್ಯಕ್ಕೆ ಕಳುಹಿಸಿದೆ. ಈ ಬಗ್ಗೆ ಟ್ವಿಟ್ಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಬಿ.ಎಸ್ ಯಡಿಯೂರಪ್ಪ 2 ಹೆಚ್ಚುವರಿ ಕಂಟೇನರ್​ಗಳನ್ನ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮೂಲಕ ರಾಜ್ಯಕ್ಕೆ ತರಿಸಿಕೊಳ್ಳಲಾಗುವುದು ಅಂತಾ ತಿಳಿಸಿದ್ದಾರೆ. ಇನ್ನು ರಾಜ್ಯಕ್ಕೆ ಲಿಕ್ವಿಡ್ ಆಕ್ಸಿಜನ್ ತರಲು 5 ಟ್ಯಾಂಕರ್​ಗಳನ್ನ ಒಡಿಶಾಗೆ ಕಳುಹಿಸಿದ್ದು ಸುಮಾರು 75 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು 2 ರಿಂದ ಮೂರು ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಅಂತಾ ಟ್ವೀಟ್ ಮಾಡಿದ್ದಾರೆ.

2. ಹಾಸನ ಲಾಕ್​ಡೌನ್ ಆದೇಶ ವಾಪಸ್
ಹಾಸನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಾರದಲ್ಲಿ ನಾಲ್ಕು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಆದ್ರೆ ಈ ಆದೇಶವನ್ನ ಉಸ್ತುವಾರಿ ಸಚಿವ ಗೋಪಾಲಯ್ಯ ವಾಪಸ್ ಪಡೆದಿದ್ದಾರೆ. ಜಿಲ್ಲೆಯಲ್ಲಿ ಎಂದಿನಂತೆ ಜನತಾ ಕರ್ಫ್ಯೂ ಜಾರಿಯಲಿರುತ್ತೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರ ಕ್ಷಣಕೊಂದು ನಿರ್ಧಾರದಿಂದ ಜಿಲ್ಲೆಯ ಜನತೆಗೆ ಗೊಂದಲ ಸೃಷ್ಠಿಯಾಗಿದೆ.

3. ವ್ಯಾಪರಸ್ಥನ ಮೇಲೆ ದರ್ಪ ತೋರಿದ ಪೊಲೀಸ್
ಪಂಜಾಬ್ ರಾಜ್ಯದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಹಲವು ಕಟ್ಟನಿಟ್ಟಿನ ಕ್ರಮ ಕೈಗೊಂಡಿದೆ. ನಿಯಮ ಪಾಲಿಸಿಲ್ಲ ಅಂತ ರಸ್ತೆ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ವ್ಯಾಪರಸ್ಥನ ಬಂಡಿಯನ್ನ ಫಾಗ್ವಾರಾ ಜಿಲ್ಲೆಯ ಪೊಲೀಸರು ಧ್ವಂಸ ಮಾಡಿದ್ದಾರೆ. ಕಪುರ್ಥಾಲಾ ಎಂಬ ಪೊಲೀಸ್, ವ್ಯಾಪಾರಿಯ ತರಕಾರಿ ಬುಟ್ಟಿಯನ್ನ ಕಾಲಿನಿಂದ ಒದಿದ್ದಲ್ಲದೇ ತರಕಾರಿಯನ್ನ ಸಂಪೂರ್ಣ ಧ್ವಂಸ ಮಾಡಿದ್ದಾರೆ. ಇನ್ನ ಈ ಪೊಲೀಸಪ್ಪನ ದರ್ಪದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದ್ದಾಡುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

4. ಮಾಸ್ಕ್ ಹಾಕಲು ಹೇಳಿದ ಅಧಿಕಾರಿಗೆ ಥಳಿಸಿದ ವ್ಯಾಪಾರಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಕಟ್ಟು ನಿಟ್ಟಿನ ಕ್ರಮವನ್ನ ಜಾರಿಗೆ ತರಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ಕೋವಿಡ್ ನಿಯಮ ಪಾಲನೆ ಮಾಡದಿದ್ದವರಿಗೆ ದಂಡ ವಿಧಿಸಲಾಗುತ್ತಿದೆ. ಸಿಲ್ವಾನಿ ನಗರ ಪಂಚಾಯತ್‌ನಲ್ಲಿ ಮಾಸ್ಕ್ ಹಾಕದೆ ಹಣ್ಣು ವ್ಯಾಪಾರ ಮಾಡುತ್ತಿದ್ದ ಸಲೀಂ ಎಂಬಾತನಿಗೆ, ಪಂಚಾಯತ್ CMO ರಾಜೇಂದ್ರ ಶರ್ಮಾ ಮಾಸ್ಕ್ ಹಾಕಿಕೊಳ್ಳಲು ಆದೇಶ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ವ್ಯಾಪರಿ ರಾಜೇಂದ್ರರನ್ನ ನಡು ರಸ್ತೆಯಲ್ಲಿ ಹಿಗ್ಗಮುಗ್ಗ ಥಳಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದ್ದಾಡುತ್ತಿದೆ.

5. ಸೋಂಕಿತರ ಚಿಕಿತ್ಸೆಗೆ ಆಟೋ ಆಂಬುಲೆನ್ಸ್‌ ಸೇವೆ
ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆಯಿಂದ ಹಲವು ಮಂದಿ ಸೋಂಕಿತರು ಸಾವನಪ್ಪುತ್ತಿದ್ದಾರೆ. ಇದನ್ನ ತಪ್ಪಿಸಲು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ TYCA ಫೌಂಡೇಶನ್ ಸಹಯೋಗದೊಂದಿಗೆ ಆಟೋರಿಕ್ಷಾ ಆಂಬುಲೆನ್ಸ್‌ ಸೇವೆಗೆ ಚಾಲನೆ ನೀಡಿದ್ದಾರೆ. ಪ್ರಾಥಮಿಕ ಕೊರೊನಾ ಲಕ್ಷಣವಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ಈ ಆಟೋರಿಕ್ಷವನ್ನ ಬಳಕೆ ಮಾಡಲಾಗುತ್ತದೆ. ಈ ಆಂಬುಲೆನ್ಸ್‌ಗಳಲ್ಲಿ ಆಕ್ಸಿಜನ್ ಸಿಲಿಂಡರ್ ಮತ್ತು ಸ್ಯಾನಿಟೈಸರ್ ಅಳವಡಿಸಲಾಗಿದೆ. ಇನ್ನು ಆಟೋ ಆಂಬುಲೆನ್ಸ್ ಸೇವೆ ಪಡೆಯಲು ಎರಡು ಹೆಲ್ಪ್​​ಲೈನ್​ಗಳನ್ನೂ ಕೂಡ ತೆರೆಯಲಾಗಿದೆ ಅಂತ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

6. ಭಾರತಕ್ಕೆ ನೆರವಾದ ಆಸ್ಟ್ರೇಲಿಯಾ
ಕೊರೊನಾ 2ನೇ ಅಲೆ ದೇಶವನ್ನ ತೀವ್ರ ಸಂಕಷ್ಟಕ್ಕೆ ದೂಡಿದ್ದು ಎಲ್ಲೆಡೆ ಆಕ್ಸಿಜನ್, ವೆಂಟಿಲೇಟರ್ಗಳ ಕೊರತೆ ಎದುರಾಗಿದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯ ಭಾರತದ ನೆರವಿಗೆ ಧಾವಿಸಿದೆ. ಆಕ್ಸಿಜನ್ ಹಾಗೂ ವೆಂಟಿಲೇಟರ್ಗಳನ್ನು ಭಾತರಕ್ಕೆ ಕಳುಸಹಿಸಿಕೊಟ್ಟಿದೆ. ನಿನ್ನೇ ಆಸ್ಟ್ರೇಲಿಯಾದಿಂದ 1 ಸಾವಿರದ 56 ವೆಂಟಿಲೇಟರ್ಗಳೂ ಹಾಗೂ 43 ಆಕ್ಸಿಜನ್ಸಂದ್ರಾಕಗಳು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ. ಇನ್ನೂ ಸ್ವಿಟ್ಜರ್ಲ್ಯಾಂಡ್ ಮೂಲದ ಯುಬಿಎಸ್ ಬ್ಯಾಂಕ್ 10 ಕೋಟಿ ರೂಪಾಯಿ ನೆರವು ನೀಡಿದೆ

7. ವಿಶ್ವದ ಹೊಸ ಪ್ರಕರಣಗಳ ಪೈಕಿ ಅರ್ಧ ಪಾಲು ಭಾರತದ್ದೆ
ಇಡೀ ಜಗತ್ತಿನಲ್ಲಿ ದಾಖಲಾಗುತ್ತಿರುವ ಒಟ್ಟು ಸೋಂಕಿತರ ಪ್ರಮಾಣದಲ್ಲಿ ಶೇ.50ರಷ್ಟು ಪ್ರಮಾಣ ಭಾರತದಲ್ಲೇ ದಾಖಲಾಗ್ತಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ದೇಶದಲ್ಲಿ ಕಳೆದ ಎರಡು ವಾರದಿಂದ 3 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಇದೀಗ 4 ಲಕ್ಷ ಗಡಿ ಸಮೀಪಿಸಿದೆ. ಪ್ರತಿದಿನ ಸುಮಾರು 3 ಸಾವಿರದ ಐನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದಾರೆ. ಇದರ ಬೆನ್ನಲ್ಲೇ ವಿಶ್ವದ ಒಟ್ಟು ಪ್ರಕರಣದಲ್ಲಿ ಶೇ.46ರಷ್ಟು ಭಾರತದವರೇ ಇದ್ದಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಅಲ್ಲದೆ ಶೇ.25ರಷ್ಟು ಮಂದಿ ಮೃತಪಡುತ್ತಿದ್ದಾರೆ ಅಂತಾ ಆತಂಕವನ್ನೂ ವ್ಯಕ್ತ ಪಡಿಸಿದೆ

8. ಚುನಾವಣೆಗೋಸ್ಕರ ಮದುವೆ ಆದ ಬ್ರಹ್ಮಚಾರಿಗೆ ನಿರಾಸೆ
ಚುನಾವಣೆಗೋಸ್ಕರ ಮದುವೆ ಮಾಡಿಕೊಂಡಿದ್ದ ಬ್ರಹ್ಮಚಾರಿ ಇದೀಗ ನಿರಾಸೆ ಅನುಭವಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಹಾಥಿ ಸಿಂಗ್ ಎಂಬುವರು ಬಲ್ಲಿಯಾ ಜಿಲ್ಲೆಯ ಚಪ್ರಾ ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುವ ಆಸೆ ಹೊಂದಿದ್ದಾರೆ. ಆದ್ರೆ ಆ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ನಿರಾಸೆಗೊಳಗಾಗಿದ್ದರು. ಈ ವೇಳೆ ಕೆಲವರು ಮದುವೆ ಮಾಡಿಕೊಂಡು ಪತ್ನಿಯನ್ನ ಕಣಕ್ಕಿಳಿಸುವಂತೆ ಸಲಹೆ ನೀಡುತ್ತಿದ್ದಂತೆ. ಅದ್ದರಿಂದ ಬ್ರಹ್ಮಚಾರಿ ವೃತವನ್ನೂ ಮುರಿದು ಮದುವೆ ಮಾಡಿಕೊಂಡು ಪತ್ನಿಯನ್ನ ಕಣಕ್ಕಿಳಿಸಿದ್ದರು. ಆದ್ರೆ ಇದೀಗ ಚುನಾವಣಾ ಫಲಿತಾಂಶ ಬಹಿರಂಗಗೊಂಡಿದ್ದು, ಹಾಥಿ ಸಿಂಗ್ ಪತ್ನಿ ನಿಧಿ ಸೋಲು ಕಂಡಿದ್ದಾರೆ.

9. 9 ಮಕ್ಕಳಿಗೆ ಜನ್ಮ ನೀಡಿದ 25 ವರ್ಷದ ಮಹಿಳೆ
ಪಶ್ಚಿಮ ಆಫ್ರಿಕಾದ ಮಾಲಿ ರಾಷ್ಟ್ರದಲ್ಲಿ 25 ವರ್ಷದ ಮಹಿಳೆ ಒಂಬತ್ತು ಶಿಶುಗಳಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದಾಳೆ. ನವಜಾತ ಶಿಶುಗಳಲ್ಲಿ 5 ಹೆಣ್ಣು ಮತ್ತು 4 ಗಂಡು ಮಕ್ಕಳು ಸಹಿತ ಮಹಿಳೆ ಸುರಕ್ಷಿತವಾಗಿದ್ದಾರೆ ಅಂತ ತಿಳಿದುಬಂದಿದೆ. 25 ವರ್ಷದ ತಾಯಿ ಹಲಿಮಾ ಸಿಸ್ಸೆಯವರನ್ನ ವಿಶೇಷ ಆರೈಕೆಯಲ್ಲಿಡಲಾಗಿದೆ ಎಂದು ಮಾಲಿ ದೇಶದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

10. ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಂಗಗಳ ಮಸ್ತಿ
ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಕೋತಿಗಳು ಆಟ ಆಡುವ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ. ಮಂಗಗಳ ತಂಡ ಈಜಾಟದಲ್ಲಿ ತೊಡಗಿರುವ ದೃಶ್ಯ ನೆಟ್ಟಿಗರ ಮನಸನ್ನೂ ಕದ್ದಿದೆ. ಡಾ.ಅಜಯಿತಾ ಎಂಬವರು ತಮ್ಮ ಟ್ವೀಟರ್ ಖಾತೆಯಲ್ಲಿ ಮಂಗಗಳು ಈ ಜಾಡುತ್ತಿರುವ ದೃಶ್ಯ ಹಂಚಿಕೊಂಡಿದ್ದಾರೆ. 25 ಸೆಕೆಂಡಿನ ವಿಡಿಯೋ ಇದಾಗಿದ್ದು. ಈ ಕ್ಲಿಪ್‌ನಲ್ಲಿ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಕೋತಿಗಳು ಈಜುತ್ತಾ ಖುಷಿಪಡುವ ದೃಶ್ಯವಿದೆ. ಮೇಲೆ ಬಂದು ನೀರಿಗೆ ಧುಮುಕುವ ಈ ಕೋತಿಗಳ ಖುಷಿಯನ್ನು ಕಂಡ ಟ್ವೀಟರ್ ಬಳಕೆದಾರರು ಫುಲ್ ಖುಷ್ ಆಗಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​ಅಪ್​ appeared first on News First Kannada.

Source: newsfirstlive.com

Source link