1. ರಾಜ್ಯದಲ್ಲಿ ಲಾಕ್‌ಡೌನ್‌ ಏಳನೇ ದಿನ
ಮಹಾಮಾರಿ ಕೊರೊನಾ ಆರ್ಭಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಘೋಷಿಸಿರೋ ಲಾಕ್​​ಡೌನ್ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯ ಲಾಕ್‌ಡೌನ್‌ ಬಹುತೇಕ ಯಶಸ್ವಿಯಾಗಿದ್ರಿಂದ, ಇವತ್ತು ಸಹ ಎಲ್ಲಾ ಜಿಲ್ಲೆಗಳಲ್ಲಿ ಅದೇ ರೀತಿಯ ಕಟ್ಟುನಿಟ್ಟಿನ ಕ್ರಮಗಳು ಮುಂದುವರಿದಿವೆ. ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಂಪ್ಲೀಟ್​ ಲಾಕ್​ಡೌನ್ ವಿಧಿಸಲಾಗಿದೆ.

2. ಕೆ.ಆರ್‌.ಮಾರ್ಕೆಟ್‌ನಲ್ಲಿ ಜನರ ಗಿಜಿಗಿಜಿ
ಬೆಂಗಳೂರಿನ ಕೆ.ಆರ್‌.ಮಾರ್ಕೆಟ್‌ನಲ್ಲಿ ಮುಂಜಾನೆಯಿಂದಲೇ ಜನರು ಗಿಜಿಗುಡುತ್ತಿದ್ದಾರೆ. ಕೇವಲ ಹೋಲ್​​ಸೇಲ್ ಮಾರ್ಕೆಟ್ ಭಾಗದಲ್ಲಿ ಹೆಚ್ಚಿನ ಜನರು ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮಾರ್ಕೆರ್ಟ್​​ನಲ್ಲಿ ಅಲ್ಲಲ್ಲಿ ತಳ್ಳುವ ಗಾಡಿ ಹಾಗೂ ವ್ಯಾಪಾರಸ್ಥರು ಕಾಣಿಸಿಕೊಂಡಿದ್ದಾರೆ.  ಕೆಲವು  ವ್ಯಾಪಾರಸ್ಥರನ್ನು ಪೊಲೀಸರು ಅಲ್ಲಿಂದ ಎತ್ತಂಗಡಿ ಮಾಡಿಸುತ್ತಿದ್ದಾರೆ.

3. ತೌಕ್ತೆ ಎಫೆಕ್ಟ್‌, ಮಾರ್ಕೆಟ್‌ಗಳಿಗೆ ಬಾರದ ಜನ
ಮೈಸೂರಿನಲ್ಲಿ ಬೆಳಗಿನ ಶಾಪಿಂಗ್‌ಗೆ ವರುಣ ಅಡ್ಡಿಪಡಿಸಿದ್ದಾನೆ. ಜೊತೆಗೆ ವ್ಯಾಪಾರಿಗಳಿಗೂ ಮಳೆರಾಯ ಅಡ್ಡಿಯಾಗಿದ್ದಾನೆ. ಲಾಕ್‌ಡೌನ್ ಮಧ್ಯೆ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಬರ್ತಿದ್ದ ಜನ ಮಳೆಯಿಂದ ಮನೆಯಲ್ಲೇ ಇರುವಂತಾಗಿದೆ. ಇತ್ತ ಕಲಬುರಗಿಯಲ್ಲೂ ಮಳೆಯಿಂದ ರಸ್ತೆಗಳು ಖಾಲಿ ಖಾಲಿಯಾಗಿವೆ. ತೌಕ್ತೆ ಚಂಡಮಾರುತದ ಆರ್ಭಟಕ್ಕೆ ಜನರು ಹೊರ ಬಂದಿಲ್ಲ. ಹೀಗಾಗಿ ತರಕಾರಿ ಮಾರ್ಕೆಟ್​​​ಗಳು ಗ್ರಾಹಕರಿಲ್ಲದೇ ಬಣಗುಡುತ್ತಿವೆ.

4. ಮೇ 18ಕ್ಕೆ ಬಿಎಸ್​ವೈ ಜೊತೆ ಮೋದಿ ವಿಡಿಯೋ ಸಂವಾದ
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಮೇ 18ಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಪ್ರಧಾನಿಗಳ ವಿಡಿಯೋ ಕಾನ್ಫರೆನ್ಸ್‌ನಲ್ಲಿ ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೂಡ ಭಾಗಿಯಾಗುತ್ತಾರೆ‌. ಉತ್ತರ ಕನ್ನಡ, ಹಾಸನ, ಬಳ್ಳಾರಿ, ಮೈಸೂರು, ತುಮಕೂರು, ಕೋಲಾರ, ಕೊಡಗು, ಬೆಂಗಳೂರು ನಗರ, ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ಮಂಡ್ಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭಾಗಿಯಾಗಲಿದ್ದಾರೆ.

5 . 1,418 ಪೊಲೀಸ್ ಸಿಬ್ಬಂದಿಗೆ ಸೋಂಕು 
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2ನೇ ಅಲೆಯ ಕ್ರೂರಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಪೈಕಿ ಸುಮಾರು 1,418 ಮಂದಿಗೆ ಸೋಂಕು ದೃಢಪಟ್ಟಿದ್ದು, 13 ಮಂದಿ ಮೃತಪಟ್ಟಿದ್ದಾನೆ. ಇನ್ನು 725 ಪೊಲೀಸ್ ಸಿಬ್ಬಂದಿ ಹೋಂ ಐಸಿಲೇಷನ್​ನಲ್ಲಿ ಚೇತರಿಸಿಕೊಳ್ಳಿತ್ತಿದ್ರೆ, 655 ಮಂದಿ ವೈರಸ್​​ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

6. ‘ತೌಕ್ತೆ’ ಆರ್ಭಟಕ್ಕೆ ನೆಲಕಚ್ಚಿದ 8 ಮನೆಗಳು 
ತೌಕ್ತೆ ಚಂಡಮಾರುತದ ಹೊಡೆತಕ್ಕೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 8 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಐದು ಮೀನುಗಾರಿಕಾ, ಕೃಷಿ ಶೆಡ್ ಗಳಿಗೆ ಭಾಗಶಃ ಹಾನಿಯಾಗಿದೆ. ಇದೇ ವೇಳೆ ವಿದ್ಯುತ್ ತಂತಿ ತಗಲಿ ಓರ್ವ ಕೃಷಿಕ ಸಾವನ್ನಪ್ಪಿದ್ದಾನೆ. ಕಾಪು ತಾಲೂಕಿನ 51 ವರ್ಷದ ರಮೇಶ್ ಎಂಬ ವ್ಯಕ್ತಿ ಮತಪಟ್ಟಿದ್ದಾನೆ. ಇನ್ನು ಅಪಾಯ ಸ್ಥಳದಲ್ಲಿರು ಜನರನ್ನ ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಬೈಂದೂರಿನ 4, ಕುಂದಾಪುರದ 7 ಕುಟುಂಬಗಳನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಬ್ರಹ್ಮಾವರದ ಕೊಡಿ, ಕಾಪು ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಗತ್ಯವಿದ್ದರೆ ಪುನರ್ವಸತಿ ಕೇಂದ್ರಕ್ಕೆ ಇಲ್ಲಿನ ಜನರನ್ನ ಸ್ಥಳಾಂತರಿಸಲು ವ್ಯವಸ್ಥೆ ಮಾಡುವುದಾಗಿದೆ ಉಡುಪಿ ಡಿಸಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.

7. ಇಂದು ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ
ಇತ್ತ ಇಂದು ಸಹ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಕಡಲು ಪ್ರಕ್ಷುಬ್ಧಗೊಂಡಿದ್ದು ಮರವಂತೆ ಕಡಲ ತೀರದಲ್ಲಿ ಭಾರೀ ಕಡಲ್ಕೊರೆತ ಉಂಟಾಗಿದ್ದು, ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಹೀಗಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ನಿನ್ನೆಯಂತೆ ಇಂದು ಸಹ ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯಾಗಲಿದ್ದು, ಕಡಲತೀರಕ್ಕೆ ಹೀಗದಂತೆ ಎಚ್ಚರಿಕೆ ನೀಡಿದ್ದಾರೆ.

8. ಐಎಎಸ್‌ ಪಾಸ್ ಮಾಡಿದ್ದ ಅಭ್ಯರ್ಥಿ ಕೋವಿಡ್​​ಗೆ ಬಲಿ 
ಇತ್ತೀಚೆಗೆ UPSC ಪರೀಕ್ಷೆ ಪಾಸ್ ಮಾಡಿದ್ದ ಪ್ರಂಜಲ್ ಪ್ರಭಾಕರ್ ನಕಾತ್ ಎಂಬವರು ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲಾಧಿಕಾರಿಯಾಗಬೇಕೆಂಬ ಕನಸು ಕಂಡಿದ್ದ ಪ್ರಾಂಜಲ್ ಮೂಲತಃ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ತಾಲೂಕಿನ ತಾಂಡಲಿ ಎಂಬ ಸಣ್ಣ ಸ್ಥಳದಲ್ಲಿ ಜನಸಿದ್ದವರು. ಇವರಿಗೆ ಕಳೆದ ವಾರದ ಕೋವಿಡ್ ಸೋಂಕು ತಗುಲಿರೋದು ದೃಢವಾಗಿತ್ತು. ಸೋಂಕು ಶ್ವಾಸಕೋಶಕ್ಕೆ ತಗುಲಿ, ಆರೋಗ್ಯ ಸ್ಥಿತಿ ಹದಗೆಡಲು ಶುರುವಾಗಿದ್ದರಿಂದ ಏರ್ ಆ್ಯಂಬುಲೆನ್ಸ್ ಮೂಲಕ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ಪ್ರಾಂಜಲ್​ರನ್ನ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.

9. ಉ.ಪ್ರದೇಶದಲ್ಲಿ ಮೇ.24 ರವರೆಗೂ ಲಾಕ್​ಡೌನ್ ವಿಸ್ತರಣೆ 
ಉತ್ತರ ಪ್ರದೇಶದಲ್ಲಿ ಮಹಾಮಾರಿ ಕೊರೊನಾ ಆರ್ಭಭ ಮುಂದುವರೆದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ಮೇ 24 ರವರೆಗೆ ಅಂದ್ರೆ 10 ದಿನಗಳವರೆಗೆ ವಿಸ್ತರಿಸಿದೆ. ಪರಿಸ್ಥಿತಿಯನ್ನು ಪರಿಶೀಲಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಒಂದು ದಿನದ ನಂತರ ಲಾಕ್ ಡೌನ್ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರದಿಗಳ ಪ್ರಕಾರ, ಕೊರೊನಾ ಸೋಂಕು ರಾಜ್ಯದ ಗ್ರಾಮೀಣ ಭಾಗಗಳನ್ನು ತಲುಪಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಆತಂಕ ಹೆಚ್ಚಿದೆ.

10. 67 ಲಕ್ಷ ಸ್ಫುಟ್ನಿಕ್-ವಿ ಲಸಿಕೆ ಕ್ರೇಜಿವಾಲ್ ಮನವಿ
ಸ್ಪುಟ್ನಿಕ್ ವಿ ಲಸಿಕೆಯ ಎರಡನೇ ಬ್ಯಾಚ್ ಮೇ 16 ರಂದು ಭಾರತಕ್ಕೆ ಬರಲಿದೆ.ಈ ಹಿನ್ನೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಹೈದರಬಾದ್ನ ಡಾ. ರೆಡ್ಡಿ ಅವರ ಪ್ರಯೋಗಾಲಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಕ್ರೇಜಿವಾಲ್ ಸುಮಾರು 67 ಲಕ್ಷ ಡೋಸ್ ಸ್ಪುಟ್ನಿಕ್ ವಿ ದೆಹಲಿ ಜನರಿಗೆ ಲಸಿಕೆ ನೀಡಲು ಬೇಕಾಗಿದೆ ಆದ್ದರಿಂದ ದೆಹಲಿಗೆ ಪೂರೈಸುವಂತೆ ಪತ್ರ ಮೂಲಕ .ಡಾ. ರೆಡ್ಡಿ ಅವರ ಪ್ರಯೋಗಾಲಕ್ಕೆ ಮನವಿ ಮಾಡಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link