1. ಬೆಂಗಳೂರಿನಲ್ಲಿ ಎಂದಿನಂತೆ ವ್ಯಾಪಾರ ಬಲು ಜೋರು
ಲಾಕ್​ಡೌನ್​ ನಡುವೆ ಬೆಂಗಳೂರಿನ ಸುಮನಹಳ್ಳಿ ಸರ್ಕಲ್ ಬಳಿ ಎಂದಿನಂತೆ ವ್ಯಾಪಾರ ವಹಿವಾಟು ಜೋರಾಗಿದ್ದು ಕೊರೊನಾ ನಿಯಮಗಳನ್ನ ಅನುಸರಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದು ರೈತರಿಗೆ ಕೆಲ ಸೂಚನೆ ನೀಡಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಇತ್ತ ಆಡುಗೋಡಿಯಲ್ಲಿ ಬೆಳಗ್ಗೆಯಿಂದಲೇ ಪೊಲೀಸರ ಚೆಂಕಿಂಗ್ ಆರಂಭವಾಗಿದೆ. ಅನಗತ್ಯವಾಗಿ ಓಡಾಡುತ್ತಿರುವವವರ ವಾಹನಗಳನ್ನ ಸೀಜ್ ಮಾಡಿ ಪೊಲೀಸ್​ ಸಬ್ಬಂದಿ ವಾರ್ನಿಂಗ್ ನೀಡುತ್ತಿದ್ದಾರೆ. ಹೊರರಾಜ್ಯ ಹಾಗೂ ಹೊರಜಿಲ್ಲೆ ನಂಬರ್ ಪ್ಲೇಟ್ ಇರೋ ವಾಹನಗಳನ್ನ ತಪಾಸಣೆ ಮಾಡುತ್ತಿದ್ದಾರೆ. ಅಗತ್ಯ ಸೇವೆಗಳ ಹೆಸರಲ್ಲಿ ಎಂದಿನಂತೆ ಆಡುಗೋಡಿ ರಸ್ತೆಯಲ್ಲಿ ವಾಹನ ಸಂಚಾರ ಜೋರಾಗಿದೆ. ಇನ್ನು ಶಿವಾಜಿನಗರದ ರಸೆಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಎಂದಿನಂತಿದೆ.

2. ಕಲಬುರಗಿಯಲ್ಲಿ ಇಂದಿನಿಂದ 4 ದಿನ ಸಂಪೂರ್ಣ ಲಾಕ್
ಅವಳಿ ನಗರಗಳಲ್ಲಿ ಇಂದಿನಿಂದ 3 ದಿನಗಳ ಕಾಲ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದು, ವ್ಯಾಪಾರಸ್ಥರು, ಗ್ರಾಹಕರಿಗೆ ಸಮಯದಲ್ಲಿ ವಿನಾಯಿತಿ ನೀಡಲಾಗಿದೆ. ಬೆಳಗ್ಗೆ 6ಗಂಟೆಯಿಂದ 12ರವರೆಗೆ ಖರೀದಿಗೆ ಅನುಮತಿ ನೀಡಲಾಗಿದ್ದು ಎಪಿಎಂಸಿ ಸೇರಿದಂತೆ ಪ್ರಮುಖ ಮಾರ್ಕೆಟ್​​​ಗಳು ಓಪನ್ ಇವೆ. ಮೂರು ದಿನಗಳ ಬಳಿಕ ಮತ್ತೆ ಯಥಾಸ್ಥಿತಿ ಲಾಕ್​ಡೌನ್ ಮುಂದುವರಿಯಲಿದೆ. ಇತ್ತ ಕಲಬುರಗಿಯಲ್ಲಿ ಇಂದಿನಿಂದ ನಾಲ್ಕುದಿನ ಸಂಪೂರ್ಣ ಲಾಕ್​​ಡೌನ್​ ಜಾರಿಯಲ್ಲಿರುತ್ತದೆ. ಕಂಪ್ಲೀಟ್ ಲಾಕ್ಡೌನ್ ಹಿನ್ನೆಲೆಯಲ್ಲಿ ಕಲಬುರಗಿ ನಗರ ಸಂಪೂರ್ಣ ಸ್ಥಬ್ದವಾಗಿದ್ದು, ತರಕಾರಿ, ಹಣ್ಣು, ದಿನಸಿ ವಸ್ತುಗಳ ಖರೀದಿಗೂ ನಿಷೇಧ ಹೇರಲಾಗಿದೆ. ಬೆಳ್ಳಂ ಬೆಳಗ್ಗೆಯೇ ಪೊಲೀಸರು ರಸ್ತೆಗಿಳಿದಿದ್ದು, ವಾಹನ ತಪಾಸಣೆ ಮಾಡುತ್ತಿದ್ದಾರೆ.

3. 70 ಕೊರೊವೆಂಟ್ ವೆಂಟಿಲೇಟರ್​​ಗಳ ಕೊಡುಗೆ
ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ನೆರವಾಗಲು ಝೆಕ್ ಗಣರಾಜ್ಯದ ಕಂಪನಿಗಳು ಬೆಂಗಳೂರಿನ ಪುಷ್ಪಕ್ ಪ್ರಾಡಕ್ಟ್ಸ್, ಇಂಡಿಯಾ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಬೆಂಗಳೂರಿನಲ್ಲಿರುವ ಝೆಕ್ ಗಣರಾಜ್ಯದ ಗೌರವ ರಾಯಭಾರಿ ಕಚೇರಿ ಅತ್ಯಾಧುನಿಕ 70 ಕೊರೊವೆಂಟ್ ವೆಂಟಿಲೇಟರ್​​​ಗಳನ್ನು ಕೊಡುಗೆಯಾಗಿ ನೀಡಿದೆ. ಐದು ಕೋಟಿ ರೂಪಾಯಿ ಮೊತ್ತದ ವೆಂಟಿಲೇಟರ್​​​ಗಳನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತಿದೆ. ಮೊದಲ ಹಂತದಲ್ಲಿ 46 ವೆಂಟಿಲೇಟರ್ಗಳು ಬಂದಿದ್ದು, ಇವುಗಳನ್ನು ಬುಧವಾರ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಝೆಕ್ ಗಣರಾಜ್ಯದ ಗೌರವ ರಾಯಭಾರಿ ಪುಷ್ಪಕ್ ಪ್ರಕಾಶ್ ಅವರು ಸ್ವೀಕರಿಸಿದರು.

4. ಮೊದಲು ಕೋವಿಶೀಲ್ಡ್, 2ನೇ ಡೋಸ್ ಕೋವ್ಯಾಕ್ಸಿನ್!
ಮೊದಲ ಡೋಸ್ ಕೋವಿಶೀಲ್ಡ್ ಪಡೆದಿದ್ದ 20 ಗ್ರಾಮಸ್ಥರಿಗೆ ಎರಡನೇ ಡೋಸ್​​ನಲ್ಲಿ ಕೋವ್ಯಾಕ್ಸಿನ್ ನೀಡಿ ಆರೋಗ್ಯ ಕಾರ್ಯಕರ್ತರು ಅಚಾತುರ್ಯ ಎಸಗಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ. ಬರ್ಹ್ನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಯಡವಟ್ಟು ಆಗಿದೆ. ಮೇ 14 ರಂದು ಆಡಾಹಿ ಕಲಾ ಮತ್ತು ಇನ್ನೊಂದು ಹಳ್ಳಿಯ ಗ್ರಾಮಸ್ಥರು ಇಲ್ಲಿ ಕೋವಾಕ್ಸಿನ್ ಲಸಿಕೆಗಳನ್ನು ಪಡೆದಿದ್ದಾರೆ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಿದ್ದು ಈ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯ ವೈದ್ಯಕೀಯ ಅಧಿಕಾರಿ ಸಂದೀಪ್ ಚೌಧರಿ ಭರವಸೆ ನೀಡಿದ್ದಾರೆ.

5. ‘12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಫೈಜರ್ ಲಸಿಕೆ ಸೇಫ್’
ಅಮೆರಿಕದ ಫೈಜರ್ ಲಸಿಕೆ 12 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರಿಗೆ ಸುರಕ್ಷಿತ ಎಂದು, ಅಮೆರಿಕಾ ತಿಳಿಸಿದೆ. ಭಾರತದಲ್ಲಿ ಕೋವಿಡ್ 19 ಎರಡನೇ ಅಲೆಯನ್ನ ತಡೆಯಲು ಈ ಲಸಿಕೆ ಬಹಳ ಸೂಕ್ತವಾಗಿದೆ. ಫೈಜರ್ ಲಸಿಕೆ 12 ವರ್ಷದವರಿಗೂ ಹಾಗೆ ಅದಕ್ಕೂ ಮೇಲ್ಪಟ್ಟವರಲ್ಲಿಯೂ ಸಹ ಈ ಸೋಂಕಿನ ವಿರುದ್ಧ ಹೋರಾಡಲು ಬಳಸಬಹುದಾಗಿದೆ ಅಂತ ಅಮೆರಿಕಾ ಅಭಿಪ್ರಾಯ ಪಟ್ಟಿದೆ.

6. ಆ್ಯಂಟಿಬಾಡಿ ಕಾಕ್​​​ಟೇಲ್​​ನಿಂದ ಗುಣವಾದ ರೋಗಿ ಡಿಸ್ಚಾರ್ಜ್
ಭಾರತದಲ್ಲಿ ಮೊದಲ ಬಾರಿಗೆ ಆ್ಯಂಟಿಬಡಿ ಕಾಕ್​​​ಟೇಲ್ ಚಿಕಿತ್ಸೆ ಪಡೆದು ಕೊರೊನಾದಿಂದ ಗುಣಮುಖರಾದ ವೃದ್ಧನನ್ನ ಹರಿಯಾಣದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. 82 ವರ್ಷದ ವೃದ್ಧನಿಗೆ ಚಿಕಿತ್ಸೆ ನೀಡಿ ಅವರು ಗುಣಮುಖವಾದ ನಂತರ ಮನೆಗೆ ಕಳುಹಿಸಿದ್ದೇವೆಂದು ಆಸ್ಪತ್ರೆಯ ಅಧ್ಯಕ್ಷ ಡಾ.ನರೇಶ್ ಟ್ರೆಹನ್ ಹೇಳಿದ್ದಾರೆ. ಅಮೆರಿಕಾ ಮತ್ತು ಯುರೋಪ್​ನಲ್ಲಿ ಆ್ಯಂಟಬಾಡಿ ಕಾಕ್​ಟೇಲ್ ವ್ಯಾಪಕವಾಗಿ ಬಳಸಲಾಗಿದೆ ಎಂದು ಡಾ. ಟ್ರೆಹನ್ ಹೇಳಿದ್ದಾರೆ. ಅಲ್ಲದೆ ಕಳೆದ ವರ್ಷ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್​ಗೆ ಕೊರೊನಾ ಇರೋದು ದೃಢವಾದಾಗ ಅವರಿಗೂ ಆ್ಯಂಟಿಬಾಡಿ ಕಾಕ್ಟೇಲ್ ನೀಡಲಾಗಿತ್ತು ಅಂತಾ ಅವರು ತಿಳಿಸಿದ್ರು.

7. ಒಬ್ಬನಿಗಾಗಿ ಮುಂಬೈನಿಂದ ದುಬೈಗೆ ಹಾರಿದ ವಿಮಾನ
ಇತ್ತೀಚೆಗೆ ಎಮಿರೇಟ್ಸ್ ವಿಮಾನವೊಂದು ಕೇವಲ ಒಬ್ಬ ಪ್ರಯಾಣಿಕನಿಗಾಗಿ ಮುಂಬೈನಿಂದ ದುಬೈಗೆ ಸಂಚಾರ ನಡೆಸಿದ ವಿಶೇಷ ಘಟನೆ ನಡೆದಿದೆ. ಬೋಯಿಂಗ್ 777-300 ವಿಮಾನವು 360 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನ ಹೊಂದಿದೆ. ಆದ್ರೆ ಇತರೆ ಪ್ರಯಾಣಿಕರು ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರದಿಂದ ತಮ್ಮ ರಿಸರ್ವೇಷನ್ ರದ್ದುಗೊಳಿಸಿದ್ದಾರೆ. ಹೀಗಾಗಿ ಇಕೆ 501 ವಿಮಾನದ ಸಿಬ್ಬಂದಿ ತನ್ನ ಏಕೈಕ ಪ್ರಯಾಣಿಕರಾದ ದುಬೈ ನಿವಾಸಿ ಭವೇಶ್ ಜಾವೇರಿಯ ಅವರಿಗಾಗಿ ಕಾದು ಕುಳಿತಿತ್ತು. ನಂತರ ಈ ಪ್ರಯಾಣಿಕ ದುಬೈನಲ್ಲಿ ವಿಮಾನವನ್ನ ಪ್ರವೇಶಿಸುತ್ತಿದ್ದಂತೆ ಸಿಬ್ಬಂದಿ ಚಪ್ಪಾಳೆ ಮೂಲಕ ಸ್ವಾಗತ ಮಾಡಿದ್ದಾರೆ.

8 .ಭಾರತಕ್ಕೆ ಬರಲಿವೆ 4 ಹೆರಾನ್ ಮಾರ್ಕ್ -2 ಡ್ರೋನ್‌
ಭಾರತ ಈಗ ತನ್ನ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸಲು ಮುಂದಾಗಿದ್ದು, ಶೀಘ್ರದಲ್ಲೇ ಎಲ್‌ಎಸಿ ಉದ್ದಕ್ಕೂ ಇಸ್ರೇಲ್​​ನ ಅಧುನಿಕ ಹೆರಾನ್ ಡ್ರೋನ್ಗಳನ್ನು ಅಳವಡಿಸಲಿದೆ. ಚೀನಾ ದೇಶದದಿಂದ ಲಡಾಖ್ ಗಡಿ ಪ್ರದೇಶದ ಬಳಿ ಭದ್ರತಾ ಭೀತಿ ಇರುವ ಹಿನ್ನೆಲೆಯಲ್ಲಿ ಈಗ ಭಾರತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಅತೀ ಶೀಘ್ರದಲ್ಲೇ ನಾಲ್ಕು ಸುಧಾರಿತ ಇಸ್ರೇಲ್​ನ ಹೆರಾನ್ ಮಾರ್ಕ್ -2 ಡ್ರೋನ್‌ಗಳು ಸೇನೆಯನ್ನು ಸೇರಲಿದ್ದು, ಈ ಡ್ರೋನ್​ಗಳು 45 ಗಂಟೆಗಳ ಕಾಲ ಗಾಳಿಯಲ್ಲಿ ಉಳಿಯುವಂತಹ ಚಾಣಾಕ್ಷತೆಯನ್ನ ಹೊಂದಿವೆ.

9. 15.45 ಲಕ್ಷ ತೆರಿಗೆದಾರರಿಗೆ 25,301 ಕೋಟಿ ಟ್ಯಾಕ್ಸ್ ರೀಫಂಡ್
2021-22ರ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಇಲಾಖೆ ಈವರೆಗೆ 25,301 ಸಾವಿರ ಕೋಟಿ ರೂಪಾಯಿಯನ್ನ ತೆರಿಗೆದಾರರಿಗೆ ಮರುಪಾವತಿ ಮಾಡಿದೆ. ಈ ಬಗ್ಗೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಮಾಹಿತಿ ನೀಡಿದ್ದು, ಒಟ್ಟು 15.45 ಲಕ್ಷ ತೆರಿಗೆದಾರರಿಗೆ ರೀಫಂಡ್ ನೀಡಲಾಗಿದೆ ಎಂದು ಹೇಳಿದೆ. ಇದರಲ್ಲಿ 15 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ತೆರಿಗೆದಾರರಲ್ಲಿ 7,494 ಕೋಟಿ ರೂಪಾಯಿ ಮರು ಪಾವತಿ ಮಾಡಿದ್ರೆ, ಕಾರ್ಪೊರೇಟ್ ಟ್ಯಾಕ್ಸ್​ನ ರೀಫಂಡ್ ಮೊತ್ತ 17,807 ಕೋಟಿಯನ್ನ 44,140 ತೆರಿಗೆದಾರರಿಗೆ ನೀಡಲಾಗಿದೆ ಅಂತ ತಿಳಿಸಿದೆ.

10. ಕೊಹ್ಲಿಗೆ ‘ಕಿಕ್’ ಕೊಟ್ಟ ಸುನೀಲ್ ಚೆಟ್ರಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಗೋಲ್‌ಪೋಸ್ಟ್‌ನ ಕ್ರಾಸ್‌ಬಾರ್‌ ಚಾಲೆಂಜ್​​ಗೆ, ಭಾರತದ ಫುಟ್ಬಾಲ್ ಟೀಮ್ ಕ್ಯಾಪ್ಟನ್ ಸುನೀಲ್ ಚೆಟ್ರಿ ಪ್ರತಿಕ್ರಿಯಿಸಿದ್ದಾರೆ. ಈ  ಕ್ರಿಕೆಟ್​ ಕಿಂಗ್ ವಿರಾಟ್​ ಕೊಹ್ಲಿಗೆ  ಸುನಿಲ್ ಚೆಟ್ರಿ ಕಿಕ್ ಕೊಟ್ಟಿದ್ದಾರೆ. ನಾನು ಫುಟ್ಬಾಲ್ ಕೋಚಿಂಗ್ ಸೆಷನ್ ವಾಯ್ಸ್ ಕಳುಹಿಸುತ್ತೇನೆ, ನೀವು ಕಂತುಗಳ ರೂಪದಲ್ಲಿ ಹಣ ಪಾವತಿಸುವಿರಾ ಚಾಂಪಿಯನ್ ಎಂದು ಚೆಟ್ರಿ ಪ್ರಶ್ನಿಸಿದ್ದಾರೆ. ಈ ಮೂಲಕ ಇಂಡಿಯಾದಲ್ಲಿ ಫುಟ್ಬಾಲ್ ಆಟಗಾರರಿಗೆ ಎಷ್ಟು ಮಹತ್ವ ಇದೆ ಅನ್ನೋದನ್ನ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link