1. ಇವತ್ತೇ ಹೊರಬೀಳುತ್ತಾ ಅನ್‌ಲಾಕ್ ಆದೇಶ?
ಲಾಕ್​​ಡೌನ್​ನಿಂದ ರಾಜ್ಯದಲ್ಲಿ ಕೊರೊನಾ 2ನೇ ಅಲೆ ತಹಬದಿಗೆ ಬರ್ತಿದೆ. ಹೀಗಾಗಿ ಲಾಕ್​​ಡೌನ್ ಸಡಿಲಿಕೆ ಮಾಡಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ಹಂತ ಹಂತವಾಗಿ ಲಾಕ್​​ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ಇಂದು ಬೆಳಗ್ಗೆ 11.30ಕ್ಕೆ 11 ಜಿಲ್ಲೆಗಳ ಡಿಸಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. 11 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಜೊತೆಗೆ ಯಾವ ಮಾದರಿಯಲ್ಲಿ ಲಾಕ್​​ಡೌನ್ ಸಡಿಲಿಕೆ ಮಾಡಬೇಕು ಅನ್ನೋ ಬಗ್ಗೆ ಚರ್ಚಿಸಲು ಸಿಎಂ ಬಿಎಸ್​ವೈ ಸಂಜೆ 6 ಗಂಟೆಗೆ ಕಾವೇರಿ ನಿವಾಸದಲ್ಲಿ ಕೋವಿಡ್-19 ಉಸ್ತುವಾರಿ ಸಚಿವರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಹೀಗಾಗಿ ಇವತ್ತೇ ಅನ್​ಲಾಕ್ ಆದೇಶ ಹೊರಬಿಳುವ ಸಾಧ್ಯತೆ ಇದೆ.

2. ಮುಂದಿನ ವಾರ ರಾಜ್ಯಕ್ಕೆ ಅರುಣ್ ಸಿಂಗ್
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸಂಘರ್ಷದ ಪರಿಸ್ಥಿತಿ ಬಿಗಡಾಯಿಸ್ತಿದ್ದಂತೆ ಎಚ್ಚೆತ್ತ ಹೈಕಮಾಂಡ್, ಡ್ಯಾಮೇಜ್ ಕಂಟ್ರೋಲ್​ಗೆ ಸರ್ಕಸ್ ಮಾಡ್ತಿದೆ. ಈ ಹಿನ್ನೆಲೆ ಮಂದಿನ ವಾರ ರಾಜ್ಯಕ್ಕೆ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದಾರೆ. ಜೂನ್ 16, 17 ಮತ್ತು 18 ರಂದು ರಾಜ್ಯ ಪ್ರವಾಸ ಕೈಗೊಂಡು, ಯಡಿಯೂರಪ್ಪರ ಪರ ಸಹಿ‌ ಸಂಗ್ರಹ‌ ಸಂಘರ್ಷ ಮತ್ತು ಸಿಎಂ ಹಾಗೂ ಸಿಎಂ ಕುಟುಂಬದ ವಿರುದ್ಧ ಯತ್ನಾಳ್ ಮಾಡಿರುವ ಆರೋಪ ಸೇರಿ ಎಲ್ಲಾ ಮಾಹಿತಿ ಕಲೆ ಹಾಕಲಿದ್ದಾರೆ.

3. ಸಾ.ರಾ.ಮಹೇಶ್​​ಗೆ ಮತ್ತೆ ‘ಸಿಂಧೂರಿ’ ಟಾಂಗ್..!
ಅಕ್ರಮ ಭೂಕಬಳಿಕೆ ಬಗ್ಗೆ ದಾಖಲೆ ಬಿಡುಗಡೆ ಮಾಡುವಂತೆ ಕೇಳಿದ್ದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್​​ಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ಠಕ್ಕರ್ ಕೊಟ್ಟಿದ್ದಾರೆ. ರೋಹಿಣಿ ಸಿಂಧೂರಿ ಸಹಿಯುಳ್ಳ 4 ಆದೇಶ ಪ್ರತಿಗಳನ್ನು ಬಿಡುಗಡೆ ಮಾಡಲಾಗಿದೆ. ಕೇರಗಳ್ಳಿಯ 61.18 ಎಕರೆ ಆರ್​​ಟಿಸಿ ರದ್ದು, ಲಿಂಗಾಂಬುದಿ ಪಾಳ್ಯ ಭೂಪರಿವರ್ತನಾ ಆದೇಶ ವಾಪಸ್, ಮೈಸೂರಿನ ಲಿಂಗಾಂಬುದಿ ಕೆರೆ ಅನ್ಯಕ್ರಾಂತ ರದ್ದು, ದಟ್ಟಗಳ್ಳಿಯ 5 ಎಕರೆ ಭೂ ಹರಾಜು ಪ್ರಕ್ರಿಯೆ ಪರಿಶೀಲನೆ ಬಗ್ಗೆ ದಾಖಲೆ ರಿಲೀಸ್ ಮಾಡಿದ್ದಾರೆ.

4. ಹೊಸಕೋಟೆ ಪಿಎಸ್ಐ ರಾಜು ಸಸ್ಪೆಂಡ್
ಪಿಎಸ್ಐ ಆಗಿ ಪ್ರಮೋಷನ್ ಸಿಕ್ಕ ಖುಷಿಗೆ ಹಾಗೂ ಹುಟ್ಟುಹಬ್ಬದ ಹಿನ್ನೆಲೆ ಪೊಲೀಸ್ ಠಾಣೆಯಲ್ಲೇ ಕೇಕ್ ಕಟ್ ಮಾಡಿ ಅದ್ಧೂರಿಯಾಗಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದ ಪಿಎಸ್ಐ ರಾಜು ಅವ್ರನ್ನ ಅಮಾನತುಗೊಳಿಸಲಾಗಿದೆ. ಇದೇ ತಿಂಗಳ ಜೂನ್ 2ರಂದು ರಾಜು ಪೊಲೀಸ್ ಠಾಣೆ ಮುಂದೆ ಪಟಾಕಿ ಸಿಡಿಸಿ, ಕೊರೊನಾ ರೂಲ್ಸ್ ಬ್ರೇಕ್ ಸಹ ಮಾಡಿದ್ರು. ಹೀಗಾಗಿ ಅವರನ್ನ ದುರ್ವರ್ತನೆ ಆರೋಪದ ಮೇರೆಗೆ ಅಮಾನತುಗೊಳಿಸಿ, ಡಿಜಿ-ಐಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

5. ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ
ಪಾನಮತ್ತ ಯುವಕರು ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನಿಸಿರೋ ಘಟನೆ ಕೊಡಗಿನಲ್ಲಿ ನಡೆದಿದೆ. ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿನ ಸೀಲ್​ಡೌನ್ ಪ್ರದೇಶಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ಆಶಾ ಕಾರ್ಯಕರ್ತೆ ಬಿಂದು ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ ಅವರ ತಂಡ, ಕೊರೊನಾ ಪಾಸಿಟಿವ್ ಬಂದವರ ಯೋಗಕ್ಷೇಮ ವಿಚಾರಿಸಲು ತೆರಳಿದ್ರು. ಈ ವೇಳೆ ಪಾನಮತ್ತ ಯುವಕರು ದಾಂಧಲೆ ಮಾಡಿದ್ದು, ಸೀಲ್​ಡೌನ್ ಏರಿಯಾಕ್ಕೆ ಬರಬೇಡಿ ಅಂತಾ ಆವಾಜ್ ಹಾಕಿದ್ದಾರೆ.

6. ಮುಂಬೈನಲ್ಲಿ ಕಟ್ಟಡ ಕುಸಿದು 9 ಸಾವು
ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ತಡರಾತ್ರಿ ಕಟ್ಟಡ ಕುಸಿದು ಬಿದ್ದಿದ್ದು, ಭಾರೀ ಅನಾಹುತ ಸಂಭವಿಸಿದೆ. ನಗರದ ಪಶ್ಚಿಮ ಮಲಾಡ್ ಏರಿಯಾದಲ್ಲಿ ಮನೆ ಹಠಾತ್ತನೇ ಕುಸಿದು ಬಿದ್ದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಕಟ್ಟಡದಡಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ. ದುರಾದೃಷ್ಟವಶಾತ್ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬೃಹತ್ ಕಟ್ಟಡ ಕುಸಿದು ಬೀಳುತ್ತಿದ್ದಂತೆ ಮುನ್ನಚ್ಚರಿಕೆ ದೃಷ್ಠಿಯಿಂದ ಹತ್ತಿರದ 3 ಬಿಲ್ಡಿಂಗ್​ಗಳಲ್ಲಿದ್ದ ಜನರನ್ನು ಸಹ  ಪೊಲೀಸರು ಸ್ಥಳಾಂತರ ಮಾಡಿದ್ದಾರೆ.

7. ವಿಶ್ವವಿದ್ಯಾಲಯಗಳಿಗೆ ಮೋದಿ ಅಭಿನಂದನೆ
ಲಂಡನ್ ಮೂಲದ QS ಸಂಸ್ಥೆ ಬಿಡುಗಡೆ ಮಾಡಿರೋ ವಿಶ್ವವಿದ್ಯಾಲಯಗಳ ಟಾಪ್ 200ರ ಱಂಕಿಂಗ್ ಪಟ್ಟಿಯಲ್ಲಿ ಭಾರತದ 3 ವಿಶ್ವವಿದ್ಯಾಲಯಗಳು ಸ್ಥಾನ ಪಡೆದುಕೊಂಡಿವೆ. ಐಐಟಿ ಬಾಂಬೆ 177 ನೇ ಸ್ಥಾನ, ಐಐಟಿ ದೆಹಲಿ 185ನೇ ಸ್ಥಾನ ಹಾಗೂ ಬೆಂಗಳೂರಿನ ಐಐಎಸ್​​ಸಿ 186ನೇ ಸ್ಥಾನ ಪಡೆದುಕೊಂಡಿದೆ. ರಿಸರ್ಚ್ ವಿಭಾಗದಲ್ಲಿ ಬೆಂಗಳೂರಿನ ಐಐಎಸ್​​ಸಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

8. ಮದುವೆಯಾಗಿಲ್ಲ, ಲಿವ್ ಇನ್ ರಿಲೇಷನ್ಶಿಪ್
ಉದ್ಯಮಿ ನಿಖಿಲ್ ಜೈನ್ ಜೊತೆಗಿನ ಮದುವೆ ಕಾನೂನು ಬದ್ಧವಲ್ಲ. ಅವರ ಜೊತೆ ಲಿವ್ ಇನ್ ರಿಲೇಷನ್​ಶಿಪ್​ ಹೊಂದಿದ್ದೆ ಅಂತಾ ಖ್ಯಾತ ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ. ಅಂತರ್ ಧರ್ಮೀಯ ವಿವಾಹವಾಗಿದ್ದರಿಂದ ಭಾರತದಲ್ಲಿ ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್ ಅಡಿಯಲ್ಲಿ ಇದನ್ನು ನೋಂದಾಯಿಸಿಕೊಳ್ಳಬೇಕಾಗುತ್ತೆ. ಆದ್ರೆ ಅದಾಗಿಲ್ಲ. ಕಾನೂನು ಪ್ರಕಾರ ಇದು ಮದುವೆಯಲ್ಲ, ಲಿವ್ ಇನ್ ರಿಲೇಷನ್​​​ಶಿಪ್ ಅಷ್ಟೇ ಅಂತಾ ಹೇಳಿದ್ದಾರೆ.

9. ಇಂದು ಈ ವರ್ಷದ ಮೊದಲ ಸೂರ್ಯಗ್ರಹಣ
ಇವತ್ತು ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. 148 ವರ್ಷಗಳ ನಂತರ ಶನಿ ಜಯಂತಿ ದಿನ ಸೂರ್ಯಗ್ರಹಣವಾಗ್ತಿದೆ. ಶನಿ ಜಯಂತಿಯಂದು ಸೂರ್ಯ ಮತ್ತು ಶನಿಯ ಅದ್ಭುತ ಸಂಯೋಜನೆಯಾಗಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಭಾಗಶಃ ಗೋಚರಿಸಲಿದೆ. ಇವತ್ತು ಮಧ್ಯಾಹ್ನ 1.42ಕ್ಕೆ ಶುರುವಾಗಿ ಸಂಜೆ 6.41ಕ್ಕೆ ಕೊನೆಗೊಳ್ಳಲಿದ್ದು, ಒಟ್ಟು 5 ಗಂಟೆಗಳ ಕಾಲ ಗ್ರಹಣವಿರಲಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ ಎಂದು ತಿಳಿದು ಬಂದಿದೆ.

10. ಬಿಟ್‌ ಕಾಯಿನ್‌ ಇದ್ರೆ ಪೌರತ್ವ
ಬಿಟ್‌ ಕಾಯಿನ್‌ ಮಾದರಿಯ ಕರೆನ್ಸಿಗೆ ಮಾನ್ಯತೆ ನೀಡಿದ ವಿಶ್ವದ ಮೊದಲ ರಾಷ್ಟ್ರವೆಂಬ ಹೆಗ್ಗಳಿಕೆಗೆ ಮಧ್ಯ ಅಮೆರಿಕದ ಎಲ್‌ ಸಾಲ್ವಡಾರ್‌ ದೇಶ ಪಾತ್ರವಾಗಿದೆ. ಬಿಟ್‌ ಕಾಯಿನ್‌ಗೆ ಮಾನ್ಯತೆ ನೀಡೋ ಸಲುವಾಗಿ ರಚಿಸಲಾಗಿದ್ದ ಮಸೂದೆಯೊಂದಕ್ಕೆ ಅಲ್ಲಿನ ಸಂಸತ್ತು ಅಂಗೀಕಾರ ನೀಡಿದೆ. ಈ ಬಗ್ಗೆ ಎಲ್‌ ಸಾಲ್ವಡಾರ್‌ ಅಧ್ಯಕ್ಷ ನಯೀಬ್‌ ಬುಕೆಲೆ ಟ್ವಿಟರ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದು, ನಮ್ಮ ದೇಶದಲ್ಲಿ ಬಿಟ್‌ ಕಾಯಿನ್‌ಗಳ ಮೂಲಕ ಹೂಡಿಕೆ ಮಾಡೋ ಇತರ ದೇಶಗಳ ನಾಗರಿಕರಿಗೆ ನಮ್ಮ ದೇಶದ ಪೌರತ್ವ ನೀಡಲಾಗುತ್ತದೆ ಅಂತ ತಿಳಿಸಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​ಅಪ್​ appeared first on News First Kannada.

Source: newsfirstlive.com

Source link