ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ರೌಂಡ್​​ಅಪ್​​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ರೌಂಡ್​​ಅಪ್​​

1. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟ
ಕೊರೊನಾ ನಡುವೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಕುರಿತ ಹೊಸ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಮಾರ್ಗಸೂಚಿ ತಯಾರಿಸಲಾಗಿದೆ. ಗ್ರಾಮಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತಾಲೂಕು ಕೇಂದ್ರಕ್ಕೆ ಬರಬೇಕಿಲ್ಲ, ಸ್ಥಳೀಯವಾಗಿ ಗ್ರಾಮಾಂತರ ಭಾಗಗಳಲ್ಲೂ ಪರೀಕ್ಷಾ ಕೇಂದ್ರ ತೆರೆಯಲಾಗುತ್ತದೆ. ಒಂದು ಕೇಂದ್ರದಲ್ಲಿ ಕನಿಷ್ಠ 100 ಮಕ್ಕಳಿಗೆ ಮಾತ್ರ ಎಕ್ಸಾಂ ಬರೆಯಲು ಅವಕಾಶ ನೀಡಲಾಗಿದೆ. ಒಂದು ಬೆಂಚ್‌ನಲ್ಲಿ ಓರ್ವ ವಿದ್ಯಾರ್ಥಿ ಕುಳಿತುಕೊಳ್ಳಬಹುದು. ಇನ್ನು ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಸಮಯ ಬೆಳಗ್ಗೆ 10.30 ರಿಂದ 1.30 ಗಂಟೆವರೆಗೆ ನಿಗದಿ ಮಾಡಲಾಗಿದೆ

2. ಅನ್ಲಾಕ್-2 ವಿಚಾರವಾಗಿ ಇಂದು ಸಿಎಂ ಸಭೆ
ಕಟ್ಟುನಿಟ್ಟಿನ ಕ್ರಮಗಳ ಜಾರಿಯಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಪಾಸಿಟಿವಿಟಿ ರೇಟ್ ಮತ್ತು ಡೆತ್​​ ರೇಟ್​ ಎರಡೂ ಕೂಡ ಇಳಿಕೆ ಕಂಡಿದೆ. ಇದೇ ಕಾರಣಕ್ಕೆ ಈಗಾಗಲೇ ಹಲವು ಲಾಕ್​ಡೌನ್ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದ್ದು, ಸೋಮವಾರದಿಂದ ಜನರಿಗೆ ಮತ್ತಷ್ಟು ರಿಲೀಫ್ ನೀಡೋಕೆ ಮುಂದಾಗಿದೆ. ಅನ್ಲಾಕ್- 2 ರ ವಿಚಾರವಾಗಿ ಇಂದು ಸಂಜೆ ಸಿಎಂ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಯಾವ ಸೇವೆಗಳಿಗೆಲ್ಲ ವಿನಾಯತಿ ನೀಡಬಹುದೆಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

3. ಅಮಿತ್ ಶಾ ಱಲಿ ಬಗ್ಗೆ ಕ್ರಮಕ್ಕೆ ಹೈಕೋರ್ಟ್ ಸೂಚನೆ
ಬೆಳಗಾವಿಯಲ್ಲಿ ಅಮಿತ್ ಷಾ ಪಾಲ್ಗೊಂಡಿದ್ದ ಱಲಿಯಲ್ಲಿ ಕೊರೊನಾ ರೂಲ್ಸ್​ ಬ್ರೇಕ್ ಮಾಡಲಾಗಿದೆ ಅಂತ ರಾಘವೇಂದ್ರ ಎಂಬುವವರು ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿದೆ. ಸಾವಿರಾರು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದು, ಮಾಸ್ಕ್ ಧರಿಸದವರ ವಿರುದ್ಧ ಪೊಲೀಸರು ಕ್ರಮ ಯಾಕೆ ತೆಗೆದುಕೊಂಡಿಲ್ಲ ಅಂತ ಸಿಜೆ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಪ್ರಶ್ನಿಸಿದೆ. ಕೂಡಲೇ ಎಪಿಎಂಸಿ ಯಾರ್ಡ್ ಪೊಲೀಸರಿಗೆ ಕ್ರಮ ತೆಗೆದುಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದ್ದು, ತನಿಖಾ ವರದಿಯನ್ನು  ಸಲ್ಲಿಸುವಂತೆ ಆದೇಶಿಸಿದೆ.

4. ಆದಿವಾಸಿಗಳಿಗಾಗಿ ಕೋವಿಡ್ ಕೇರ್ ಸೆಂಟರ್ ಆರಂಭ
ಕೋವಿಡ್ ಟೆಸ್ಟ್ ಹಾಗೂ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಆದಿವಾಸಿಗಳಿಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಆದಿವಾಸಿ ಕೋವಿಡ್ ಸೇವಾ ಕೇಂದ್ರ ತೆರೆಯಲಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆದಿವಾಸಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಸೋಲಿಗರ ಹಾಡಿಗಳಿವೆ. ಇಲ್ಲಿನ ಸೋಲಿಗರಿಗೆ ಕೋವಿಡ್ ಲಸಿಕೆ ಹಾಕಲು ಆರೋಗ್ಯ ಸಿಬ್ಬಂದಿ ಹೋದರೆ ಕಾಡಿಗೆ ಹೋಗಿ ಅವಿತುಕೊಳ್ಳುತ್ತಿದ್ದರು. ಒಂದಷ್ಟು ಜನರಿಗೆ ಬಲವಂತವಾಗಿ ಟೆಸ್ಟ್ ಮಾಡಲಾಗಿತ್ತು. ಕೊರೊನಾ ಪಾಸಿಟಿವ್ ಬಂದ್ರು ಸೋಂಕಿತ ಸೋಲಿಗರು ಕೋವಿಡ್ ಕೇರ್ ಸೆಂಟರ್ ಗೆ ಹೋಗಲ್ಲ ಅಂತಾ ಹಠ ಹಿಡಿತಾ ಇದ್ರು. ಇದರಿಂದ ಸೋಲಿಗರಿರುವ ಪ್ರದೇಶದಲ್ಲೇ ಕೋವಿಡ್ ಕೇರ್ ಸೆಂಟರ್ ತೆಗೆಯಲಾಗಿದೆ.

5. ವಿಶ್ವದ 13 ದೇಶಗಳ ನಾಯಕರ ಪೈಕಿ ಮೋದಿ ನಂಬರ್ 1
ಪ್ರಧಾನಿ ನರೇಂದ್ರ ಮೋದಿ ವಿಶ್ವದ 13 ದೇಶಗಳ ನಾಯಕರ ಪೈಕಿ ನಂಬರ್ ಒನ್ ಸ್ಥಾನವನ್ನ ಪಡೆದಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ಈ ರೇಟಿಂಗ್ ನೀಡಿದೆ. ಈ ಸಂಸ್ಥೆ ಪ್ರತಿ ವರ್ಷ ವಿಶ್ವದ ಹಲವಾರು ದೇಶಗಳ ಚುನಾಯಿತ ಪ್ರತಿನಿಧಿಗಳ ರೇಟಿಂಗ್ ಕಲೆಹಾಕುತ್ತದೆ. ಈ ಬಾರಿಯ ರೇಟಿಂಗ್​ನಲ್ಲಿ ಶೇಕಡಾ 66 ಅಂಕವನ್ನು ಪಡೆಯೋ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿ ಮೊದಲನೇ ಸ್ಥಾನ ಪಡೆದಿದ್ದಾರೆ. ಇನ್ನೂ ಎರಡನೇ ಸ್ಥಾನದಲ್ಲಿ ಇಟಲಿಯ ಪ್ರಧಾನಿ ಮರಿಯೋ ದಾರ್ಗಿ ಇದ್ದಾರೆ. ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಶೇಕಡಾ 53 ರಷ್ಟು ಅಂಕ ಪಡೆದು 6ನೇ ಸ್ಥಾನದಲ್ಲಿದ್ದಾರೆ.

6. ಕೊರೊನಾ ವಿರುದ್ಧ ವಿಶ್ವದ ಮೊದಲ ಡಿಎನ್ಎ ಲಸಿಕೆ ಸಿದ್ಧ
ಕೊರೊನಾ ವೈರಸ್ ಮಣಿಸಲು ಮತ್ತೊಂದು ಲಸಿಕೆ ಸಿದ್ಧವಾಗಿದೆ. ಸೋಂಕಿನ ವಿರುದ್ಧದ ಹೋರಾಟಕ್ಕೆ ಝೈಡಸ್ ಕ್ಯಾಡಿಲಾ ಲಸಿಕೆ ಸಿದ್ಧವಾಗಿದ್ದು, ಔಷಧಿಗಳ ನಿಯಂತ್ರಕ ಮಂಡಳಿಯಿಂದ ತುರ್ತು ಬಳಕೆಯ ಅನುಮತಿ ಸಿಕ್ಕಿದರೆ ಇದು ವಿಶ್ವದ ಮೊದಲ ಡಿಎನ್ಎ ಲಸಿಕೆ ಆಗಲಿದೆ. ಮತ್ತು ಭಾರತದಲ್ಲಿ ಲಭ್ಯವಿರುವ ನಾಲ್ಕನೇ ಲಸಿಕೆ ಎನಿಸಿಕೊಳ್ಳಲಿದೆ. ಲಸಿಕೆಯನ್ನು 3 ಹಂತಗಳಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿದ್ದು ಮುಂದಿನ ವಾರ ತುರ್ತು ಬಳಕೆಗೆ ಅನುಮತಿ ಕೋರುವ ಸಾಧ್ಯತೆ ಇದೆ. ಲಸಿಕೆಯನ್ನು 12 ರಿಂದ 18 ವರ್ಷದೊಳಗಿನವರ ಮೇಲೂ ಪರೀಕ್ಷೆ ಮಾಡಲಾಗಿದೆ ಅಂತಾ ಲಸಿಕಾ ಸಂಸ್ಥೆ ಹೇಳಿದೆ.

7. ಆತ್ಮಹತ್ಯೆಗೆ ಯತ್ನಿಸಿದ ಬಾಬಾ ಕಾ ಡಾಬಾ ಮಾಲೀಕ
ದಿನ ಬೆಳಗಾಗುವುದರಲ್ಲಿ ಯೂಟ್ಯೂಬ್ನಲ್ಲಿ ಫೇಮಸ್ ಆಗಿದ್ದ ಬಾಬಾ ಕಾ ಡಾಬಾ ಮಾಲೀಕ ಕಾಂತ ಪ್ರಸಾದ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಸದ್ಯ ಅವರನ್ನ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಬಾ ಕಾ ಡಾಬಾದ ಮಾಲೀಕ ಕಾಂತ ಪ್ರಸಾದ್, ಮದ್ಯದೊಳಗೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯೂಟ್ಯೂಬ್ ಮೂಲಕ ಫೇಮಸ್ ಆದ ಕಾಂತ ಪ್ರಸಾದ್ ಸಣ್ಣ ಪೆಟ್ಟಿಗೆ ಅಂಗಡಿಯಂತಹ ಹೋಟೆಲ್‌ನಿಂದ ದೊಡ್ಡ ರೆಸ್ಟೋರೆಂಟ್ ತೆರೆದಿದ್ದರು. ಆದ್ರೆ ಲಾಕ್‌ಡೌನ್ ಹಿನ್ನೆಲೆ ಭಾರಿ ನಷ್ಟ ಅನುಭವಿಸಿ ರೆಸ್ಟೋರೆಂಟ್ ಕ್ಲೋಸ್ ಮಾಡಿ ಮತ್ತೆ ಪೆಟ್ಟಿಗೆ ಅಂಗಡಿ ತೆರೆದರು. ಸದ್ಯ ಸಾಲ ಮಾಡಿಕೊಂಡು ಸಂಕಷ್ಟದ ಸುಳಿವಿಗೆ ಸಿಲುಕಿದ ಅವರು ಮನನೊಂದು ಆತ್ಯಹತ್ಯೆ ಯತ್ನಿಸಿದ್ದಾರೆ.

8. ಸ್ವಿಸ್ ಬ್ಯಾಂಕ್​​ನಲ್ಲಿದೆ ಭಾರತೀಯರ ₹20,700 ಕೋಟಿ ಹಣ
ಭಾರತೀಯರು ವೈಯಕ್ತಿಕವಾಗಿ ಮತ್ತು ಸಂಸ್ಥೆಗಳ ಮೂಲಕ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಹಣದ ಮೊತ್ತ 20 ಸಾವಿರದ 700 ಕೋಟಿಗೆ ಏರಿಕೆಯಾಗಿದೆ ಅಂತ ಸ್ವಿಜರ್ಲೆಂಡ್ನ ಕೇಂದ್ರೀಯ ಬ್ಯಾಂಕ್ ತಿಳಿಸಿದೆ. ಸ್ವಿಸ್ ಬ್ಯಾಂಕ್‌ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ಲಭ್ಯವಾಗಿದ್ದು, ಸೆಕ್ಯುರಿಟೀಸ್‌ ಮತ್ತು ಇತರೆ ಹೂಡಿಕೆಗಳಲ್ಲಿನ ಏರಿಕೆಯಿಂದಾಗಿ ಒಟ್ಟಾರೆ ಮೊತ್ತದಲ್ಲಿ ಏರಿಕೆಯಾಗಿದೆ ಅಂತ ತಿಳಿಸಿದೆ. ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಈ ಹಣದ ಮೊತ್ತ ಕಳೆದ 13 ವರ್ಷಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ ಅಂತ ಸ್ವಿಸ್ ಅಧಿಕೃತ ಪ್ರಕಟಣೆ ಹೊರಡಿಸಿದೆ.

9. ಜೀವನದ ಓಟ ನಿಲ್ಲಿಸಿದ ‘ಫ್ಲೈಯಿಂಗ್ ಸಿಖ್’
ಭಾರತದ ಹೆಸರಾಂತ ಅಥ್ಲೀಟ್ ಮಿಲ್ಖಾ ಸಿಂಗ್ ವಿಧಿವಶರಾಗಿದ್ದಾರೆ. ಮೇ 20ರಂದು 91 ವರ್ಷದ ಮಿಲ್ಖಾ ಸಿಂಗ್​ ಅವರಿಗೆ ಕೊರೊನಾ ಸೋಂಕು ದೃಢಪಟ್ಟು ಗುಣಮುಖರಾಗಿದ್ರು. ಆದ್ರೆ ಜೂನ್ 3ರಂದು ಉಸಿರಾಟ ಸಮಸ್ಯೆಯಿಂದ ಮತ್ತೆ ಚಂಡೀಘಡದ ಗ್ರಾಜ್ಯುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಆ್ಯಂಡ್ ರಿಸರ್ಚ್ ಸೆಂಟರ್​ಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ. ಓಟಗಾರ ಮಿಲ್ಖಾ ಸಿಂಗ್ ಅವರ ಕ್ರೀಡಾ ಕ್ಷೇತ್ರದ ಸಾಧನೆಗೆ 1959ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇನ್ನು ಮಿಲ್ಖಾ ಸಿಂಗ್ ಅಗಲಿಕೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

10. ತೆರೆ ಮೇಲೆ ಬರಲಿದ್ಯಂತೆ ‘ದಿ ವಾಲ್’ ಜೀವನ ಕಥೆ 
ವಿಶ್ವ ಕ್ರಿಕೆಟ್​​ನಲ್ಲಿ ದಿ ವಾಲ್ ಎಂದೇ ಖ್ಯಾತಿ ಪಡೆದಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಜೀವನ ಬೆಳ್ಳಿತೆರೆ ಮೇಲೆ ಬರೋದಕ್ಕೆ ಸಿದ್ಧವಾಗ್ತಿದೆಯಂತೆ. ಭಾರತ ಕ್ರಿಕೆಟ್ ತಂಡವನ್ನ ಒಂದು ಹಂತಕ್ಕೆ ಬೆಳೆಸಿದ ಅವರ ಜೀವನ, ಅನೇಕರಿಗೆ ಸ್ಫೂರ್ತಿ. ಹೀಗಾಗಿ ದ್ರಾವಿಡ್ ಜೀವನವನ್ನ ಬಯೋಪಿಕ್ ಮಾಡಲು ಚಿತ್ರ ತಂಡವೊಂದು ಸಿದ್ಧತೆ ನಡೆಸಿದೆ. ಈ ಚಿತ್ರದಲ್ಲಿ ದ್ರಾವಿಡ್ ಪಾತ್ರದಲ್ಲಿ ನಟಿಸೋಕೆ ಸಿದ್ದಾರ್ಥ್ ಅವರನ್ನ ಚಿತ್ರತಂಡ, ಸಂಪರ್ಕಿಸಿದೆ, ಚಿತ್ರದಲ್ಲಿ ನಟಿಸೋಕೆ ಸಿದ್ದಾರ್ಥ್ ಒಪ್ಪಿದ್ದಾರೆ ಎಂದು ಹೇಳಲಾಗ್ತಿದೆ.

 

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ರೌಂಡ್​​ಅಪ್​​ appeared first on News First Kannada.

Source: newsfirstlive.com

Source link