1. ಸ್ಮಾರ್ಟ್​ಸಿಟಿ ಸ್ಪರ್ಧೆಯಲ್ಲಿ ಕರ್ನಾಟಕಕ್ಕೂ ಪುರಸ್ಕಾರ
ಸ್ಮಾರ್ಟ್ ಸಿಟಿ ಸ್ಪರ್ಧೆಯಲ್ಲಿ ರಾಜ್ಯದ 2 ಯೋಜನೆಗಳಿಗೆ ಪುರಸ್ಕಾರ ಸಿಕ್ಕಿರುವುದಕ್ಕೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದ ವಿವಿಧೆಡೆಗಳಲ್ಲಿ ಸ್ಮಾರ್ಟ್​​ಸಿಟಿ ಯೋಜನೆಗಳ 6ನೇ ವಾರ್ಷಿಕೋತ್ಸವದ ನಿಮಿತ್ತ ನಡೆದ ಅಂತರ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ , ಕರ್ನಾಟಕದ 2 ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಪುರಸ್ಕಾರ ಲಭಿಸಿದೆ. ತುಮಕೂರು ಸ್ಮಾರ್ಟ್ ಸಿಟಿಯ ಡಿಜಿಟಲ್ ಗ್ರಂಥಾಲಯ ಯೋಜನೆಗೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ ದೊರಕಿದ್ದು, ಕೋವಿಡ್ ತುರ್ತು ಪರಿಸ್ಥಿತಿಯ ನಿರ್ವಹಣೆಗೆ ನೀಡುವ ವಿಶೇಷ ಪುರಸ್ಕಾರ ಬೆಂಗಳೂರು ಸ್ಮಾರ್ಟ್ ಸಿಟಿಗೆ ಲಭಿಸಿದೆ.

2. ‘ಲಸಿಕೆ ಅಭಿಯಾನದ ವೇಗ ಕಡಿಮೆಯಾಗಬಾರದು’

ದೇಶದಲ್ಲಿ ನಡೆಯುತ್ತಿರುವ ಕೋವಿಡ್‌ ಲಸಿಕೆ ಕಾರ್ಯಕ್ರಮಕ್ಕೆ ವೇಗ ನೀಡಲು ಈ ಅಭಿಯಾನದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ತೊಡಗಿಸಿಕೊಳ್ಳುವುದು ಅಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಧಿಕಾರಿಗಳೊಂದಿಗೆ ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಪ್ರಧಾನಿ ಮೋದಿ, ಈಗ ನಡೆಯುತ್ತಿರುವ ಲಸಿಕೆ ಕಾರ್ಯಕ್ರಮದ ವೇಗ ಕುಂಠಿತಗೊಳ್ಳದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಅಂತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

3. ‘ಲಸಿಕೆ ಪಡೆದ್ರೂ ಮಾಸ್ಕ್ ಧರಿಸೋದನ್ನ ಬಿಡಬೇಡಿ’


ಭಾರತವೂ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಡೆಲ್ಟಾ ಪ್ಲಸ್ ಕೊರೊನಾ ಸೊಂಕಿನ ಆತಂಕ ಎದುರಾಗಿದೆ. ದಿನೇ ದಿನೇ ಡೆಲ್ಟಾ ಪ್ಲಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರೋದು ಮತ್ತೆ ಭಯ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆಯನ್ನ ನೀಡಿದ್ದು ಲಸಿಕೆಯ ಎರಡು ಡೋಸ್​ ಪಡೆದುಕೊಂಡವರು ಸಹ ಮಾಸ್ಕ್ ಧರಿಸೋದನ್ನ ಮರಿಯಬೇಡಿ. ಸಾಮಾಜಿಕ ಅಂತರ, ಮಾಸ್ಕ್​ ಧಾರಣೆಯನ್ನ ಕಡ್ಡಯವಾಗಿ ಮುಂದುವರಿಸಬೇಕು. ಡೆಲ್ಟಾ ವೈರಸ್​ ತುಂಬಾ ಮಾರಕವಾಗಿದೆ, ಅತೀ ವೇಗದಲ್ಲಿ ಈ ರೂಪಾಂತರಿ ವೈರಸ್​ ಮನುಷ್ಯರನ್ನ ಕಾಡ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

4. ಕೊರೊನಾ ಮೆಟ್ಟಿನಿಂತ 96 ವರ್ಷದ ಅಜ್ಜಿ


96 ವರ್ಷದ ಅಜ್ಜಿಯೊಬ್ಬರು ಕೊರೊನಾ ಮೆಟ್ಟಿನಿಂತು ಸೋಂಕಿಗೆ ಸವಾಲ್​ ಹಾಕಿದ್ದಾರೆ. ಶಿರಸಿ ತಾಲೂಕಿನ ಎಕ್ಕಂಬಿ ಸಮೀಪದ ಸಾಲೇಕೊಪ್ಪದ ನಿವಾಸಿ 96 ವರ್ಷದ ಜಾಹ್ನವಿ ಗಜಾನನ ಭಟ್​ ಎಂಬ ವೃದ್ಧೆ ಕೊರೊನಾ ಗೆದ್ದು ಗುಣಮುಖರಾಗಿದ್ದಾರೆ. ಕಳೆದ‌ ಮೇ 31ರಂದು ಅಜ್ಜಿಗೆ ಕೋವಿಡ್‌ ಸೋಂಕು ತಗುಲಿತ್ತು. ಸೋಂಕು ತಗುಲಿದ್ದು ತಿಳಿದಾಗ ಏನಾಗುತ್ತೊ ಅಂತ ಮನೆಯವರು ಆತಂಕ ಪಟ್ಟಿದ್ದರು. ಆದ್ರೆ‌ ಅಜ್ಜಿ ಮನೆಯಲ್ಲೆ ಚಿಕಿತ್ಸೆ ಪಡೆದು ಕೊರೊನಾ ಮೆಟ್ಟಿ ನಿಂತಿದ್ದಾರೆ.

5. ಎಂಟು ಜನರ ಬಾಳಿಗೆ ಬೆಳಕಾದ ಮಹಾತಾಯಿ


ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಿದ್ಯಾನಗರದ 54 ವರ್ಷದ ಮಹಿಳೆಯೊಬ್ಬರು ಅಕಾಲಿಕ ಮರಣ ಹೊಂದಿದ್ದು, ಅಂಗಾಂಗಳನ್ನ ದಾನ ಮಾಡಿ ಎಂಟು ಜೀವಗಳಿಗೆ ಬೆಳಕಾಗಿದ್ದಾರೆ. ಸುನಂದ ಸತೀಶ ನಾಯ್ಕ್ ರವರು ಮೆದುಳಿನ ರಕ್ತಸ್ರಾವದಿಂದ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯ ಐಸಿಯು ಸೇರಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ರು. ಈ ವೇಳೆ ಅವರ ಮಕ್ಕಳಾದ ರಕ್ಷಂದಾ ಹಾಗೂ ನಿಶಾಂತ್ ನಾಯ್ಕ್ , ತಮ್ಮ ತಾಯಿಯ ಅಂಗಾಂಗಗಳನ್ನ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

6. ಎರಡು ಟ್ರ್ಯಾಕ್ಟರ್ ಱಲಿ ಘೋಷಿಸಿದ ಟಿಕಾಯತ್


ಮೂರೂ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 7 ತಿಂಗಳು ಮುಗಿಸಿ 8ನೇ ತಿಂಗಳಿಗೆ ಕಾಲಿಟ್ಟಿದೆ. ರೈತ ಮುಖಂಡರು ಈಗಲೂ ತಮ್ಮ ಬೇಡಿಕೆಗೆ ಅಂಟಿಕೊಂಡಿದ್ದು, ಕಾಯ್ದೆಗಳನ್ನು ಹಿಂಪಡೆಯದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದಿದ್ದಾರೆ. ಇನ್ನು ಪ್ರತಿಭಟನೆಗೆ ಚುರುಕು ನೀಡಲು ರೈತ ಮುಖಂಡ ರಾಕೇಶ್ ಟಿಕಾಯತ್ ಮುಂದಿನ ತಿಂಗಳು ಎರಡು ಟ್ರಾಕ್ಟರ್ ಱಲಿ ಆಯೋಜಿಸುವುದಾಗಿ ಘೋಷಿಸಿದ್ದಾರೆ.

7. ಕೇಂದ್ರ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ?


ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟಕ್ಕೆ ಮೇಜರ್​ ಸರ್ಜರಿ ಮಾಡಲಿದ್ದಾರೆ ಎನ್ನಲಾಗ್ತಿದೆ. ಕೆಲವು ವರದಿಗಳ ಪ್ರಕಾರ ಕ್ಯಾಬೆನೆಟ್ ಪುನರ್ ರಚನೆಯಾಗಲಿದ್ದು, ಈ ವೇಳೆ 27 ಹೊಸ ಮುಖಗಳಿಗೆ ಮೋದಿ ಸಂಪುಟ ಮಣೆ ಹಾಕೋ ಸಾಧ್ಯತೆ ಇದೆ . ಅದರಲ್ಲೂ ಹೈಪ್ರೊಫೈಲ್​​ಗಳಾದ ರಾಜ್ಯಸಭಾ ಸದಸ್ಯರಾಗಿರುವ ಜ್ಯೋತಿರಾದಿತ್ಯ ಸಿಂದಿಯಾ, ಸುಶಿಲ್ ಮೋದಿ, ನಾರಾಯಣ್ ರಾಣೆ, ಭುಪೇಂದರ್ ಯಾದವ್, ಅಸ್ಸಾಂ ಶಾಸಕ ಸರ್ಬಾನಂದ್ ಸೋನೊವಾಲ್ ನಂತಹ ಘಟಾನುಘಟಿ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಗೋ ನಿರೀಕ್ಷೆ ಇದೆ. ಇನ್ನು ಕರ್ನಾಟಕ್ಕೂ ಮೋದಿ ಸಂಪುಟದಲ್ಲಿ ಸ್ಥಾನ ಸಿಗೋ ಸಾಧ್ಯತೆ ಇದ್ದು, ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಅನ್ನೋದು ಕುತೂಹಲ ಹುಟ್ಟಿಸಿದೆ.

8. ಲಡಾಖ್​ಗೆ ಭೇಟಿ ನೀಡಲಿರುವ ರಾಜನಾಥ್ ಸಿಂಗ್​


ರಕ್ಷಣಾ ಸಚಿವ ರಾಜ ನಾಥ್​ ಸಿಂಗ್​ ಇಂದು ಲಡಾಖ್​ಗೆ ಭೇಟಿನೀಡಲಿದ್ದಾರೆ. ಇನ್ನು ಮೂರು ದಿನಗಳ ಕಾಲ ಲಡಾಖ್​ ಪ್ರವಾಸ ಕೈಗೊಂಡಿದ್ದು. ಈ ವೇಳೆ ಬಿಆರ್​ಓ ನಿಂದ ನಿರ್ಮಾಣವಾಗಿರುವ ಇನ್ಫ್ರಾ ಪ್ರಾಜೆಕ್ಟ್​ ಅನ್ನು ಉದ್ಘಾಟಿಸಲಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ. ಇನ್ನು ಲಡಾಕ್​​ ಪ್ರದೇಶದಲ್ಲಿ ನಿಯೋಜಿಸಿರು ಸೇನಾ ತುಕಡಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಇನ್ನು ಭೂಸೇನೆಯ ಮುಖ್ಯಸ್ಥ ಎಂ.ಎಂ.ನರವಣೆ ಸಹ ರಾಜ​ನಾಥ್​ ಸಿಂಗ್​​ಗೆ ಸಾಥ್​ ನೀಡಿಲಿದ್ದಾರೆ.

9. ‘ಕಿಸ್‌ ಕೊಟ್ಟಿದ್ದ ಯುಕೆ ಆರೋಗ್ಯ ಕಾರ್ಯದರ್ಶಿ ರಾಜೀನಾಮೆ’


ಕೋವಿಡ್​ ನಿಯಮ ಉಲ್ಲಂಘಿಸಿ ಸಹೋದ್ಯೋಗಿಯೋರ್ವಳಿಗೆ ಕಿಸ್ ಮಾಡಿದ್ದಕ್ಕೆ ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾಂಕಾಕ್ ಕ್ಷಮೆಯಾಚಿಸಿದ್ರು. ಇದೀಗ ಆರೋಗ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯನ್ನೂ ಸಹ ಕೊಟ್ಟಿದ್ದಾರೆ. ಸೋಷಿಯಲ್ ಡಿಸ್ಟೆಂಟ್ ನಿಯಮ ಮರೆತು ಮ್ಯಾಟ್ ಹ್ಯಾಂಕಾಕ್ ಅವರು ಸಹೋದ್ಯೋಗಿಯೋರ್ವಳಿಗೆ ಕಿಸ್ ಮಾಡಿದ್ದ ಫೋಟೋ ಅಂತಾರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಪ್ರಕಟವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮ್ಯಾಟ್ ಹ್ಯಾಂಕಾಕ್, ಆರೋಗ್ಯ ಕಾರ್ಯದರ್ಶಿಯಾಗಿದ್ದುಕೊಂಡು ಸೋಷಿಯಲ್ ಡಿಸ್ಟೆನ್ಸ್ ಉಲ್ಲಂಘಿಸಿ ತಪ್ಪು ಮಾಡಿದ್ದೇನೆ. ಹೀಗಾಗಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಅಂತಾ ಹೇಳಿದ್ದಾರೆ.

10. ಅಭಿಮಾನಿಗಳ ಮುಂದೆ ‘ಕಬ್ಜ‘ ಪೋಸ್ಟರ್​


ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಇದೀಗ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದ ವಿನೂತನ ಹಾಲಿವುಡ್ ಶೈಲಿಯ ಪೋಸ್ಟರ್ ಬಿಡುಗಡೆಯಾಗಿದೆ. ಇನ್ನು ಸಿನಿಮಾದಲ್ಲಿ ರಿಯಲ್​ಸ್ಟಾರ್​ ಉಪೇಂದ್ರ ನಾಯಕನಾಗಿ ಅಭಿನಯಿಸಿದ್ರೆ, ವಿಶೇಷಪಾತ್ರದಲ್ಲಿ ಕಿಚ್ಚ ಸುದೀಪ್​ ಪ್ರೇಕ್ಷಕರನ್ನ ರಂಜಿಸಲಿದ್ದಾರೆ. ಖ್ಯಾತ ನಿರ್ದೇಶಕ ಆರ್​. ಚಂದ್ರು ಚಿತ್ರಕ್ಕೆ ಆ್ಯಕ್ಷನ್​ಕಟ್​ ಹೇಳಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್ appeared first on News First Kannada.

Source: newsfirstlive.com

Source link