ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1. ಇಂದಿನಿಂದ ರಾಜ್ಯದಲ್ಲಿ ಅನ್ ಲಾಕ್ 3.0 ಜಾರಿ
ರಾಜ್ಯದಲ್ಲಿ ಇಂದಿನಿಂದ ಅನ್ಲಾಕ್ 3.0 ಜಾರಿಯಾಗಿದ್ದು ಈ ಮೂಲಕ ರಾಜ್ಯ ಸಂಪೂರ್ಣವಾಗಿ ಓಪನ್ ಆಗಿದೆ. ಮೂರನೇ ಹಂತದ ಅನ್ಲಾಕ್ನಲ್ಲಿ ಬಹುತೇಕ ಎಲ್ಲ ವಲಯಗಳಿಗೂ ಸರ್ಕಾರ ರಿಲೀಫ್ ನೀಡಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಇವತ್ತಿನಿಂದ ಶೇಕಡಾ 100ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಅಲ್ಲದೇ ಇಂದಿನಿಂದ ಮಾಲ್ಗಳು ಸಹ ಒಂದಷ್ಟು ಷರತ್ತುಗಳೊಂದಿಗೆ ಓಪನ್ ಆಗಲಿವೆ. ಇನ್ನು ಅಂತ್ಯ ಸಂಸ್ಕಾರಕ್ಕೆ 20 ಮತ್ತು ಮದುವೆ ಸೇರಿ ಇತರ ಕೌಟುಂಬಿಕ ಕಾರ್ಯಕ್ರಮಕ್ಕೆ 100 ಮಂದಿ ಸೇರಲು ಅನುವು ಮಾಡಿಕೊಡಲಾಗಿದೆ. ಕ್ರೀಡಾ ಸಂಕೀರ್ಣ, ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ಅನುಮತಿ ನೀಡಲಾಗಿದೆ. ಜೊತೆಗೆ ವಾರಾಂತ್ಯದ ಕರ್ಫ್ಯೂ ರದ್ದುಪಡಿಸಲಾಗಿದೆ.

2. ವಾರದ ಎಲ್ಲಾ ದಿನ ಸಂಚರಿಸಲಿದೆ ನಮ್ಮ ಮೆಟ್ರೋ
ರಾಜಧಾನಿಯಲ್ಲಿ ಇಂದಿನಿಂದ ಪ್ರತಿದಿನ 4 ಸಾವಿರದ 500 ಬಿಎಂಟಿಸಿ ಬಸ್ ರಸ್ತೆಗಿಳಿಯಲಿವೆ. QR Code ಮೂಲಕ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿದ್ದು, ಬೆಳಗ್ಗೆ 5 ರಿಂದ ರಾತ್ರಿ 9ರವರೆಗೆ ಬಿಎಂಟಿಸಿ ಬಸ್ ಕಾರ್ಯಾಚರಣೆ ನಡೆಸಲಿದೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಸಾರಿಗೆ ಬಸ್ ಸಂಚಾರ ಹೆಚ್ಚಳ ಮಾಡುವುದಾಗಿ ಬಿಎಂಟಿಸಿ ತಿಳಿಸಿದ್ದು, ಎಲ್ಲಾ ಬಿಎಂಟಿಸಿ ಸಿಬ್ಬಂದಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಕೆಎಸ್ಆರ್ಟಿಸಿ ಸಹ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿದೆ. ಇನ್ನು ಬೆಳಗ್ಗೆ 7 ರಿಂದ ರಾತ್ರಿ 8ರವರೆಗೆ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಗರಿಷ್ಠ ಸಮಯದಲ್ಲಿ 5 ನಿಮಿಷಕ್ಕೊಂದು ರೈಲು, ಇತರೆ ವೇಳೆ 15 ನಿಮಿಷ ಅಂತರದಲ್ಲಿ ಮೆಟ್ರೋ ಸೇವೆ ನೀಡಲಿದೆ. ಇನ್ನು ಶನಿವಾರ ಮತ್ತು ಭಾನುವಾರ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಮೆಟ್ರೋರೈಲು ಓಡಾಟ ನಡೆಸಲಿದೆ.

3. ಬಾರ್, ರೆಸ್ಟೋರೆಂಟ್ ತೆರೆಯಲು ಅನುಮತಿ
ಇನ್ನು ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಸಂತಸದ ಸುದ್ಧಿ ನೀಡಿದೆ. ಅನ್ಲಾಕ್ 3.0ನಲ್ಲಿ ಮದ್ಯ ಪ್ರಿಯರಿಗೆ ಬಾರ್ನಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ ನೀಡಲಾಗಿದೆ. ಈ ಮೊದಲು, ಮದ್ಯ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗಿತ್ತು. ಈಗ, ಬಾರ್ನಲ್ಲೇ ಕುಳಿತು ಕುಡಿಯಲು ಅವಕಾಶ ಕೊಡಲಾಗಿದೆ. ಆದರೆ, ಬಾರ್ ಸಪ್ಲೈಯರ್ಸ್ ಅಥವಾ ರೆಸ್ಟೋರೆಂಟ್ ಸಪ್ಲೈಯರ್ಸ್ ಹಾಗೂ ಕೆಲಸಗಾರರು ಲಸಿಕೆ ಹಾಕಿಕೊಂಡಿರುವುದು ಕಡ್ಡಾಯ ಮಾಡಲಾಗಿದೆ.

4. ಬೆಂಗಳೂರು, ದಾವಣಗೆರೆಯಲ್ಲಿ ವರುಣನ ಆರ್ಭಟ
ಹಲವು ದಿನಗಳಿಂದ ಬ್ರೇಕ್ ನೀಡಿದ್ದ ವರುಣ ರಾಜಧಾನಿಗೆ ಮತ್ತೆ ತಂಪೆರೆದಿದ್ದಾನೆ. ನಗರದ ಹಲವು ಏರಿಯಾಗಳಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಇನ್ನು ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಮಳೆನೀರಿನಿಂದ ಹಲವು ರಸ್ತೆಗಳು ಜಲಾವೃತವಾಗಿತ್ತು. ಬೆಣ್ಣೆ‌ನಗರಿ ದಾವಣಗೆರೆಯಲ್ಲೂ ಕೂಡ ಮಳೆ ಸುರಿದಿದೆ. ಜಿಲ್ಲೆಯ ಸುತ್ತಮುತ್ತ ಭಾರಿ ಮಳೆಯಾಗಿದ್ದು, ಕಳೆದ 20 ದಿನಗಳಿಂದ ಮಳೆ ಇಲ್ಲದೇ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

5. ಶಿಕ್ಷಕರಿಗಿಂತ ಶಿಕ್ಷಕಿಯರ ಸಂಖ್ಯೆಯೇ ಹೆಚ್ಚು
ದೇಶದಲ್ಲಿ ಶಿಕ್ಷಕರಿಗಿಂತ ಶಿಕ್ಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಎಂದು ಯುಡಿಐಎಸ್ಇ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಶಿಕ್ಷಕಿಯರು ಮೊದಲ ಬಾರಿಗೆ ತಮ್ಮ ಪುರುಷ ಸಹವರ್ತಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವುದು ಬಯಲಾಗುತ್ತಿದೆ. ದೇಶದ 96.8 ಲಕ್ಷ ಶಿಕ್ಷಕರಲ್ಲಿ 49.2 ಲಕ್ಷ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. 2012-13ರಲ್ಲಿ, ದೇಶಾದ್ಯಂತ 35.8 ಲಕ್ಷ ಶಿಕ್ಷಕಿಯರು 42.4 ಲಕ್ಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಇದೀಗ 7 ವರ್ಷಗಳಲ್ಲಿ ಸುಮಾರು 37% ಅಥವಾ 13 ಲಕ್ಷಕ್ಕಿಂತ ಹೆಚ್ಚು ಶಿಕ್ಷಕಿಯರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ..

6. ಏರ್ ಇಂಡಿಯಾದಿಂದ ₹30 ಲಕ್ಷ ಪರಿಹಾರ ಕೋರಿದ ಪ್ರಯಾಣಿಕ
ಏರ್ ಇಂಡಿಯಾ ಸಂಸ್ಥೆಯಿಂದ ನನ್ನ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದ ಎಂದು ದೆಹಲಿ ಪತ್ರಕರ್ತ ವಿಮಾನಯಾನ ಸಂಸ್ಥೆಯಿಂದ ₹ 30 ಲಕ್ಷ ಪರಿಹಾರವನ್ನು ಕೋರಿದ್ದಾರೆ. ಏರ್ ಇಂಡಿಯಾ ಮೇಲೆ ಭಾರೀ ದೊಡ್ಡ ಸೈಬರ್ ದಾಳಿ ನಡೆದಿದ್ದು, ಏರ್ಇಂಡಿಯಾ 45 ಲಕ್ಷ ಪ್ರಯಾಣಿಕರ ಕ್ರೆಡಿಟ್ ಕಾರ್ಡ್, ಪಾಸ್ಪೋರ್ಟ್ ಮಾಹಿತಿ, ಫೋನ್ ನಂಬರ್ಗಳು ಸೇರಿದಂತೆ ಹಲವು ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಏರ್ಇಂಡಿಯಾದ ಮೇಲೆ ಸೈಬರ್ ದಾಳಿ ನಡೆದಿದ್ದು, ಭಾರೀ ಪ್ರಮಾಣದ ಪ್ರಯಾಣಿಕರ ಮಾಹಿತಿಗಳನ್ನು ಕಳುವು ಮಾಡಲಾಗಿದೆ ಎಂದು ಹೇಳಲಾಗತ್ತಿದೆ. ಹೀಗಾಗಿ ಪತ್ರಕರ್ತ ರಿತಿಕಾ ಹಂದೂ ಏರ್ ಇಂಡಿಯಾಕ್ಕೆ ಕಾನೂನು ನೋಟಿಸ್ ಕಳುಹಿಸಿದ್ದಾರೆ..

7. ಮೃತರಲ್ಲಿ ಶೇ. 99.2ರಷ್ಟು ಮಂದಿ ಲಸಿಕೆ ಪಡೆಯದವರು
ವ್ಯಾಕ್ಸಿನ್ ಪಡೆಯದ ಮಂದಿಗೆ ಅಮೇರಿಕಾ ಮೂಲದ ಸಾಂಕ್ರಾಮಿಕ ರೋಗದ ತಜ್ಞರು ಶಾಕಿಂಗ್ ವರದಿಯೊಂದನ್ನು ನೀಡಿದ್ದಾರೆ. ಅಮೇರಿಕಾದಲ್ಲಿ ಕೋವಿಡ್ -19 ನಿಂದ ಸಾವನ್ನಪ್ಪಿದ ಶೇಕಡಾ 99.2 ರಷ್ಟು ಮಂದಿ ವ್ಯಾಕ್ಸಿನ್ ಪಡೆದಿರಲಿಲ್ಲ ಅನ್ನೋ ಮಾಹಿತಿಯನ್ನು ಅಮೇರಿಕಾದ ವಿಜ್ಞಾನಿಗಳು ನೀಡಿದ್ದಾರೆ. ಅಮೇರಿಕಾದಲ್ಲಿ ಈವರೆಗೆ 6 ಲಕ್ಷದ 5 ಸಾವಿರ ಮಂದಿ ಡೆಡ್ಲಿ ವೈರಸ್ ಕೊರೊನಾದಿಂದಾಗಿ ಅಸುನೀಗಿದ್ದಾರೆ. ಇದು ವಿಶ್ವದಲ್ಲಿ ಕೊರೊನಾದಿಂದಾಗಿ ಮೃತಪಟ್ಟವರಲ್ಲಿ ಅಧಿಕ ಅಂತಾ ವರದಿಯಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ಅಲ್ಲಿನ ವಿಜ್ಞಾನಿ ಡಾ. ಅಂಥೋನಿ ಫೈಸಿ, ‘ಈ ಎಲ್ಲಾ ಸಾವುಗಳನ್ನ ನಾವು ತಡೆಯಬಹುದಿತ್ತು, ಆದರೆ ಇದು ಜರುಗಿಹೋಗಿರುವುದು ದುರಂತದ ವಿಚಾರ ಎಂದಿದ್ದಾರೆ.

8. ಉದ್ಯಾನವನಕ್ಕೆ ಕೊರೊನಾ ಮೃತರ ಚಿತಾಭಸ್ಮ ಬಳಕೆ
ಭೋಪಾಲ್ ಶವಾಗಾರದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲು ಕೊರೋನಾ ಮೃತರ ಚಿತಾಭಸ್ಮ ಬಳಕೆ ಮಾಡಲು ಉದ್ಯಾನವನದ ನಿರ್ವಹಣಾ ಸಮಿತಿ ಮುಂದಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಚಿತಾಭಸ್ಮವನ್ನು ಬಳಸಿ ಭೋಪಾಲ್‌ನ ಹಿಂದೂ ಸ್ಮಶಾನದಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉದ್ಯಾನವನದ ನಿರ್ವಹಣಾ ಸಮಿತಿ ತಿಳಿಸಿದೆ. ಕೊರೊನಾ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಶವಾಗಾರದಲ್ಲಿ 12,000 ಚದರ ಅಡಿ ವಿಸ್ತೀರ್ಣದಲ್ಲಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು ತಿಳಿಸಿದ್ದಾರೆ.

9. ಸಿರಿಶಾ ಬಾಂಡ್ಲಾಗೆ ಶುಭಾಶಯ ತಿಳಿಸಿದ ಅಜ್ಜ
ಅಮೆರಿಕಾದ ಬಾಹ್ಯಾಕಾಶ ಯೋಜನೆಯೊಂದರ ಭಾಗವಾಗಿ ಆಂಧ್ರಪ್ರದೇಶ ಗುಂಟೂರಿನ ನಿವಾಸಿ ಸಿರಿಶಾ ಬಾಂಡ್ಲಾ ಅಂತರಿಕ್ಷಕ್ಕೆ ಹಾರಲು ತಯಾರಿ ನಡೆಸಿದ್ದಾರೆ. ಇದೆ ತಿಂಗಳು 11ರಂದು ನ್ಯೂ ಮೆಕ್ಸಿಕೋದಿಂದ ವಿಎಸ್ಎಸ್ ಯುನಿಟಿ ಆಫ್ ವರ್ಜಿನ್ ಗೆಲಾಕ್ಟಿಕ್ ಎಂಬ ಹೆಸರಿನ ಬಾಹ್ಯಾಕಾಶ ನೌಕೆ ಪ್ರಯಾಣ ಕೈಗೊಳ್ಳುತ್ತಿದ್ದು, ಒಟ್ಟು ಆರು ಮಂದಿಯನ್ನೊಳಗೊಂಡ ಈ ನೌಕೆಯಲ್ಲಿ ಸಿರಿಶಾ ಕೂಡ ಒಬ್ಬರಾಗಿದ್ದಾರೆ. ಇನ್ನು ಸಿರಿಶಾ ಅವರಿಗೆ ಅವರ ಅಜ್ಜ ಡಾ ರಾಗಯ್ಯ ಅವರ ಅಭಿನಂಧನೆದಲ್ಲಿದ್ದಾರೆ. ನನಗೆ ತುಂಬಾ ಸಂತೋಷವಾಗುತ್ತಿದೆ.. ಮೊದಲಿನಿಂದಲೂ ಅವಳು ಆಕಾಶದ ಬಗ್ಗೆ ತುಂಬಾ ಆಕರ್ಷಿತನಾಗಿದ್ದಳು. ಈಗ ಅವಳು ಬಾಹ್ಯಾಕಾಶಕ್ಕೆ ಹೋಗುತ್ತಿದ್ದಾಳೆ. ಅವಳ ಧೈರ್ಯಶಾಲಿ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಬಲಶಾಲಿ ಎಂದು ಡಾ ರಾಗಯ್ಯ ಹೇಳಿದ್ದಾರೆ..

10. ತಾಯಿ, ಪತ್ನಿ, ಕ್ಲಾಸ್​ಗೆ ಕ್ಷಮೆಯಾಚಿಸಿದ ಕಾರ್ತಿಕ್‌
ಕ್ರಿಕೆಟ್ ಬ್ಯಾಟ್​ನ ಪಕ್ಕದ ಮನೆಯ ಹೆಂಡತಿಗೆ ಹೋಲಿಸಿ ಮಾತನಾಡಿದ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಶ್ರೀಲಂಕಾ-ಇಂಗ್ಲೆಂಡ್ ನಡುವೆ ನಡೆದ 2ನೇ ಏಕದಿನ ಪಂದ್ಯದ ವೇಳೆ ದಿನೇಶ್ ಕಾರ್ತಿಕ್, ಬ್ಯಾಟ್‌ಅನ್ನು ಪಕ್ಕದ ಮನೆಯವನ ಹೆಂಡತಿಗೆ ಹೋಲಿಸಿ ಮಾತನಾಡಿದ್ದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ದಿನೇಶ್ ಕಾರ್ತಿಕ್ ಕ್ಷಮೆಯಾಚಿಸಿದ್ದಾರೆ. ಕಳೆದ ಪಂದ್ಯದ ವೇಳೆ ಆಡಿದ ಮಾತಿಗೆ ನಾನು ಕ್ಷಮೆಯಾಚಿಸುವೆ. ನಾನು ತಪ್ಪಾಗಿ ಮಾತನಾಡಿದಕ್ಕಾಗಿ ಎಲ್ಲರ ಬಳಿ ಕ್ಷಮೆಯಾಚಿಸುವೆ. ನಾನು ಹೇಳಿದ ಮಾತು ಸರಿಯಾಗಿರಲಿಲ್ಲ. ಅದಕ್ಕಾಗಿ ನನ್ನ ಪತ್ನಿ ಮತ್ತು ಅಮ್ಮನಿಂದ ಸಾಕಷ್ಟು ಬೈಗುಳವನ್ನು ಎಂದು ಹೇಳಿದ್ದಾರೆ

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link