ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​ಅಪ್​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​ಅಪ್​

1) ಲಕ್ಷ್ಮಣ್ ಸವದಿ ಮಗನ ಕಾರು ಡಿಕ್ಕಿ, ಬೈಕ್ ಸವಾರ ಸಾವು
ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬಾಗಲಕೋಟೆಯ ಕೂಡಲಸಂಗಮ ಕ್ರಾಸ್ನಲ್ಲಿ ನಡೆದಿದೆ. ಕೂಡ್ಲೆಪ್ಪ ಎಂಬುವವರ ಬೈಕ್ಗೆ ಚಿದಾನಂದ ಸವದಿ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇನ್ನು ಕಾರನ್ನು ಚಿದಾನಂದ ಚಲಾಯಿಸುತ್ತಿದ್ದರು ಅಂತ ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಆದ್ರೆ ಪೊಲೀಸರು ಚಿದಾನಂದ ಅವರನ್ನ ಬಿಟ್ಟು ಚಾಲಕ ಹನುಮಂತಪ್ಪ ಎಂಬುವವರ ಮೇಲೆ ದೂರು ದಾಖಲಿಸಿದ್ದಾರೆ ಅನ್ನೋ ಆರೋಪವನ್ನ ಮಾಡಲಾಗಿದೆ.

2) ಹೆಚ್​ಡಿಕೆ ಮಾಧ್ಯಮ ಸಲಹೆಗಾರ ಸದಾನಂದ್ ನಿಧನ
ಹಲವು ವರ್ಷಗಳಿಂದ ಮಾಜಿ ಸಿಎಂ ಹೆಚ್.​ಡಿ ಕುಮಾರಸ್ವಾಮಿಯವರಿಗೆ ಮಾಧ್ಯಮ ಸಲಹೆಗಾರ ಆಗಿದ್ದ ಕೆ.ಸಿ ಸದಾನಂದ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂಲತಃ ಚೆನ್ನರಾಯಪಟ್ಟಣದವರಾದ ಸದಾನಂದ್ ಅವರಿಗೆ ನಿನ್ನೆ ರಾತ್ರಿ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಸದಾನಂದ್ ಹಲವು ವರ್ಷಗಳಿಂದ ಕುಮಾರಸ್ವಾಮಿ ಅವ್ರಿಗೆ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

2) ‘ಮೇಕೆದಾಟು ಯೋಜನೆ ಪ್ರಾರಂಭಿಸಲಾಗುತ್ತೆ’
ಕರ್ನಾಟಕ ರಾಜ್ಯ ಕಾವೇರಿ ನದಿ ಪಾತ್ರದಲ್ಲಿ ನೀರು ಬಳಸಿಕೊಳ್ಳಲು ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಲಿದೆ ಅಂತಾ ಸಿಎಂ ಕಚೇರಿ ಸ್ಪಷ್ಟಪಡಿಸಿದೆ. ತಮಿಳುನಾಡಿಗೆ ಪತ್ರ ಬರೆದಿದ್ದನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದರು. ಇದರ ಬೆನ್ನಲ್ಲೇ ತಮಿಳುನಾಡು ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನಲೆ ಎರಡು ರಾಜ್ಯಗಳ ನಡುವಿನ ಸೌಹಾರ್ದತೆಯ ಸಲುವಾಗಿ ತಮಿಳುನಾಡಿನ ಸಿಎಂಗೆ ಪತ್ರವನ್ನು ಬರೆಯಲಾಗಿತ್ತು. ಇನ್ನು ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗಾಗಿ 4.75 ಟಿಎಂಸಿ ನೀರನ್ನು ಸರ್ವೋಚ ನ್ಯಾಯಾಲಯವು ಆದೇಶಿಸಿದ್ದು, ಸದರಿ ಪ್ರಮಾಣವು ಕನ್ಸಂಪ್ಟಿವ್ ಬಳಕೆಯಾಗಿದ್ದು, ಈ ಪ್ರಮಾಣವನ್ನು ಉಪಯೋಗಿಸಿಕೊಳ್ಳಲು 23.75 ಟಿಎಂಸಿ ನೀರಿನ ಪ್ರಮಾಣವನ್ನು ಸಂಗ್ರಹಿಸಿ ಪೂರೈಸಬೇಕಾಗಿರುತ್ತದೆ. ಆದರೆ, ತಮಿಳುನಾಡಿಗೆ ಯೋಜನೆಯಿಂದ ಯಾವುದೇ ತೊಂದರೆಯಾಗವುದಿಲ್ಲ ಅಂತಾ ರಾಜ್ಯ ಸರ್ಕಾರ ತಿಳಿಸಿದೆ.

4) ಟಿಕೆಟ್​​ನಲ್ಲಿ ಬಿಎಂಟಿಸಿಯಿಂದ ಕೊರೊನಾ ಜಾಗೃತಿ
ಅನ್ಲಾಕ್ ಆಯ್ತು ಅಂತ ಬೇಕಾಬಿಟ್ಟಿ ಓಡಾಟ ಮಾಡಬೇಡಿ ಅಂತ ಜನರಿಗೆ ಜಾಗೃತಿ ಮೂಡಿಸೋಕೆ ಬಿಎಂಟಿಸಿ ಮುಂದಾಗಿದೆ. ಬಸ್ಗಳನ್ನ ರಸ್ತೆಗಿಳಿಸಿದ ಮೇಲೆ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್ನಲ್ಲಿ , ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸಿ ಅಂತ ಸಂದೇಶ ಮುದ್ರಿಸಿ ಜಾಗೃತಿ ಮೂಡಿಸುತ್ತಿದೆ. ಇನ್ನು ಬಸ್ನಲ್ಲಿ ಸಂಚರಿಸುವ ಪ್ರಯಾಣಿಕರು ಕೋವಿಡ್ನಿಯಮಗಳನ್ನ ಪಾಳನೆ ಮಾಡುವಂತೆ ಈಗಾಗಲೇ ಸರ್ಕಾರ ಸೂಚಿಸಿದ್ರು, ಮಾಸ್ಕ್ ಧರಿಸಿದೆ ಸಂಚರಿಸುವ ಪ್ರಯಾಣಿಕರು ಟಿಕೆಟ್ ನೋಡಿದ ಮೇಲಾದರೂ ಮಾಸ್ಕ್ ಹಾಕಲಿ ಅಂತ ಸಾರಿಗೆ ಇಲಾಖೆ ಈ ರೀತಿ ಜಾಗೃತಿ ಮೂಡಿಸೋಕೆ ಮುಂದಾಗಿದೆ.

6) ಬ್ರಿಟಿಷ್ ಸೇನೆಯಲ್ಲಿ ಕೊಪ್ಪಳದ ಯುವಕ
ಬರದನಾಡು ಕೊಪ್ಪಳದ ಯುವಕನೊಬ್ಬ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈತನ ಸಾಧನೆಗೆ ಊರಿನ ಜನರು ಬೆರಗಾಗಿದ್ದಾರೆ. ಜಿಲ್ಲೆಯ ಶಹಪುರ ಗ್ರಾಮದ ವಾಕೋಡೆ ಮತ್ತು ಫಕೀರವ್ವ ದಂಪತಿ ಮಗನಾದ ಗೋಪಾಲ್ ಎಂಬಾತ ಬ್ರಿಟಿಷ್ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದಾನೆ. ಬಾಲ್ಯದಲ್ಲಿ ಗೋವಾಗೆ ಹೋಗಿ ಕಡಲೆಕಾಯಿ ಮಾರುತ್ತಿದ್ದ ಈತನನ್ನ, ಬ್ರಿಟ್ಸ್ ಕೊರೊಲ್ ಮತ್ತು ಕೊಲಿನ್ ಹ್ಯಾನ್ಸನ್ ದಂಪತಿ ಬ್ರಿಟನ್ಗೆ ಕರೆದುಕೊಂಡು ಹೋಗಿ ಶಿಕ್ಷಣ ಕೊಡಿಸಿದ್ದಾರೆ. ಸದ್ಯ ಇಂಗ್ಲೆಂಡ್ ನ ಜಾಸ್ಮಿನ್ ಎಂಬ ಯುವತಿಯನ್ನು ವಿವಾಹವಾಗಿರುವ ಗೋಪಾಲ್ ಕೊಪ್ಪಳದಿಂದ ಬ್ರಿಟನ್ಗೆ ಹೋಗಿ ಅಲ್ಲಿನ ಸೈನ್ಯದಲ್ಲಿ ಹುದ್ದೆ ಗಿಟ್ಟಿಸುವ ಮೂಲಕ ಜನರ ದೃಷ್ಠಿಯಲ್ಲಿ ರೋಚಕತೆಯ ಕತೆಯಾಗಿದ್ದಾನೆ.

7) ನಡುರಸ್ತೆಯಲ್ಲೇ ಉರಿದ ಕಾರು, ಪ್ರಯಾಣಿಕರು ಪಾರು
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಚಲಿಸುತ್ತಿದ್ದ ಬ್ರಿಜಾ ಕಾರಿನಲ್ಲಿ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡಿದ್ದು, ವಾಹನ ಸುಟ್ಟು ಭಸ್ಮವಾಗಿದೆ. ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಪ್ರಯಾಣಿಸುತ್ತಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಿಂದ ಕೆಳಗಿಳಿದು ಬಚಾವ್ ಆಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

8) ‘ಲಸಿಕೆಗೂ ಜಗ್ಗಲ್ಲ ಡೆಲ್ಟಾ ಪ್ಲಸ್ ಸೋಂಕು’
ದೇಶದಲ್ಲಿ ಮಹಾಮಾರಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಡೆಲ್ಟಾ ವೈರಸ್ನ ಭೀತಿ ಹೆಚ್ಚಾಗಿದೆ. ಕೊರೋನಾದ ಬೇರೆ ರೂಪಾಂತರಿಗಳಿಗೆ ಹೋಲಿಕೆ ಮಾಡಿದಲ್ಲಿ ಡೆಲ್ಟಾ ರೂಪಾಂತರಿ ಲಸಿಕೆಗಳಿಗೂ ಜಗ್ಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಡೆಲ್ಟಾ ಸೋಂಕು, ಪ್ರತಿಕಾಯಗಳಿಗೆ 8 ಪಟ್ಟು ಕಡಿಮೆ ಸೂಕ್ಷ್ಮವಾಗಿವೆ, ಅಂದ್ರೆ, ಲಸಿಕೆ ಡೆಲ್ಟಾ ರೂಪಾಂತರಿ ಮೇಲೆ 8 ಪಟ್ಟು ಕಡಿಮೆ ಪ್ರಭಾವಕಾರಿಯಾಗಿರುತ್ತೆ ಅಂತ ದೆಹಲಿಯ ಗಂಗಾ ರಾಮ್ ಆಸ್ಪತ್ರೆಯ ಅಧ್ಯಯನದಿಂದ ತಿಳಿದು ಬಂದಿದೆ. ಒಟ್ಟು 3 ಕೇಂದ್ರಗಳಲ್ಲಿ 100 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ ಅಧ್ಯಯನದಿಂದ ಈ ಮಾಹಿತಿ ಬಯಲಾಗಿದೆ. ಲಸಿಕೆ ಪಡೆದವರಲ್ಲೂ ಡೆಲ್ಟಾ ರೂಪಾಂತರಿ ವೇಗವಾಗಿ ಹರಡುವ ಸಾಧ್ಯತೆ ಇದೆ ಅಂತ ಅಧ್ಯಯನ ವರದಿ ತಿಳಿಸಿದೆ.

10) ಹೆಲಿಕಾಪ್ಟರ್​​ನಲ್ಲಿ ಬಂದ ವಧು, ಗ್ರಾ.ಪಂ. ಅಧ್ಯಕ್ಷೆ!
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಸಂಭ್ರಮದಲ್ಲಿ ವಧುವೊಬ್ಬಳು ಹೆಲಿಕಾಪ್ಟರ್‌ನಲ್ಲಿ ಗಂಡನ ಊರಿಗೆ ಬಂದ ಘಟನೆ ಉತ್ತರ ಪ್ರದೇಶದ ರಾಮನಗರದಲ್ಲಿ ನಡೆದಿದೆ. ಬಿಜೆಪಿಯ ನಗರ ಉಪಾಧ್ಯಕ್ಷ ಲೋಧಿ ಅವರ ಪುತ್ರಿ ಸುನೀತಾ ವರ್ಮಾ ಕಳೆದ ಡಿಸೆಂಬರ್‌ನಲ್ಲಿ ನ್ಯಾಯಾಲಯದಲ್ಲಿ ಒಮೇಂದ್ರ ಸಿಂಗ್ನನ್ನ ಮದುವೆಯಾಗಿದ್ರು. ಗಂಡನ ಊರಾದ ಆಲಂಪುರ್ ಕೋಟ್‌ನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಗೆದ್ದು ಬಂದ ಖುಷಿಯಲ್ಲಿ ಹೆಲಿಕಾಪ್ಟರ್ನಲ್ಲಿ ಸುನೀತಾ ಗಂಡನ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಇನ್ನು ಗ್ರಾಮದ ಮುಖ್ಯಸ್ಥರ ಸೊಸೆಯಾಗಿ ಮೊದಲ ಬಾರಿಗೆ ಹೆಲಿಕಾಪ್ಟರ್ ಬರುತ್ತಿರುವುದನ್ನ ನೋಡಲು ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ರು.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​ಅಪ್​ appeared first on News First Kannada.

Source: newsfirstlive.com

Source link