ಟಾಪ್ 10 ಸುದ್ದಿಗಳ ಸಂಕ್ಷಿಪ್ತ ಹೂರಣ ಇಲ್ಲಿದೆ

1. ಆಕ್ಸಿಜನ್ ಸಿಗದೆ ಬೆಂಗಳೂರಿನಲ್ಲಿ ಇಬ್ಬರು ಸಾವು
ಚಾಮರಾಜನಗರದ ದುರಂತ ಬೆನ್ನಲ್ಲೆ ಬೆಂಗಳೂರಿನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಬೆಂಗಳೂರಿನ ಅರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಇಬ್ಬರು ಸೋಂಕಿತರು ನರಳಿ ನರಳಿ ಸಾವನ್ನಪ್ಪಿದ್ದಾರೆ. ತಡರಾತ್ರಿ 12.30ರ ಸುಮಾರಿಗೆ ಆಕ್ಸಿಜನ್ ಖಾಲಿಯಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಅಸುನೀಗಿದ್ದಾರೆ. ಆಕ್ಸಿಜನ್ ಖಾಲಿಯಾಗುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ಯಲಹಂಕ ‌ನ್ಯೂ ಟೌನ್ ಇನ್ಸ್ಪೆಕ್ಟರ್ ಸತ್ಯನಾರಾಯಣ್ ಅವರಿಗೆ ಕರೆ ಮಾಡ್ತಾರೆ. ಹೀಗಾಗಿ ಆಸ್ಪತ್ರೆ ಬಳಿ ಬಂದ ಇನ್ಸ್ಪೆಕ್ಟರ್ ಸೋನು ಸೂದ್ ಚಾರಿಟಬಲ್ ಟ್ರಸ್ಟ್​​​ ಸದಸ್ಯರಿಗೆ ಕರೆ ಮಾಡಿ ಆಕ್ಸಿಜನ್ ಮುಗಿದ ವಿಚಾರ ತಿಳಿಸುತ್ತಾರೆ. ಇನ್ಸ್ಪೆಕ್ಟರ್ ಕರೆಗೆ ಸ್ಪಂದಿಸಿದ ಚಾರಿಟಬಲ್ ಟ್ರಸ್ಟ್ ಸಿಬ್ಬಂದಿ ಕೂಡಲೇ 11 ಆಕ್ಸಿಜನ್ ಸಿಲಿಂಡರ್ ತಂದು 10 ಸೋಂಕಿತರ ಪ್ರಾಣ ಉಳಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

2. ಆಕ್ಸಿಜನ್ ಬೆಡ್ ಸಿಗದೆ ಮೃತಪಟ್ಟ ಸೋಂಕಿತ
ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 24 ಮಂದಿ ಸಾವನಪ್ಪಿರುವ ಬೆನ್ನಲೇ ಇತ್ತ ಮಂಡ್ಯದ ನಾಗಮಂಗಲ ತಾಲ್ಲೂಕಿನ ಸೋಂಕಿತರೊಬ್ಬರು ಆಕ್ಸಿಜನ್ ಹಾಗೂ ಬೆಡ್ ಸಿಗದೆ ನರಳಾಡಿ ಮೃತಪಟ್ಟಿದ್ದಾರೆ. ಹಾಲಹಳ್ಳಿಯ ನಿವಾಸಿ ಧನಂಜಯ್ ಎಂಬರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಚಿಕಿತ್ಸೆಗೆ ಮಿಮ್ಸ್ ಆಸ್ಪತ್ರೆಗೆ ಕರೆತರಲಾಗುತಿತ್ತು. ಆದ್ರೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಧನಂಜಯ್ ಆ್ಯಂಬುಲೆನ್ಸ್​​ನಲ್ಲೇ ಮೃತಪಟ್ಟಿದ್ದಾರೆ.

3. ಆಕ್ಸಿಜನ್ ಇದ್ದರೂ ಡಿಸ್ಚಾರ್ಜ್ ಆಗಿ ಎಂದ ಖಾಸಗಿ ಆಸ್ಪತ್ರೆ
ಬೆಂಗಳೂರಿನ ಬೆನ್ಸನ್ ಟೌನ್​​​ನಲ್ಲಿರುವ ಡಿವೈನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಇದ್ರೂ ಕೂಡ ಆಕ್ಸಿಜನ್ ಇಲ್ಲ ಅಂತ ಹೇಳಿ ಡಿಸ್ಚಾರ್ಜ್ ಆಗುವಂತೆ ರೋಗಿಗಳ ಸಂಬಂಧಿಕರಿಗೆ ಆಸ್ಪತ್ರೆಯ ಸಿಬ್ಬಂದಿಯೊರ್ವ ಕರೆ ಮಾಡಿದ್ದಾನೆ. ಇದರಿಂದ ಸೋಂಕಿತರ ಸಂಬಂಧಿಗಳು ಆಸ್ಪತ್ರೆ ಬಳಿ ಜಮಾವಣೆಗೊಂಡು ಕೆಲ ಕಾಲ ಗೊಂದಲ ಉಂಟಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆ ಇಲ್ಲಾ ಅಂತ ಆಸ್ಪತ್ರೆ ಮಾಲೀಕರು ಸ್ಪಷ್ಟನೆ ನೀಡಿದ್ದು, ತಪ್ಪು ಮಾಹಿತಿ ನೀಡಿದ ಸಿಬ್ಬಂದಿ ಆನಂದ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ತೀವಿ ಅಂತ ತಿಳಿಸಿದ್ದಾರೆ.

4. ಒಂದು ವಾರ ಸುಮ್ಮನಹಳ್ಳಿ ಚಿತಾಗಾರ ಬಂದ್
ರಾಜಧಾನಿಯಲ್ಲಿ ಸೋಂಕಿತರು ಚಿಕಿತ್ಸೆಗೆ ಒದ್ದಾಡಿದರೆ, ಮತ್ತೊಂದ್ಕಡೆ ಕುಟುಂಬಸ್ಥರು ಸೋಂಕಿತರ ಶವ ಸಂಸ್ಕಾರಕ್ಕೂ ಪರದಾಡುತ್ತಿದ್ದಾರೆ. ಚಿತಾಗಾರಗಳ ಮುಂದೆ ಮೃತದೇಹ ಹೊತ್ತುನಿಂತ ಆ್ಯಂಬುಲೆನ್ಸ್​ಗಳ ಕ್ಯೂ ಸಾಮಾನ್ಯವಾಗಿ ಬಿಟ್ಟಿದೆ. ಇದ್ರ ಮಧ್ಯೆ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರ ಇಂದಿನಿಂದ ಏಳು ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ. RR ನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಫರ್ನೇಸ್​ಗಳನ್ನ ಬದಲಾಯಿಸಬೇಕಿದೆ. ಹೀಗಾಗಿ ಇಂದಿನಿಂದ ಮೇ 10ರವರೆಗೆ ಅಂದ್ರೆ ಸುಮಾರು 7 ದಿನಗಳ ಕಾಲ ವಿದ್ಯತ್ ಚಿತಾಗಾರ ಕಾರ್ಯನಿರ್ವಹಿಸುವುದಿಲ್ಲ ಅಂತಾ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.

5. ಆರೋಗ್ಯ ಸಿಬ್ಬಂದಿಗೆ ಶೇ.10ರಷ್ಟು ಬೆಡ್ ಮೀಸಲು
ಮಹಾಮಾರಿ ಕೊರೊನಾ ವಿರುದ್ಧ ಸತತ ಒಂದು ವರ್ಷದಿಂದ ಹೊರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಜಿಲ್ಲೆಗಳ ಕೋವಿಡ್ ಆಸ್ಪತ್ರೆಯಲ್ಲಿ ಶೇ. 10ರಷ್ಟು ಬೆಡ್ ಮೀಸಲಿಡಿ ಎಂದು ಆರೋಗ್ಯ ಇಲಾಖೆ ಆದೇಶ ನೀಡಿದೆ. ಆಸ್ಪತ್ರೆಯಲ್ಲಿ ವೈದ್ಯರು, ವೈದ್ಯೇತರ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಶೇ. 10ರಷ್ಟು ಬೆಡ್ ಮೀಸಲಿಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಆದೇಶ ನೀಡಿದ್ದಾರೆ.

6. ಅನಂತಪುರದಲ್ಲಿ ಆಕ್ಸಿಜನ್ ಕೊರತೆಯಿಂದ 8 ಮಂದಿ ಸಾವು
ಕರ್ನಾಟಕದ ಚಾಮರಾಜನಗರ ಆಸ್ಪತ್ರೆಯ ಆಕ್ಸಿಜನ್ ಕೊರತೆಯ ದುರಂತದಂತೆಯೇ ಅತ್ತ ಆಂಧ್ರ ಪ್ರದೇಶದಲ್ಲೂ ಇಂತಹುದೇ ಘಟನೆ ನಡೆದಿದೆ. ಆಕ್ಸಿಜನ್ ಕೊರತೆಯಿಂದಾಗಿ 8 ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆ. ಅನಂತಪುರ ಜಿಲ್ಲೆಯ ಹಿಂದೂಪುರ ಸರ್ಕಾರಿ ಆಸ್ಪತ್ರೆಯಲ್ಲಿ 8 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿನ ಆಕ್ಸಿಜನ್ ಕೊರತೆಯಿಂದಾಗಿಯೇ ಸಾವು ಸಂಭವಿಸಿದೆ ಅಂತಾ ರೋಗಿಗಳ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಮೃತರ ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಲಾಕ್​ಡೌನ್ ಮಾಡಲು ಸುಪ್ರೀಂಕೋರ್ಟ್ ಸಲಹೆ
ದೇಶದಲ್ಲಿ ಮಹಾಮಾರಿ ಆಟ ಮುಂದುರೆದಿದ್ದು ಸೋಂಕಿತರ ಸಂಖೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದ್ರಿಂದ ಸೋಂಕನ್ನು ನಿಯಂತ್ರಿಸಲು ದೇಶಾದ್ಯಂತ ಲಾಕ್ಡೌರನ್ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ. ಲಾಕ್ಡೌರನ್ ಜಾರಿಯಾದ ವೇಳೆ ಎದುರಾಗುವ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳ ತೀವ್ರತೆಯ ಬಗ್ಗೆ ಅರಿವಿದೆ. ಸರ್ಕಾರಗಳು ಈ ಬಗ್ಗೆ ಮುಂಜಾಗ್ರತೆ ವಹಿಸಬೇಕು, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಕಾಲಕಾಲಕ್ಕೆ ಅಗತ್ಯ ನೆರವನ್ನು ನೀಡಿ ಜನಸಾಮಾನ್ಯರ ಹಿತ ಕಾಪಾಡಬೇಕು ಎಂದು ಸಲಹೆ ನೀಡಿದೆ.

ದೇಶದಲ್ಲಿ ವಾರದಿಂದ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ
ಕಳೆದ 7 ದಿನಗಳಿಂದ ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಾ ಬಂದಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯದ ತಿಳಿಸಿದೆ. ದೆಹಲಿ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಹಲವು ರಾಜ್ಯದಲ್ಲಿ ಹೊಸ ಪ್ರಕರಣಗಳು ಕಡಿಮೆಯಾಗಿವೆ ಅಂತ ಮಾಹಿತಿ ನೀಡಿದೆ. ಇದು ಉತ್ತಮ ಬೆಳವಣಿಗೆಯಾಗಿದ್ದು. ಕಠಿಣ ಕ್ರಮಗಳಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಅಂತ ತಿಳಿಸಿದೆ.

2ರ ಮಗ್ಗಿಗೆ ಮುರಿದು ಬಿದ್ದ ಮದುವೆ
ಮದುವೆ ಮನೆಯಲ್ಲಿ ಊಟ ಸರಿಯಾಗಿಲ್ಲ, ಹಣಕೊಟ್ಟಿಲ್ಲ ಎಂದು ಹೀಗೆ ಹಲವು ಕಾರಣಗಳಿಂದ ಮದುವೆ ಮುರಿದು ಬೀಳುವುದನ್ನ ನೋಡಿದ್ದೇವೆ. ಆದ್ರೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವರನಿಗೆ 2ರ ಮಗ್ಗಿ ಹೇಳಲು ಬಂದಿಲ್ಲ ಎಂದು ಮದುವೆ ರದ್ದಾಗಿದೆ. ವಧು ದಿಬ್ಬಣದೊಂದಿಗೆ ವಿವಾಹ ಮಂಟಪವನ್ನು ತಲುಪಿದ್ದು ಆ ಸಂದರ್ಭದಲ್ಲೇ ವರನ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಅನುಮಾನ ಹೊಂದಿದ್ದ ವಧು, ಹೂಮಾಲೆ ಹಾಕುವುದಕ್ಕೂ ಮೊದಲು 2ನೇ ಮಗ್ಗಿ ಹೇಳಲು ಕೇಳಿದ್ದಾಳೆ. ಆದರೆ ವರನಿಗೆ ಮಗ್ಗಿ ಹೇಳಲು ಸಾಧ್ಯವಾಗಿಲ್ಲ. ಸಿಟ್ಟು ಮಾಡಿಕೊಂಡ ವಧು ವಿವಾಹ ರದ್ದು ಮಾಡಿ ಹೊರಟು ಹೋಗಿದ್ದಾಳೆ.

ಇದು ಅರೇಂಜ್ಡ್​​ ಮ್ಯಾರೇಜ್ ಆಗಿದ್ದು, ವರ ಮಹೋಬಾ ಜಿಲ್ಲೆಯ ಧವಾರ್ ಗ್ರಾಮದವನು ಎಂದು ಪನ್ವಾರಿ ಸ್ಟೇಷನ್ ಹೌಸ್ ಆಫೀಸರ್ ವಿನೋದ್ ಕುಮಾರ್ ಹೇಳಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link