ಈ 5 ನಿಮ್ಮ ಅಭ್ಯಾಸಗಳಿಂದ ನಿಮ್ಮ ಪರ್ಸ್​ ಸದಾ ಖಾಲಿ ಇರುತ್ತೆ, ಈಗಲೇ ಈ ಅಭ್ಯಾಸಗಳನ್ನು ಬದಲಾಯಿಸಿ | Savings: bad money habits to avoid and how to break them


ಎಷ್ಟೇ ಸಂಬಳ ಬಂದರೂ ತಿಂಗಳಾಂತ್ಯಕ್ಕೆ ನಿಮ್ಮ ಪರ್ಸ್​ ಖಾಲಿಯೇ?, ಹಣವು ಹೇಗೆ ಖರ್ಚಾಗುತ್ತಿ ದೆ ಎಂದು ತಿಳಿಯುತ್ತಿಲ್ಲವೇ?. ಬಹಳಷ್ಟು ಬಾರಿ ನಾವು ನಮ್ಮ ವೆಚ್ಚಗಳನ್ನು ಹೆಚ್ಚಿಸುತ್ತಲೇ ಇರುತ್ತೇವೆ ಮತ್ತು ಉಳಿತಾಯದ ಬಗ್ಗೆ ಗಮನ ಹರಿಸುವುದಿಲ್ಲ.

ಎಷ್ಟೇ ಸಂಬಳ ಬಂದರೂ ತಿಂಗಳಾಂತ್ಯಕ್ಕೆ ನಿಮ್ಮ ಪರ್ಸ್​ ಖಾಲಿಯೇ?, ಹಣವು ಹೇಗೆ ಖರ್ಚಾಗುತ್ತಿ ದೆ ಎಂದು ತಿಳಿಯುತ್ತಿಲ್ಲವೇ?. ಬಹಳಷ್ಟು ಬಾರಿ ನಾವು ನಮ್ಮ ವೆಚ್ಚಗಳನ್ನು ಹೆಚ್ಚಿಸುತ್ತಲೇ ಇರುತ್ತೇವೆ ಮತ್ತು ಉಳಿತಾಯದ ಬಗ್ಗೆ ಗಮನ ಹರಿಸುವುದಿಲ್ಲ.

ಆದರೆ, ಯಾವ ಅಭ್ಯಾಸಗಳಿಂದಾಗಿ ಹಣವು ನಿಮ್ಮ ಬಳಿ ಇರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. ಈ ಅಭ್ಯಾಸಗಳು ಯಾವಾಗಲೂ ಜೇಬನ್ನು ಖಾಲಿ ಇಡುತ್ತವೆ, ತಕ್ಷಣ ಬದಲಾವಣೆಗಳನ್ನು ಮಾಡಿ

ಹೆಚ್ಚು ನಗದನ್ನು ಕೈಲಿಟ್ಟುಕೊಳ್ಳಬೇಡಿ: ಹೆಚ್ಚು ನಗದು ಕೈಯಲ್ಲಿದ್ದರೆ ಖರ್ಚು ಮತ್ತಷ್ಟು ಹೆಚ್ಚಾಗುತ್ತದೆ. ಅದೇ ಬ್ಯಾಂಕ್​ನಲ್ಲಿದ್ದರೆ ಖರ್ಚು ಮಾಡಬೇಕು ಎಂದೆನಿಸುವುದಿಲ್ಲ.

ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ: ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕು. ಹಾಗಾಗಿ ನೀವು ಗಳಿದೆಲ್ಲವನ್ನೂ ತಿಂಗಳ ಕೊನೆಯಲ್ಲಿ ಕಳೆದುಕೊಳ್ಳಬೇಡಿ. ಸ್ವಲ್ಪ ಉಳಿತಾಯವನ್ನು ನೀವು ಮಾಡಲೇಬೇಕು.

ಶಾಪಿಂಗ್ ಹವ್ಯಾಸ ತಪ್ಪಿಸಿ: ಕೆಲವರು ಪ್ರತಿ ತಿಂಗಳೂ ಶಾಪಿಂಗ್ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ, ಅದನ್ನು ಕಡಿಮೆ ಮಾಡಿ. ಕೆಲ ತಿಂಗಳುಗಳ ಕಾಲ ಮುಂದೂಡಿ. ಕೇವಲ ಅಗತ್ಯವಿರುವ ವಸ್ತುಗಳನ್ನಷ್ಟೇ ಖರೀದಿ ಮಾಡಿ.

ಶೋ ಆಫ್ ಮಾಡುವುದನ್ನು ಬಿಡಿ: ನನ್ನ ಬಳಿ ಇಂಥದ್ದಿದೆ ಅಂಥದ್ದಿದೆ ಎಂದು ಶೋ ಆಫ್ ಮಾಡುವುದನ್ನು ತಪ್ಪಿಸಿ. ನಿಮಗಾಗಿ ನೀವು ಬದುಕಿ. ಬೇರೆಯವರ ಬಳಿ ಇರುವ ವಸ್ತುಗಳನ್ನು ನೀವು ಕೂಡ ಕೊಂಡುಕೊಳ್ಳಬೇಕು ಎನ್ನುವ ಮನಸ್ಥಿತಿ ಬಿಡಿ.

ಪದೇ ಪದೇ ಪಾರ್ಟಿ ಅರೇಂಜ್ ಮಾಡಬೇಡಿ: ಕೆಲವರು ವಾರಕ್ಕೆ ನಾಲ್ಕು ದಿನ ಪಾರ್ಟಿ ಮಾಡುತ್ತಾರೆ, ಸ್ನೇಹಿತರನ್ನು ಆಹ್ವಾನಿಸುತ್ತಾರೆ. ಆದರೆ ಅದರಿಂದ ಪ್ರಯೋಜನವೇನಿದೆ. ಒಮ್ಮೊಮ್ಮೆ ಇಂತಹ ಪಾರ್ಟಿ ಮಾಡಬಹುದಷ್ಟೇ, ನಿಮಗೆ ಏನಾದರೂ ತಿನ್ನಬೇಕೆನಿಸಿದರೆ ನೀವೊಬ್ಬರೇ ತರಿಸಿಕೊಂಡು ತಿನ್ನಿ, ಅದರ ಬದಲು ಹತ್ತಾರು ಜನರ ಜತೆ ಪಾರ್ಟಿ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.