ಬದುಕಿನಲ್ಲಿ ಗುಟ್ಟುಗಳಿರದ ಮನುಷ್ಯನಿಲ್ಲ. ಪ್ರತಿಯೊಬ್ಬ ಮನುಷ್ಯನೂ ತಾನು ಬೇರೆಯವರೊಂದಿಗೆ ಹಂಚಿಕೊಳ್ಳದ ಗುಟ್ಟುಗಳನ್ನು ಕಾಪಾಡಿಕೊಂಡಿರುತ್ತಾನೆ. ಆದರೆ ಕೆಲವರು ಮಾತ್ರ ತೆರೆದ ಪುಸ್ತಕದಂತೆ ಬದುಕುತ್ತಾರೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನೂ ಗುಟ್ಟುಗಳನ್ನು ಇಟ್ಟುಕೊಳ್ಳದ ಮನುಷ್ಯ ಇಲ್ಲ. ವಾಸ್ತವವಾಗಿ, ಜನರು ತಮ್ಮ ವಿರೋಧಿಗಳನ್ನು ಕೆಡವಲು ರಹಸ್ಯಗಳ ಲಾಭ ಪಡೆದುಕೊಳ್ಳುವುದು ಸಾಮಾನ್ಯ ಸಂಗತಿ. ಆದ್ದರಿಂದ, ನಿಮ್ಮ ರಹಸ್ಯವನ್ನು ಹೇಳಲು ಬಯಸಿದಾಗ ನೀವು ಜಾಗರೂಕರಾಗಿರಬೇಕು. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಗುಟ್ಟುಗಳನ್ನು ಮುಚ್ಚಿಡುವುದಿಲ್ಲ. ಅವರು ಯಾರೊಬ್ಬರ ಬಳಿಯಾದರೂ ಹೇಳಯೇ ತೀರುತ್ತಾರೆ. ಅಂತಹ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ನಾವು ಯಾವುದೇ ರಹಸ್ಯವಾದ ವಿಷಯವನ್ನು ಹೇಳುವಾಗ ಜಾಗರೂಕರಾಗಿರಬೇಕು. ಯಾರ ಬಳಿ ರಹಸ್ಯವನ್ನು ಹೇಳುತ್ತಿದ್ದೇವೆ ಎನ್ನುವುದರ ಬಗ್ಗೆ ಗಮನ ಇರಬೇಕು. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಗುಟ್ಟುಗಳನ್ನು ಮುಚ್ಚಿಡುವುದಿಲ್ಲ. ಅವರು ಯಾರೊಬ್ಬರ ಬಳಿಯಾದರೂ ಹೇಳಯೇ ತೀರುತ್ತಾರೆ. ಅಂತಹ ರಾಶಿಗಳು ಯಾವುವು..? ಯಾವ ರಾಶಿಯವರು ಗುಟ್ಟನ್ನು ರಟ್ಟು ಮಾಡುತ್ತಾರೆ.?

ಈ 5 ರಾಶಿಯವರು ಗುಟ್ಟನ್ನು ರಟ್ಟು ಮಾಡದೇ ಇರಲಾರರು..! ಇವರ ಬಳಿ ಹುಷಾರಾಗಿರಿ..

ಬದುಕಿನಲ್ಲಿ ಗುಟ್ಟುಗಳಿರದ ಮನುಷ್ಯನಿಲ್ಲ. ಪ್ರತಿಯೊಬ್ಬ ಮನುಷ್ಯನೂ ತಾನು ಬೇರೆಯವರೊಂದಿಗೆ ಹಂಚಿಕೊಳ್ಳದ ಗುಟ್ಟುಗಳನ್ನು ಕಾಪಾಡಿಕೊಂಡಿರುತ್ತಾನೆ. ಆದರೆ ಕೆಲವರು ಮಾತ್ರ ತೆರೆದ ಪುಸ್ತಕದಂತೆ ಬದುಕುತ್ತಾರೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನೂ ಗುಟ್ಟುಗಳನ್ನು ಇಟ್ಟುಕೊಳ್ಳದ ಮನುಷ್ಯ ಇಲ್ಲ. ವಾಸ್ತವವಾಗಿ, ಜನರು ತಮ್ಮ ವಿರೋಧಿಗಳನ್ನು ಕೆಡವಲು ರಹಸ್ಯಗಳ ಲಾಭ ಪಡೆದುಕೊಳ್ಳುವುದು ಸಾಮಾನ್ಯ ಸಂಗತಿ. ಆದ್ದರಿಂದ, ನಿಮ್ಮ ರಹಸ್ಯವನ್ನು ಹೇಳಲು ಬಯಸಿದಾಗ ನೀವು ಜಾಗರೂಕರಾಗಿರಬೇಕು. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಗುಟ್ಟುಗಳನ್ನು ಮುಚ್ಚಿಡುವುದಿಲ್ಲ. ಅವರು ಯಾರೊಬ್ಬರ ಬಳಿಯಾದರೂ ಹೇಳಯೇ ತೀರುತ್ತಾರೆ. ಅಂತಹ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

​ಮೇಷ
​ಮೇಷ

ಮೇಷ ರಾಶಿಯವರ ಬಳಿ ಯಾವುದೇ ಗುಟ್ಟುಗಳು ಉಳಿಯುವುದಿಲ್ಲ. ಅವರು ಗುಟ್ಟುಗಳನ್ನು ತಮ್ಮ ತಲೆಯೊಳಗೆ ಉಳಿಯಲು ಬಿಡುವುದಿಲ್ಲ. ಅದನ್ನು ನಿಯಂತ್ರಿಸುವುದು ಅವರಿಗೆ ದೊಡ್ಡ ಸವಾಲೇ ಸರಿ. ಈ ರಾಶಿಯವರು ಅಗತ್ಯತೆ ಮತ್ತು ಭಾವನಾತ್ಮಕ ದೋಷಗಳು ಅರ್ಥವಾಗುವುದಿಲ್ಲ. ಕೆಲವೊಮ್ಮೆ ಅವರು ಅದನ್ನು ಲೆಕ್ಕಿಸುವುದಿಲ್ಲ. ಮೇಷ ರಾಶಿಯವರ ಬಳಿ ರಹಸ್ಯಗಳು ಹೆಚ್ಚು ಉಳಿಯುವುದಿಲ್ಲ. ಅವರ ಜೀವನದಲ್ಲಿ ಏನಾದರೂ ಸಹ ಅವರು ಮುಚ್ಚಿಕೊಳ್ಳುವುದಿಲ್ಲ. ಅವರು ಅದರ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ.

ಮೇಷ ರಾಶಿಯವರಿಗೆ ಸ್ಪರ್ಧೆ ಎಂದರೆ ಷ್ಟ. ಅವರು ಎಲ್ಲದರಲ್ಲೂ ಅವರು ವಿಜೇತರಾಗಲು ಸಾಹಸ ಮಾಡುತ್ತಾರೆ. ಅವರು ಬಯಸಿದ್ದನ್ನು ಪಡೆಯುವವರೆಗೂ ಇತರರ ಗೌಪ್ಯತೆಯ ಬಗ್ಗೆ ಕಾಳಜಿ ವಹಿಸುತ್ತಾರೆ. ಅದಾದ ನಂತರ ಅದು ಎಂತದ್ದೇ ಗುಟ್ಟಾದರೂ ಅದನ್ನು ಮುಚ್ಚಿಟ್ಟುಕೊಳ್ಳುವುದಿಲ್ಲ. ಇನ್ನು ಈ ರಾಶಿಯವರು ತಮ್ಮ ಇಚ್ಛೆಗಳನ್ನು ಪೂರೈಸದಿದ್ದರೆ ಗುಟ್ಟುಗಳನ್ನು ಬಿಟ್ಟುಕೊಡಬಹುದು. ಮೇಷ ರಾಶಿಯವರು ನಿಮ್ಮ ಖಾಸಗಿ ಸಮಸ್ಯೆಗಳನ್ನು ಬಹಿರಂಗಪಡಿಸುವ ಮೂಲಕ ನಿಮಗೆ ತೊಂದರೆ ಕೊಡಬಹುದು. ಕೆಟ್ಟ ಸಂದರ್ಭದಲ್ಲಿ ಈ ರಾಶಿಯವರು ನಿಮ್ಮ ಗುಟ್ಟುಗಳನ್ನು ಇಟ್ಟುಕೊಂಡು ತಮಾಷೆ ಮಾಡಬಹುದು. ಅದು ನಿಮ್ಮನ್ನು ಕಾಡುತ್ತದೆ.

ಈ 5 ರಾಶಿಚಕ್ರ ಚಿಹ್ನೆಗಳ ಜನರೊಂದಿಗೆ ಜಾಗರೂಕರಾಗಿರಿ..! ಇವರು ದ್ವೇಷಿಗಳು..

​ಮಿಥುನ ರಾಶಿ:
​ಮಿಥುನ ರಾಶಿ:

ಪ್ರತಿಯೊಬ್ಬರೂ ಮಿಥುನ ರಾಶಿಯವರೊಂದಿಗೆ ಮಾತನಾಡಲು ಇಷ್ಟಪಡುತ್ತಾರೆ. ಈ ರಾಶಿಯವರ ಉಪಸ್ಥಿತಿಯು ಎಲ್ಲರಿಗೂ ಹಿತಕರವಾಗಿರುತ್ತದೆ. ಮಿಥುನ ರಾಶಿಯವರು ಏನು ಹೇಳಿದರೂ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಆದರೆ, ಕೆಲವು ಸಾರಿ ಅವರು ಗಾಸಿಪ್‌ಗಳ ಬಗ್ಗೆ ಹೆಚ್ಚು ಒಲವು ತೋರುತ್ತಾರೆ. ಅವು ಅವರಿಗೆ ಆಹ್ಲಾದಕರ ಅನುಭವ ನೀಡುತ್ತವೆ. ಗುಂಪಿನಲ್ಲಿದ್ದಾಗ ಖುಷಿಯಲ್ಲಿ ಮಿಥುನ ರಾಶಿಯವರು ಗೌಪ್ಯತೆಯನ್ನು ಬಿಟ್ಟುಕೊಡುವ ಸಾಧ್ಯತೆ ಇದೆ.

ಮಿಥುನ ರಾಶಿಯಲ್ಲಿ ಜನಸಿದವರು ತಮ್ಮ ಮನಸ್ಸಿನಲ್ಲಿರುವ ಯಾವ ವಿಷಯವನ್ನೂ ಮುಕ್ತವಾಗಿ ಹೇಳಬಲ್ಲರು. ಕೆಲವು ಸಾರಿ ಬೇರೆಯವರಿಗೆ ಸಂಬಂಧಿಸಿದ ವಿಷಯವನ್ನೂ ಹೇಳಿಬಿಸುತ್ತಾರೆ. ಈ ರೀತಿ ಹೇಳಿ ಅವರು ಜನರ ಮಧ್ಯೆ ಕೇಂದ್ರಬಿಂದುವಾಗಲು ಇಷ್ಟಪಡುತ್ತಾರೆ. ಕೆಲವು ಸಾರಿ ಅದನ್ನು ವಿನೋದಕ್ಕಾಗಿ ಮಾಡಿದರೂ ಅದರ ಫಲಿತಾಂಶದ ಗಂಭೀರತೆ ಅವರಿಗೆ ಅರ್ಥವಾಗುವುದಿಲ್ಲ.

Vara Bhavishya: ಏಪ್ರಿಲ್‌ 19 ರಿಂದ 25 ರವರೆಗೆ ನಿಮ್ಮ ರಾಶಿಫಲಗಳು ಹೇಗಿವೆ..?

​ಧನು ರಾಶಿ
​ಧನು ರಾಶಿ

ಮೇಷ ರಾಶಿಯಂತೆ ಧನು ರಾಶಿಯವರೂ ಸಹ ಬೆಂಕಿಯ ಅಂಶವನ್ನು ಪ್ರತಿನಿಧಿಸುತ್ತಾರೆ. ಇವರು ಆಗಾಗ್ಗೆ ಸ್ವಲ್ಪ ಕೋಪಗೊಳ್ಳುತ್ತಾರೆ ಅದಕ್ಕೆ ಕಾರಣ ಬೆಂಕಿಯ ಅಂಶವೇ. ಧನು ರಾಶಿಯವರು ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ ಆದರೆ, ಅದು ಅವರ ಆಪ್ತ ಸ್ನೇಹಿತರಿಗೆ ಸಂಬಂಧಿಸಿದದ್ದಾದರೆ ಮಾತ್ರ. ಜೀವನದಲ್ಲಿ ಸ್ವಾತಂತ್ರ್ಯ ಏನೆಂಬುದನ್ನು ಈ ರಾಶಿಯವರು ಚೆನ್ನಾಗಿ ಬಲ್ಲರು. ಕೆಲವು ವಿಷಯಗಳನ್ನು ಅವರು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಆದರೆ, ಕೆಲವು ವಿಷಯಗಳನ್ನು ಹೇಳಬೇಕೋ ಬೇಡವೊ ಎಂದು ಚಿಂತಿಸಿ ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ರಹಸ್ಯವಿಲ್ಲದೆ ಜೀವನ ನಡೆಸುವುದು ಈ ರಾಶಿಯವರಿಗೆ ಇಷ್ಟ.

ಧನು ರಾಶಿ ಜನರು ಸ್ವಾಭಿಮಾನಿಗಳು. ಸಮಯದ ಪ್ರಾಮುಖ್ಯತೆ ಚೆನ್ನಾಗಿ ಗೊತ್ತಿರುತ್ತದೆ. ಸ್ನೇಹವನ್ನು ಅವರು ಎಂದಿಗೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಹಾಗೊಂದುವೇಳೆ ಸ್ನೇಹಿತರು ತಪ್ಪು ಮಾಡಿದರೆ ಕ್ಷಮಿಸುತ್ತಾರೆ. ಈ ರಾಶಿಯವರು ತಾವು ನಂಬುವ ಜನರಿಗೆ ಮಾತ್ರ ಸತ್ಯವನ್ನು ಹೇಳಲು ಬಯಸುತ್ತಾರೆ. ಆದ್ದರಿಂದ ನೀವು ಆಪ್ತರಾಗಿದ್ದರೆ ಮಾತ್ರ ಧನುರಾಶಿಯವರಿಗೆ ನಿಮ್ಮ ಗುಟ್ಟನ್ನು ಹೇಳಬಹುದು.

ಪ್ರೀತಿ ಫಲಿಸುತ್ತದೆಯೋ..? ಇಲ್ಲವೋ..? ಎಂದು ತಿಳಿಸುವ ಹೃದಯ ರೇಖೆಯಿದು..!

​ಕನ್ಯಾರಾಶಿ
​ಕನ್ಯಾರಾಶಿ

ಕನ್ಯಾ ರಾಶಿಯ ಜನರು ತಮ್ಮ ಆಪ್ತರಾದರೂ ಅವರ ಮನಸ್ಸಿನ ಆಳದಲ್ಲಿ ಏನಿದೆ ಎಂಬುದನ್ನು ಕೆದಕಿ ತಿಳಿಯುವುದಿಲ್ಲ. ಅವರಿಗೆ ಏನು ಬೇಕು, ಎಷ್ಟು ಬೇಕು ಅಷ್ಟನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಈ ರಾಶಿಯವರು ಬೇರೆಯವರಿಗೆ ಸಂಬಂಧಿಸಿದ ರಹಸ್ಯವನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ತಮ್ಮ ಮನಸ್ಸಿನ ಭಾರ ಕಡಿಮೆಯಾಗುತ್ತದೆ ಎಂದು ಅಂದುಕೊಳ್ಳುತ್ತಾರೆ. ಹಾಗಾಗಿ ನಿಮ್ಮ ಗುಟ್ಟುಗಳು ಅವರ ಬಳಿ ಕ್ಷೇಮವಾಗಿ ಉಳಿಯುವುದಿಲ್ಲ. ಕನ್ಯಾರಾಶಿಯವರ ಒಳ್ಳೆಯ ಗುಣ ಎಂದರೆ ಅವರು ಯಾರ ವಿಷಯವನ್ನಾದರೂ ತಾಳ್ಮೆಯಿಂದ ಕೇಳುತ್ತಾರೆ. ಮಾಹಿತಿಯನ್ನು ವಿಶ್ಲೇಷಿಸುತ್ತಾರೆ. ನೀವು ಮಾಡಿರುವ ತಪ್ಪನ್ನು ಪಟ್ಟಿ ಮಾಡಿಕೊಳ್ಳುತ್ತಾರೆ.

ಕನ್ಯಾ ರಾಶಿಯವರು ನೀವು ಹೇಳದಿದ್ದರೂ ನಿಮ್ಮ ಕಷ್ಟವನ್ನು ಅರ್ಥ ಮಾಡಿಕೊಂಡು ಸಹಾಯ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸುತ್ತಾರೆ. ನೀವು ಅವರಿಗೆ ಒಳ್ಳೆಯದನ್ನು ಮಾಡಿದರೂ ಅದನ್ನು ಟೀಕಿಸುತ್ತಾರೆ. ಒಂದು ರೀತಿ ಹೇಳುವುದಾದರೆ ಮೊಸರಿನಲ್ಲಿ ಕಲ್ಲು ಹುಡುಕುವ ಸ್ವಭಾವ ಅವರದ್ದು. ವಿಪರೀತ ವಿಮರ್ಶಾತ್ಮಕ, ಪರಿಪೂರ್ಣತಾ ವಾದಿಯಾಗಿರುವುದರಿಂದ, ನೀವು ಏನು ತಪ್ಪು ಮಾಡಿದ್ದೀರಿ ಮತ್ತು ನೀವು ಬದಲಾಯಿಸಬೇಕಾದದ್ದನ್ನು ನಿಖರವಾಗಿ ಹೇಳಲು ಅವರಿಂದ ಸಾಧ್ಯವಿಲ್ಲ. ಸಾಮಾನ್ಯವಾಗಿ ಅವರಿಂದ ಆಗುವ ಒಂದು ತೊಂದರೆ ಎಂದರೆ ಜೀವನದಲ್ಲಿ ಅವರು ಏನನ್ನೂ ಮುಚ್ಚಿಟ್ಟುಕೊಲ್ಳುವುದಿಲ್ಲ. ರಹಷ್ಯ ಮುಚ್ಚಿಡುವುದು ಬಿಡುವುದು ಅವರ ಮೂಡ್‌ ಮೇಲೆ ನಿಂತಿರುತ್ತದೆ. ತಮ್ಮ ಅನುಕೂಲಕ್ಕಾಗಿ ಅವರು ಬೇರೆಯವರ ಗುಟ್ಟುಗಳನ್ನು ಬಳಸಿಕೊಳ್ಳಬಹುದು.

ಹೊಸ ಮನೆ ಖರೀದಿಸುತ್ತಿದ್ದೀರಾ..? ಈ ಹತ್ತು ವಾಸ್ತು ಸಲಹೆಗಳನ್ನು ಮರೆಯದೇ ಪಾಲಿಸಿ..

​ವೃಶ್ಚಿಕ ರಾಶಿ:
​ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರು ನಿಗೂಢ ಸ್ವಭಾವದರಾಗಿದ್ದಾರೆ. ರಹಸ್ಯಗಳ ಮೌಲ್ಯವನ್ನು ಅವರ ತಿಳಿದಿದ್ದಾರೆ. ಆದರೆ, ಕೆಲವೊಬ್ಬರ ರಹಸ್ಯ ತಮಗೆ ಉಪಯುಕ್ತ ಎಂದು ತಿಳಿದರೆ ಖಂಡಿತವಾಗಿ ಅವರು ಅದನ್ನು ಹಂಚಿಕೊಳ್ಳುತ್ತಾರೆ. ರಹಸ್ಯವನ್ನು ಅವರು ಪ್ರತೀಕಾರಕ್ಕಾಗಿಯೂ ಬಳಸುವ ಸಾಧ್ಯತೆ ಇದೆ. ಯಾರಾದರೂ ವೃಶ್ಚಿಕ ರಾಶಿಯವರ ಭಾವನೆಗಳಿಗೆ ಘಾಸಿ ಉಂಟುಮಾಡಿದರೆ ಅವರ ರಹಸ್ಯದ ಮೂಲಕ ಸೇಡು ತೀರಿಸಿಕೊಳ್ಳಬಹುದು.

ವೃಶ್ಚಿಕ ರಾಶಿಯ ಸ್ಥಳೀಯರು ಆಕ್ರಮಣಕ್ಕೆ ಒಳಗಾದಾಗ ಪ್ರತೀಕಾರ ತೀರಿಸಿಕೊಳ್ಳಲು ಬಯಸುತ್ತಾರೆ. ಆಗ ಅವರ ರಹಸ್ಯಗಳೇನಾದರೂ ಇದ್ದರೆ ಅದನ್ನು ಸೇಡು ತೀರಿಸಿಕೊಳ್ಳಲು ಬಯಸಬಹುದು. ಹಾಗೆ ಮಾಡುವುದರಿಂದ ನಿಮಗೆ ಹೆಚ್ಚು ನೋವುಂಟಾಗಬಹುದು. ಅದಕ್ಕೆ ಯಾವುದೇ ಪಶ್ಚಾತಾಪ ಪಡುವುದಿಲ್ಲ. ನೀವು ವೃಶ್ಚಿಕ ರಾಶಿಯವರ ವಿಶ್ವಾಸವನ್ನು ಮುರಿದರೆ ನಿಮ್ಮ ರಹಸ್ಯ ಬಯಲಾಗುವುದು ಖಂಡಿತ. ಹಾಗಾಗಿ ನೀವು ವೃಶ್ಚಿಕ ರಾಶಿಯವರೊಂದಿಗೆ ಏನನ್ನಾದರೂ ಹಂಚಿಕೊಳ್ಳುವ ಮುನ್ನ ನೂರು ಬಾರಿ ಯೋಚನೆ ಮಾಡಿನೋಡಿ. ಇದರ ಹೊರತಾಗಿಯೂ ವೃಶ್ಚಿಕ ರಾಶಿಯವರು ವಿಶ್ವಾಸಾರ್ಹತೆಯನ್ನು ಹೊಂದಿರುತ್ತಾರೆ. ನಂಬಿದವರಿಗೆ ಅವರು ದ್ರೋಹ ಮಾಡುವುದಿಲ್ಲ.

ವಾಸ್ತು ಟಿಪ್ಸ್‌: ಯಾವ ದಿಕ್ಕಿನಲ್ಲಿ ಆಹಾರ ತಿಂದರೆ ಒಳ್ಳೆಯದು..? ಊಟಕ್ಕೆ ಯಾವ ದಿಕ್ಕು ಸರಿಯಲ್ಲ..?

ರಾಶಿ ಭವಿಷ್ಯ: Astrology in Kannada | Kannada Rashi Bhavishya – Vijaya Karnataka
Read More