ಬೆಂಗಳೂರು: ಕಾಂಗ್ರೆಸ್ ನಾಯಕರು ವಿಧಾನಸಭೆಯಲ್ಲಿ ಉಂಡು ಗೊರಕೆ ಹೊಡೆಯುತ್ತಿದ್ದಾರೆ ಎಂದು ಸಚಿವ ಆರ್ ಅಶೋಕ್ ನೀಡಿದ್ದ ಹೇಳಿಕೆಯೀಗ ರಾಜ್ಯ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ವಿಧಾನಸೌಧದಲ್ಲಿ ಧರಣಿ ವೇಳೆ ಊಟದ ವೆಚ್ಚವನ್ನ ಸ್ವತಃ ಭರಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ಈ ಬಗ್ಗೆ ವಿಧಾನಸಭೆ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ಶಾಸಕರಾದ ಡಾ. ರಂಗನಾಥ್, ರಾಜಶೇಖರ ಪಾಟೀಲ್, ಬಿ.ಕೆ. ಸಂಗಮೇಶ್ವರ್, ಪ್ರಕಾಶ್ ರಾಥೋಡ್, ಯಶವಂತರಾಯ ಹಾಗೂ ವೆಂಕಟರಮಣಯ್ಯ ಚರ್ಚೆ ನಡೆಸಿದ್ದಾರೆ. ಮಾನ ಮರ್ಯಾದೆ ಇದೆಯಾ ಅವರಿಗೆ, ಯಾರಾದರೂ ಹಂಗೆ ಮಾತಾಡ್ತಾರಾ? ಎಂದು ಅಶೋಕ್ ಪಟ್ಟಣ್ ಕಿಡಿಕಾರಿದ್ರು.
ಈ ಹಿಂದೆ ಡಿಸಿಎಂ ಆಗಿದ್ದವರು, ಈಗ ಮಂತ್ರಿ ಆಗಿರೋರು ಹೀಗೆ ಮಾತಾಡಬಾರದಿತ್ತು. ನಾವು ನಮ್ಮ ದುಡ್ಡಿಂದಲೇ ಊಟ ತರ್ಸೋಕೆ ತೀರ್ಮಾನ ಮಾಡದೀವಿ. ನಿನ್ನೆ ಮೊನ್ನೆಯ ಊಟದ ದುಡ್ಡನ್ನು ವಾಪಸ್ ಕೊಟ್ ಬಿಡ್ತೀವಿ, ಆ ರೀತಿ ಅಶೋಕ್ ಮಾತಾಡಬಾರದು, ಏನಂತಾರೆ ಜನ ಅಂತಾ ಶಾಸಕ ರಾಜಶೇಖರ ಪಾಟೀಲ್ ಕಿಡಿಕಾರಿದ್ದಾರೆ.