ಚಿಕ್ಕೋಡಿ/ಬೆಳಗಾವಿ: ಉಕ್ಕಿ ಹರಿಯುವ ವೇದಗಂಗಾ ನದಿ ದಾಟಲು ಹೋಗಿ ಆಯತಪ್ಪಿ ನದಿಗೆ ಬಿದ್ದು, ಸೇತುವೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಎನ್‍ಡಿಆರ್‍ಎಫ್ ತಂಡ ಹಾಗೂ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ನದಿಯಿಂದ ಹೊರಗೆ ಕರೆ ತಂದಿದ್ದಾರೆ.

ಬೆಳಗಾವಿ ಜಿಲ್ಲೆಯ ಅಕ್ಕೋಳ-ಸಿದ್ನಾಳ ಗ್ರಾಮದ ಸಂಪರ್ಕ ಸೇತುವೆ ದಾಟುವಾಗ ನೀರಿನ ರಭಸಕ್ಕೆ ದಿಗ್ವಿಜಯ ಕುಲಕರ್ಣಿ ಕೊಚ್ಚಿ ಹೋಗಿ ಸೇತುವೆಯ ಬಳಿ ಮರದ ಕೊಂಬೆಯಲ್ಲಿ ಸಿಲುಕಿದ್ದರು. ವ್ಯಕ್ತಿಯನ್ನು ಈಗ ಯಶಸ್ವಿ ಕಾರ್ಯಾಚರಣೆ ಮಾಡಿ ಹೊರ ತರಲಾಗಿದೆ.

ನೀರಿನ ರಭಸದ ನಡುವೆಯೂ ಯಶಸ್ವಿ ಕಾರ್ಯಾಚರಣೆ ನಡೆಸಿದ ಎನ್‍ಡಿಆರ್‍ಎಫ್ ಹಗ್ಗ ಕಟ್ಟಿ ಯುವಕನ ವರೆಗೂ ತಲುಪಿಸಿ, ಹಗ್ಗದಿಂದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾರ್ಯಾಚರಣೆಯಲ್ಲಿ ಎನ್‍ಡಿಆರ್‍ಎಫ್ ತಂಡದ ಸದಸ್ಯರು, ಚಿಕ್ಕೋಡಿ ಉಪ ವಿಬಾಗಾಧಿಕಾರಿ ಯತೀಶ್ ಕುಮಾರ್, ಡಿವೈಎಸ್‍ಪಿ ಮನೋಜ್ ನಾಯಕ್ ಭಾಗವಹಿಸಿದ್ದರು.

The post ಉಕ್ಕಿ ಹರಿಯುವ ನದಿಗೆ ಬಿದ್ದ ವ್ಯಕ್ತಿ- ಎನ್‌ಡಿಆರ್‌ಎಫ್‌ ತಂಡದಿಂದ ರಕ್ಷಣೆ appeared first on Public TV.

Source: publictv.in

Source link