ಉಕ್ರೇನ್ನ್ನು ಫ್ಯಾಸಿಸ್ಟರು ನಿಯಂತ್ರಿಸುತ್ತಾರೆ ಎಂಬ ತನ್ನ ಸಮರ್ಥನೆಯನ್ನು ಬೆಂಬಲಿಸಲು ರಷ್ಯಾ ನಿಯಮಿತವಾಗಿ ಅಜೋವ್ ಅನ್ನು ಉಲ್ಲೇಖಿಸಿದೆ.

ಅಜೋವ್ ರೆಜಿಮೆಂಟ್
Image Credit source: AFP
ಮಾಸ್ಕೊ: ಉಕ್ರೇನ್ನ ಅಜೋವ್ ರೆಜಿಮೆಂಟ್ನ್ನು ರಷ್ಯಾದ ಸುಪ್ರೀಂಕೋರ್ಟ್ ಉಗ್ರರ ಗುಂಪು ಎಂದು ಘೋಷಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಬಲಪಂಥೀಯ ಮತ್ತು ಅಲ್ಟ್ರಾ ನ್ಯಾಷನಲಿಸ್ಟ್ ಮೂಲದ್ದಾಗಿರುವ ಅಜೋವ್ ರೆಜಿಮೆಂಟ್, ಪೂರ್ವ ಉಕ್ರೇನ್ನಲ್ಲಿ ರಷ್ಯಾದ ವಿರುದ್ಧ ಹೋರಾಡುತ್ತಿರುವ ಅತ್ಯಂತ ಪ್ರಮುಖವಾದ ಉಕ್ರೇನಿಯನ್ ಮಿಲಿಟರಿ ರಚನೆಗಳಲ್ಲಿ ಒಂದಾಗಿದೆ. ಉಕ್ರೇನ್ನ್ನು ಫ್ಯಾಸಿಸ್ಟರು ನಿಯಂತ್ರಿಸುತ್ತಾರೆ ಎಂಬ ತನ್ನ ಸಮರ್ಥನೆಯನ್ನು ಬೆಂಬಲಿಸಲು ರಷ್ಯಾ ನಿಯಮಿತವಾಗಿ ಅಜೋವ್ ಅನ್ನು ಉಲ್ಲೇಖಿಸಿದೆ. ರಷ್ಯಾದ ರಾಜ್ಯ ಅಜೆಂಡಾವು ಅಜೋವ್ ಹೋರಾಟಗಾರರನ್ನು ಎರಡನೇ ಮಹಾಯುದ್ಧದ ನಾಜಿಗಳಿಗೆ ಹೋಲಿಸಿದೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)