ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮಾತುಕತೆಗಳಲ್ಲಿ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ: ಫಿನ್​​ಲ್ಯಾಂಡ್​​ ಸಚಿವ | Hopes India can help in negotiations to end the conflict in Ukraine says Finland minister


ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮಾತುಕತೆಗಳಲ್ಲಿ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ: ಫಿನ್​​ಲ್ಯಾಂಡ್​​ ಸಚಿವ

ಫಿನ್‌ಲ್ಯಾಂಡ್‌ನ ಆರ್ಥಿಕ ವ್ಯವಹಾರಗಳ ಸಚಿವ ಮಿಕಾ ಲಿಂಟಿಲಾ

ದೆಹಲಿ: ಯುರೋಪ್‌ನಾದ್ಯಂತ ಆರ್ಥಿಕ ಮತ್ತು ಭದ್ರತಾ ಕ್ಷೇತ್ರಗಳ ಮೇಲೆ ಭಾರಿ ಪರಿಣಾಮ ಬೀರಿರುವ ಉಕ್ರೇನ್‌ನಲ್ಲಿನ (Ukraine) ಸಂಘರ್ಷವನ್ನು ಕೊನೆಗೊಳಿಸಲು ಭಾರತವು ಮಾತುಕತೆಗೆ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ ಎಂದು ಫಿನ್‌ಲ್ಯಾಂಡ್‌ನ (Finland) ಆರ್ಥಿಕ ವ್ಯವಹಾರಗಳ ಸಚಿವ ಮಿಕಾ ಲಿಂಟಿಲಾ (Mika Lintilä)  ಸೋಮವಾರ ಹೇಳಿದ್ದಾರೆ. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ವಿಶೇಷವಾಗಿ ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು 5G ಮತ್ತು 6G ಯಲ್ಲಿ ಜಂಟಿಯಾಗಿ ಕೆಲಸ ಮಾಡಲು, ಪಾರದರ್ಶಕ ಮತ್ತು ವಿಶ್ವಾಸಾರ್ಹ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಫಿನ್‌ಲ್ಯಾಂಡ್‌ಗೆ ಸಾಕಷ್ಟು ಅವಕಾಶಗಳಿವೆ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಲಿಂಟಿಲಾ ಮತ್ತು ಆರ್ಥಿಕ ವ್ಯವಹಾರಗಳ ರಾಜ್ಯದ ಅಧೀನ ಕಾರ್ಯದರ್ಶಿ ಪೆಟ್ರಿ ಪೆಲ್ಟೋನೆನ್ ಅವರು ಭಾರತೀಯ ಹೂಡಿಕೆಗಳು ಮತ್ತು ಕಂಪನಿಗಳನ್ನು ಫಿನ್‌ಲ್ಯಾಂಡ್‌ಗೆ ಆಕರ್ಷಿಸಲು ಮತ್ತು ಕ್ವಾಂಟಮ್ ತಂತ್ರಜ್ಞಾನ, ದೂರಸಂಪರ್ಕ, ಕೃತಕ ಬುದ್ಧಿಮತ್ತೆ (AI) ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಸಹಯೋಗವನ್ನು ರೂಪಿಸಲು ವ್ಯಾಪಾರ ನಿಯೋಗದೊಂದಿಗೆ ಪ್ರಸ್ತುತ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

TV9 Kannada


Leave a Reply

Your email address will not be published.