
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
ಮೋದಿ ಸರ್ಕಾರ ಬರುವ ತನಕವೂ ಕಾಶ್ಮೀರದ ಶ್ರೀನಗರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಬಿಡಲಿಲ್ಲ. ಅವತ್ತಿನ ಕಾಂಗ್ರೆಸ್ ಸರ್ಕಾರ ಉಗ್ರರ ಮುಂದೆ ಕಾಂಗ್ರೆಸ್ ನಪುಂಸಕರಂತೆ ಮಂಡಿಯೂರಿತ್ತು ಎಂದು ಕಾಂಗ್ರೆಸ್ ವಿರುದ್ಧ ಸುನಿಲ್ ಕುಮಾರ್ ಕಿಡಿ ಕಾರಿದ್ದಾರೆ.
ಬೆಂಗಳೂರು: ಆರ್ಎಸ್ಎಸ್ (RSS) ನಪುಂಸಕ ಸಂಘಟನೆ ಎಂಬ ಕಾಂಗ್ರೆಸ್ ಸರಣಿ ಟ್ವೀಟ್ಗೆ ಬಿಜೆಪಿ (BJP) ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಾಂಗ್ರೆಸ್ ಟ್ವೀಟ್ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi), ಇರುವೆ ಕಟ್ಟಿದ ಗೂಡಿನಲ್ಲಿ ಹಾವು ಹೊಕ್ಕಂತೆ ಸಿದ್ದರಾಮಯ್ಯ (Siddaramaiah) ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಆರ್ಎಸ್ಎಸ್ ಬೈಯ್ಯುತ್ತಿದ್ದಾರೆ. ಆರ್ಎಸ್ಎಸ್ ಹಿಂದೂ ಸಂಘಟನೆ. ಆರ್ಎಸ್ಎಸ್ ಅನ್ನು ಬೈದರೆ ಮತ್ತೆ ಸಿಎಂ ಮಾಡ್ತಾರೆಂಬ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಆ ಭ್ರಮೆಯಲ್ಲಿರೋದು ಬೇಡ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕೆ ಬಂದರೂ ನಿಮ್ಮನ್ನು ಮುಖ್ಯಮಂತ್ರಿ ಮಾಡಲ್ಲ. ಬಾಯಿಗೆ ಬಂದಂತೆ ಮಾತನಾಡಿ ರಾಹುಲ್ ಸ್ಥಿತಿ ಹೀಗಾಗಿದೆ. ನೀವು ರಾಹುಲ್ ಗಾಂಧಿ (Rahul Gandhi) ತರಹ ಆಗಬೇಡಿ ಎಂದು ಟೀಕಿಸಿದ್ದಾರೆ.
ನಾಥೂರಾಮ್ ಗೋಡ್ಸೆ ಆರ್ಎಸ್ಎಸ್ನವರು ಎಂಬ ವಿಚಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಹೀಗೆ ಹೇಳಿ ಮಾನಹಾನಿ ಕೇಸ್ನಲ್ಲಿ ಕೋರ್ಟ್ಗೆ ಎಡತಾಕುತ್ತಿದ್ದಾರೆ. ಇನ್ನೊಂದಷ್ಟು ದಿನದಲ್ಲಿ ಕೋರ್ಟ್ಗೆ ಕ್ಷಮೆಕೇಳಿ ವಾಪಾಸ್ ಬರುತ್ತಾರೆ. ಇಲ್ಲಿನ ಕಾಂಗ್ರೆಸ್ ಪರಿಸ್ಥಿತಿಯೂ ಅದೇ ಆಗುತ್ತದೆ ಎಂದು ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ.