ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ ಇಬ್ಬರು ಉದ್ಯಮಿಗಳಿಗೂ ಇತ್ತು ಭಯೋತ್ಪಾದಕರೊಂದಿಗೆ ನಂಟು; ತನಿಖೆಗೆ ಆಗ್ರಹಿಸಿದ ಮುಫ್ತಿ | Two businessmen killed during an anti terror operation by security forces in Jammu Kashmir


ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ ಇಬ್ಬರು ಉದ್ಯಮಿಗಳಿಗೂ ಇತ್ತು ಭಯೋತ್ಪಾದಕರೊಂದಿಗೆ ನಂಟು; ತನಿಖೆಗೆ ಆಗ್ರಹಿಸಿದ ಮುಫ್ತಿ

ಸಾಂಕೇತಿಕ ಚಿತ್ರ

ಶ್ರೀನಗರ: ಇಲ್ಲಿ ನಿನ್ನೆ ಸಂಜೆ ನಡೆದ ಆ್ಯಂಟಿ ಟೆರರಿಸ್ಟ್​ (ಭಯೋತ್ಪಾದಕ ವಿರೋಧಿ) ಕಾರ್ಯಾಚರಣೆಯಲ್ಲಿ ಇಬ್ಬರು ಉದ್ಯಮಿಗಳು ಸೇರಿ ಒಟ್ಟು ನಾಲ್ಕು ಮಂದಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.  ಅಂದರೆ ಈ ಸತ್ತವರಲ್ಲಿ ಇಬ್ಬರು ಉಗ್ರರಾಗಿದ್ದು, ಉಳಿದಿಬ್ಬರು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಉದ್ಯಮಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  

ಹತ್ಯೆಗೀಡಾದ ಉದ್ಯಮಿಗಳನ್ನು ಡಾ.ಮುಡ್ಸಿರ್​​ ಗುಲ್​ ಮತ್ತು ಅಲ್ತಾಫ್​ ಭಟ್​​ ಎಂದು ಗುರುತಿಸಲಾಗಿದೆ. ಹೈದರ್​ಪೋರಾದ ಕಮರ್ಷಿಯಲ್ ಕಾಂಪ್ಲೆಕ್ಸ್​​ ಇವರಿಬ್ಬರ ಉದ್ಯಮ ಕ್ಷೇತ್ರವಾಗಿತ್ತು. ಮುಡ್ಸಿರ್​ ಮೂಲತಃ ಡೆಂಟಲ್​ ಸರ್ಜರಿಯಲ್ಲಿ ತರಬೇತಿ ಪಡೆದಿದ್ದ. ಆದರೆ ಕಂಪ್ಯೂಟರ್​ ಸೆಂಟರ್​ ನಡೆಸುತ್ತಿದ್ದ. ಅಲ್ತಾಫ್​ ಭಟ್​​ ಕಮರ್ಷಿಯಲ್​ ಕಾಂಪ್ಲೆಕ್ಸ್​​ನ ಮಾಲೀಕನಾಗಿದ್ದು, ಹಾರ್ಡವೇರ್​ ಮತ್ತು ಸಿಮೆಂಟ್​ ಅಂಗಡಿ ಇಟ್ಟುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಇವರಿಬ್ಬರ ಹತ್ಯೆಯ ಬಗ್ಗೆ ತನಿಖೆ ನಡೆಯಬೇಕು ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ. ಟ್ವೀಟ್​ ಮಾಡಿರುವ ಅವರು, ಇಲ್ಲಿನ ನಾಗರಿಕರನ್ನು ಮಾನವಗುರಾಣಿಗಳಂತೆ ಬಳಸಿ ನಂತರ ಅವರಿಗೆ ಗುಂಡು ಹೊಡೆದು ಕೊಲ್ಲಲಾಗುತ್ತಿದೆ. ಅದಾದ ಬಳಿಕ ಹತ್ಯೆ ಆದವರು ಉಗ್ರರಿಗಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.  ಆದರೆ ಅದನ್ನು ಸುಮ್ಮನೆ ನಂಬಬಾರದು. ಈ ಇಬ್ಬರು ಉದ್ಯಮಿಗಳ ಹತ್ಯೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.  ಮೃತ ಉದ್ಯಮಿಗಳ ಕುಟುಂಬದವರೂ ಕೂಡ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಘೋಷಣೆ: ಈ ಮೊದಲು ಕರ್ನಾಟಕ ರತ್ನ ಪ್ರಶಸ್ತಿ ಪಡೆದವರು ಇವರು

TV9 Kannada


Leave a Reply

Your email address will not be published. Required fields are marked *