ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ಶಂಕಿತ ಉಗ್ರ ಕೂಡ ಸಾವನ್ನಪ್ಪಿದ್ದಾನೆ.
ಹುತಾತ್ಮ ಯೋಧರನ್ನು ಸಂತೋಷ್ ಯಾದವ್ ಹಾಗೂ ಚವನ್ ರೋಮಿತ್ ತಾನಾಜಿ ಎಂದು ಗುರುತಿಸಲಾಗಿದೆ. ಇಬ್ಬರೂ ರಾಷ್ಟ್ರೀಯ ರೈಫಲ್ ದಳಕ್ಕೆ ಸೇರಿದವರು ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಇನ್ನು, ಉಗ್ರರ ವಿರುದ್ಧ ಶೋಪಿಯಾನದ ಝೈನಪೋರಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.