ಉಚಿತ ಊಟ ವಿತರಿಸುತ್ತಿರೋ ವೈದ್ಯ ದಂಪತಿ

ಚಿಕ್ಕಬಳ್ಳಾಪುರ: ಕೋವಿಡ್ ಚಿಕಿತ್ಸೆ ಜೊತೆ ಜೊತೆಗೆ ಮಾನವೀಯತೆ ಮರೆಯುತ್ತಿರೋ ಚಿಕ್ಕಬಳ್ಳಾಪುರ ನಗರದ ಮಾನಸ ಖಾಸಗಿ ಆಸ್ಪತ್ರೆಯ ವೈದ್ಯ ದಂಪತಿ ನಗರದಲ್ಲಿ ನಿರ್ಗತಿಕರಿಗೆ ಊಟ ಹಂಚುವ ಕಾರ್ಯ ಮಾಡುತ್ತಿದ್ದಾರೆ.

ಮಾನಸ ಆಸ್ಪತ್ರೆಯ ಮಧುಕರ್-ಸುಷ್ಮಾ ದಂಪತಿ ಉಚಿತ ಊಟ ಹಂಚಿಕೆ ಕಾರ್ಯ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಕೊರೊನಾ ಮುಂಚೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಎದುರು ಪ್ರತಿನಿತ್ಯ ಅನ್ನಪೂರ್ಣ ಹೆಸರಲ್ಲಿ ರೋಗಿಗಳು ಹಾಗೂ ಸಂಬಂಧಿಕರು ಊಟ ನೀಡುತ್ತಿದ್ದರು. ಆದ್ರೆ ಜನ ಒಂದೆಡೆ ಸೇರಬಾರದು ಅಂತ ಊಟ ಕೊಡೊದನ್ನ ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಆದ್ರೆ ಈಗ ಮತ್ತೆ ಅನ್ನಪೂರ್ಣ ಯೋಜನೆ ಮೂಲಕ ನಗರದ ವಿವಿಧೆಡೆ ತೆರಳಿ ನಿರ್ಗತಿಕರ ಹೊಟ್ಟೆ ತುಂಬಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಖಾಸಗಿ ಆಸ್ಪತ್ರೆ ಜೊತೆಗೆ ಮಾನಸ ವೃದ್ಧಾಶ್ರಮ ಸಹ ನಡೆಸ್ತಿರೋ ಈ ದಂಪತಿ ಅದೇ ಆಶ್ರಮದಲ್ಲಿ ಆಡುಗೆ ತಯಾರಿಸುತ್ತಿದ್ದಾರೆ. ಈಗ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡ್ತಿದ್ದಾರೆ. ಜಿಲ್ಲಾಸ್ಪತ್ರೆ ಬಳಿ ಬಡವರ ಹೊಟ್ಟೆ ತುಂಬಿಸುವ ಅನ್ನಪೂರ್ಣ ಯೋಜನೆಗೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಖ್ಯಾತಿಗೂ ಈ ದಂಪತಿ ಭಾಜನರಾಗಿದ್ದರು.

The post ಉಚಿತ ಊಟ ವಿತರಿಸುತ್ತಿರೋ ವೈದ್ಯ ದಂಪತಿ appeared first on Public TV.

Source: publictv.in

Source link