ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಬಡವರಿಗೆ ಬೆಳಕಾದ ಪ್ರಲ್ಹಾದ್ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೆ – pralhad joshi kshamatha seva trust free eye checkup in dharwad


ನಗರದ ಪ್ರತಿಷ್ಠಿತ ಎಂ.ಎಂ ಜೋಶಿ ನೇತ್ರವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದಲ್ಲಿ ಉಚಿತ ನೇತ್ರತಪಾಸಣಾ ಹಾಗೂ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಕೈಗೊಳ್ಳಲಾಗಿದೆ.

ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಬಡವರಿಗೆ ಬೆಳಕಾದ ಪ್ರಲ್ಹಾದ್ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೆ

ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಬಡವರಿಗೆ ಬೆಳಕಾದ ಪ್ರಲ್ಜಾದ್ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೆ

ಹುಬ್ಬಳ್ಳಿ:  ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಅವರ ಕ್ಷಮತಾ ಸೇವಾ ಸಂಸ್ಥೆ, ಬಡವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಸೇವೆಯನ್ನ ಉಚಿತವಾಗಿ ಒದಗಿಸುತ್ತಾ ಬಂದಿದೆ. ಈ ವರ್ಷದ ಉಚಿತ ನೇತ್ರತಪಾಸಣಾ ಹಾಗೂ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ನಗರದ ಪ್ರತಿಷ್ಠಿತ ಎಂ.ಎಂ ಜೋಶಿ ನೇತ್ರವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದಲ್ಲಿ ಕೈಗೊಳ್ಳಲಾಯಿತು.

ಸಧೃಡ ಆರೋಗ್ಯವೇ, ಉತ್ತಮ ಸಮಾಜ ನಿರ್ಮಾಣದ ಅಡಿಪಾಯ ಎಂದು ಅರಿತಿರುವ ಪ್ರಲ್ಹಾದ್ ಜೋಶಿ ಅವರು, ಕಳೆದ 15 ವರ್ಷದಿಂದ ತಮ್ಮ ಕ್ಷಮತಾ ಸಂಸ್ಥೆ ಮೂಲಕ ಧಾರವಾಡ ಜಿಲ್ಲೆಯ ಹಲವು ಕಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನೆಡೆಸಲು ಪ್ರೇರಪಣೆ ನೀಡುತ್ತಾ ಬಂದಿದ್ದಾರೆ. ಅಗತ್ಯವಿರುವವರಿಗೆ ಉಚಿತ ಶಸ್ತ್ರ ಚಿಕಿತ್ಸೆಯನ್ನು ತಮ್ಮ ಸಂಸ್ಥೆ ಕ್ಷಮತಾ ವತಿಯಿಂದ ನೆರವೇರಿಸಿದ್ದಾರೆ.

TV9 Kannada


Leave a Reply

Your email address will not be published.