ಉಡುಪಿ: ವೃದ್ಧೆಯೊಬ್ಬರ ಕಣ್ಣಿನಲ್ಲಿದ್ದ 9 ಸೆಂಟಿಮೀಟರ್ ಉದ್ದದ ಜೀವಂತ ಹುಳುವನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೊರ ತೆಗೆದ ಘಟನೆ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ನಡೆದಿದೆ.

ಮಲ್ಪೆಯ 70 ವರ್ಷದ ವೃದ್ಧೆ‌ ಕಣ್ಣು ನೋವಿನಿಂದ ಬಳಲುತ್ತಿದ್ದರು, ಜೂನ್ ಒಂದರನ್ನು ಪ್ರಸಾದ್ ನೇತ್ರಾಲಯಕ್ಕೆ ಬಂದಾಗ ವೃದ್ಧೆಯ, ಕಣ್ಣಿನ ಅಕ್ಷಿ ಪಟಲದಲ್ಲಿ ಸುತ್ತುತ್ತಿದ್ದ ಹುಳವನ್ನು ಗಮನಿಸಿದ ಡಾಕ್ಟರ್ ಕೃಷ್ಣ ಪ್ರಸಾದ್ ಅವರು, ಹುಳವನ್ನು ನಿಷ್ಕ್ರಿಯಗೊಳಿಸುವ ಔಷಧಿ ನೀಡಿ ಕಳುಹಿಸಿದ್ದರು.

ಆದರೆ ನಿನ್ನೆ ಮತ್ತೆ ವೃದ್ಧೆಯ ಕಣ್ಣಿನಲ್ಲಿ ವಿಪರೀತ ನೋವು ಹಾಗೂ ಉರಿ ಕಾಣಿಸಿಕೊಂಡ ಕಾರಣ, ಆಸ್ಪತ್ರೆಗೆ ಕರೆದುಕೊಂಡು ಬಂದರು. ಆಸ್ಪತ್ರೆಯಲ್ಲಿ ತುರ್ತಾಗಿ ಸ್ಪಂದಿಸಿದ ವೈದ್ಯರು, ಶಸ್ತ್ರ ಚಿಕಿತ್ಸೆ ಮೂಲಕ ಜೀವಂತ ಹುಳವನ್ನು ಹೊರ ತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ನೇತ್ರದ ಒಳ ಪದರದಿಂದ ಇದೇ ಮೊದಲ ಬಾರಿಗೆ ಜೀವಂತ ಹುಳವನ್ನು ತೆಗೆಯಲಾಗಿದೆ ಅಂತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹುಳದ ಕುರಿತು ಮತ್ತಷ್ಟು ಅಧ್ಯಯನಕ್ಕೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

 

The post ಉಡುಪಿಯಲ್ಲಿ ಕಣ್ಣಿನಿಂದ ಜೀವಂತ ಹುಳು ಹೊರ ತೆಗೆದ ವೈದ್ಯರು; ಇನ್ನೂ ಏನೇನ್ ನೋಡ್ಬೇಕೋ?! appeared first on News First Kannada.

Source: newsfirstlive.com

Source link