ಉಡುಪಿಯಲ್ಲಿ ಭಾರೀ ಮಳೆಗೆ ತುಂಬಿ ಹರಿಯುತ್ತಿರೋ ಇಂದ್ರಾಣಿ ನದಿ, ಕಾಲುಸೇತುವೆ ಕುಸಿತ

ಉಡುಪಿಯಲ್ಲಿ ಭಾರೀ ಮಳೆಗೆ ತುಂಬಿ ಹರಿಯುತ್ತಿರೋ ಇಂದ್ರಾಣಿ ನದಿ, ಕಾಲುಸೇತುವೆ ಕುಸಿತ

ಉಡುಪಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಇಲ್ಲಿನ ಇಂದ್ರಾಣಿ ನದಿ ತುಂಬಿ ಹರಿಯುತ್ತಿದೆ. ನದಿ ನೀರು ರಭಸವಾಗಿ ಹರಿಯುತ್ತಿರುವ ಪರಿಣಾಮವಾಗಿ, ನಗರದ ಮಠದ ಬೆಟ್ಟುವಿನ ಕಾಲು ಸಂಕದ(ಸೇತುವೆ)ಯ ಒಂದು ಭಾಗ ಕುಸಿದಿದೆ.

ಈ ಹಿನ್ನೆಲೆ ಮಠದ ಬೆಟ್ಟು, ಕೊಪ್ಪರತೋಟ, ನಿಟ್ಟೂರು, ಗುಂಡಿಬೈಲುವಿಗೆ ಹೋಗುವ ಒಳ ದಾರಿಯ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಈ ಪರಿಸರದಲ್ಲಿ ಹಲವು ಮನೆಗಳಿದ್ದು, ಇಲ್ಲಿನ ನಿವಾಸಿಗಳು ಈ ಕಾಲುಸಂಕವನ್ನೇ ಅವಲಂಬಿಸಿದ್ದರು.

ಹೀಗಾಗಿ ಮಾಠದಬೆಟ್ಟು, ಕೊಪ್ಪರತೋಟದ ಯುವಕರು ಮರದ ದಿಮ್ಮಿಗಳನ್ನು ಇರಿಸಿ ಕಾಲು ಸಂಕವನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿದ್ದಾರೆ.

The post ಉಡುಪಿಯಲ್ಲಿ ಭಾರೀ ಮಳೆಗೆ ತುಂಬಿ ಹರಿಯುತ್ತಿರೋ ಇಂದ್ರಾಣಿ ನದಿ, ಕಾಲುಸೇತುವೆ ಕುಸಿತ appeared first on News First Kannada.

Source: newsfirstlive.com

Source link