ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಮತ್ತೊಂದು ಆತ್ಮಹತ್ಯೆ; ನೇಣು ಬಿಗಿದುಕೊಂಡು ಮೆಡಿಕಲ್ ರೆಪ್ ಆತ್ಮಹತ್ಯೆ | After Santosh patil suicide another suicide in same lodge udupi


ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಮತ್ತೊಂದು ಆತ್ಮಹತ್ಯೆ; ನೇಣು ಬಿಗಿದುಕೊಂಡು ಮೆಡಿಕಲ್ ರೆಪ್ ಆತ್ಮಹತ್ಯೆ

ಪ್ರಾತಿನಿಧಿಕ ಚಿತ್ರ

ಉಡುಪಿ: ಜಿಲ್ಲೆಯ ಶಾಂಭವಿ ಲಾಡ್ಜ್‌ನಲ್ಲಿ ಮತ್ತೊಂದು ಆತ್ಮಹತ್ಯೆ ಆಗಿದೆ. ಮಂಗಳೂರು ಮೂಲದ ಮೆಡಿಕಲ್ ರೆಪ್ ಶರಣ್(33) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂಭವಿ ಲಾಡ್ಜ್‌ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತೋಷ್ ಆತ್ಮಹತ್ಯೆ ಬಳಿಕ ಲಾಡ್ಜ್ ಹೆಸರು ಬದಲಿಸಿದ್ದರು. ಆದರೆ ಇದೀಗ ಮತ್ತೊಬ್ಬ ವ್ಯಕ್ತಿ ಲಾಡ್ಜ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಖಾಸಗಿ ಹೋಟೆಲ್​ನಲ್ಲೇ ಮತ್ತೊಂದು ಆತ್ಮಹತ್ಯೆ ಆಗಿರುವುದು ಅನೇಕ ಶಂಕೆಗಳಿಗೆ ಕಾರಣವಾಗಿದೆ. ಎರಡು ದಿನದ ಹಿಂದಷ್ಟೇ ಈ ಲಾಡ್ಜ್ ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಹೆಸರು ಬದಲಾಯಿಸಲಾಗಿತ್ತು. ಆದ್ರೆ ಈಗ ಮತ್ತೆ ಅಲ್ಲೇ ಅನಾಹುತ ನಡೆದಿದೆ. ಈ ರೀತಿ ಖಾಸಗಿ ಲಾಡ್ಜ್ ಸೂಸೈಡ್ ಸ್ಪಾಟ್ ಆದಂತಿದೆ.


Leave a Reply

Your email address will not be published.