ಉಡುಪಿ: ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆ ನಾಳೆಯಿಂದ ಜೂನ್ 7 ರವರೆಗೆ ಒಟ್ಟು 14 ದಿನಗಳ ಕಾಲ 144 ಸೆಕ್ಷನ್ ಜಾರಿ ಮಾಡಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.

ನಾಳೆ ಬೆಳಿಗ್ಗೆ 6ರಿಂದ ಜೂನ್ 7ರ ಬೆಳಿಗ್ಗೆ 6ಗಂಟೆವರೆಗೆ ಸೆಕ್ಷನ್ ಜಾರಿಯಲ್ಲಿರಲಿದ್ದು ಅನಗತ್ಯ ತಿರುಗಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗುವುದು. ಈ ವೇಳೆ ತುರ್ತು ಸೇವೆಗಳಿಗೆ ‌ಮಾತ್ರ ಅವಕಾಶವಿರಲಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ಸೇವೆಗಳಿಗೆ ತೆರಳಬಹುದು. ಹೋಟೆಲ್​ಗಳಲ್ಲಿ ಪಾರ್ಸೆಲ್ ತರಲು ಕಾಲ್ನಡಿಗೆಯಲ್ಲೇ ತೆರಳಬೇಕು. ಉಳಿದಂತೆ ಸರ್ಕಾರದ ಮಾರ್ಗಸೂಚಿಯಂತೆ ನಿಯಮ ಜಾರಿಯಲ್ಲಿರಲಿವೆ ಎಂದು ಜಿ.ಜಗದೀಶ್ ಹೇಳಿದ್ದಾರೆ.

 

The post ಉಡುಪಿ ಜನರೇ ಕೇಳಿ: ನಾಳೆಯಿಂದ ಜೂನ್ 7 ರವರೆಗೆ 144 ಸೆಕ್ಷನ್ ಜಾರಿ appeared first on News First Kannada.

Source: newsfirstlive.com

Source link