ಉಡುಪಿ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾದ ಎರಡನೇ ಅಬ್ಬರ ತೀವ್ರವಾಗಿದ್ದು, ಮೂರು ದಿನಗಳಿಂದ ಪಾಸಿಟಿವಿಟಿ ರೇಟ್ 40.83 ರಷ್ಟಿದೆ ಎಂಬ ಆತಂಕಕಾರಿ ಅಂಶಗಳನ್ನು ಡಿಎಚ್ಒ ಡಾ. ಸುಧೀರ್ ಚಂದ್ರಚೂಡ ತಿಳಿಸಿದ್ದಾರೆ.

ಅದರಲ್ಲೂ ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿಗೆ ಗ್ರಾಮಾಂತರ ಭಾಗದ ಜನರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಮೊದಲ ಅಲೆಯ ಸಂದರ್ಭದಲ್ಲಿ ಒಟ್ಟು 189 ಮಂದಿ ಸಾವನ್ನಪ್ಪಿದ್ದರು. 149 ಮಂದಿ ಗ್ರಾಮಾಂತರ, 60 ಪಟ್ಟಣ ಪ್ರದೇಶದಲ್ಲಿ ಸಾವನ್ನಪ್ಪಿದ್ದರು. ಎರಡನೇ ಅಲೆಯಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಇದುವರೆಗೂ ಒಟ್ಟು 83 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ 59 ಗ್ರಾಮಾಂತರ ಹಾಗೂ 24 ಸಾವು ಪಟ್ಟಣ ಪ್ರದೇಶದಲ್ಲಿ ಸಂಭವಿಸಿದೆ.

ಆದ್ದರಿಂದ ಕೊರೊನಾ ಸೋಂಕಿನ ಬಗ್ಗೆ ಹಳ್ಳಿಯ ಜನ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ಭೇಟಿ ಕೊಡಬೇಕು. ರೋಗ ಲಕ್ಷಣವನ್ನು ಯಾವುದೇ ಕಾರಣಕ್ಕೂ ಅಸಡ್ಡೆ ಮಾಡಬೇಡಿ ಎಂದು ಡಿಎಚ್​​ಒ ಮನವಿ ಮಾಡಿದ್ದಾರೆ.

ಇದೇ ವೇಳೆ ಕೊರೊನಾ ಲಕ್ಷಣಗಳು ಕಂಡು ಬಂದ ಸಂದರ್ಭದಲ್ಲಿ ಸ್ವಯಂ ಚಿಕಿತ್ಸೆ ಮಾಡೋದನ್ನು ಬಿಟ್ಟುಬಿಡಿ. ಆಸ್ಪತ್ರೆಯ ಚಿಕಿತ್ಸೆ ಬಗ್ಗೆ ನಿಮಗೆ ಯಾವುದೇ ಆತಂಕ ಸಂಶಯ ಬೇಡ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ. ಆರೋಗ್ಯ ಗಂಭೀರವಾಗುವತನಕ ಕಾಯುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

The post ಉಡುಪಿ ಜಿಲ್ಲೆಯಲ್ಲಿ ಹಳ್ಳಿಯವರೇ ಕೊರೊನಾಗೆ ಹೆಚ್ಚು ಬಲಿ appeared first on News First Kannada.

Source: newsfirstlive.com

Source link