ಉಡುಪಿ: ನಗರದ ದತ್ತು ಸ್ವೀಕಾರ ಕೇಂದ್ರದ ಓರ್ವ ಮಹಿಳಾ ಸಿಬ್ಬಂದಿ ಹಾಗೂ 13 ಮಂದಿ ಮಕ್ಕಳಲ್ಲಿ ಕೊರೊನಾ ಪಾಸಿಟಿವ್​ ವರದಿ ದೃಢವಾಗಿದೆ.

ಉಡುಪಿಯ ಸಂತೆಕಟ್ಟೆಯಲ್ಲಿರುವ ಮಮತೆಯ ತೊಟ್ಟಿಲು ದತ್ತು ಸ್ವೀಕಾರ ಕೇಂದ್ರದಲ್ಲಿ ಕೊರೊನಾ ಪಾಸಿಟಿವ್​ ಬಂದಿರುವ ಎಲ್ಲಾ ಮಕ್ಕಳು 1 ರಿಂದ 10 ವರ್ಷದೊಳಗಿನವರು ಎಂಬ ಮಾಹಿತಿ ಲಭಿಸಿದೆ. ಇನ್ನು ಒಂದು ವರ್ಷದ ಕೆಳಗಿನ ಹಸುಗೂಸು‌ ಮಕ್ಕಳಿಗೆ ನೆಗೆಟಿವ್ ಬಂದಿದೆ.

ಕೇಂದ್ರದಲ್ಲಿ ಅನಾಥ, ವಿಕಲಚೇತನ, ವಿಶೇಷ ಸಾಮರ್ಥ್ಯದ ಮಕ್ಕಳಿದ್ದು, ಒಟ್ಟು 36 ಮಂದಿಗೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ 13 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಸದ್ಯ ನೆಗೆಟಿವ್​​ ಬಂದಿರುವ 23 ಮಂದಿಯನ್ನ ಧನ್ವಂತರಿ ನರ್ಸಿಂಗ್ ಕಾಲೇಜಿಗೆ ಶಿಫ್ಟ್ ಮಾಡಲಾಗಿದೆ. ಪಾಸಿಟಿವ್ ಬಂದ ಮಕ್ಕಳಿಗೆ ಆಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್​​​ಒ ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

The post ಉಡುಪಿ; ದತ್ತು ಸ್ವೀಕಾರ ಕೇಂದ್ರದಲ್ಲಿದ್ದ 13 ಮಕ್ಕಳಿಗೆ ಕೊರೊನಾ ಪಾಸಿಟಿವ್​​ appeared first on News First Kannada.

Source: newsfirstlive.com

Source link