ಉಡುಪಿ-ದಾವಣಗೆರೆಯಲ್ಲಿ ವರುಣನ ಆರ್ಭಟ

ಉಡುಪಿ-ದಾವಣಗೆರೆಯಲ್ಲಿ ವರುಣನ ಆರ್ಭಟ

ರಾಜ್ಯದ ಹಲವು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದೆ.

ಉಡುಪಿಯಲ್ಲಿ ಕಳೆದ 24 ಗಂಟೆಯಲ್ಲಿ ಸರಾಸರಿ 86 ಮಿಲಿಮೀಟರ್ ಮಳೆಯಾಗಿದೆ. ಬೈಂದೂರು ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 102 ಮಿಲಿಮೀಟರ್ ಮಳೆಯಾಗಿದ್ದು ಬ್ರಹ್ಮಾವರದಲ್ಲಿ 93 ಮಿ.ಮೀ, ಉಡುಪಿಯಲ್ಲಿ 87, ಕಾಪುವಿನಲ್ಲಿ 94, ಕುಂದಾಪುರದಲ್ಲಿ 86, ಕಾರ್ಕಳದಲ್ಲಿ 83, ಹೆಬ್ರಿಯಲ್ಲಿ 53 ಮಿಲಿಮೀಟರ್ ಮಳೆ ದಾಖಲಾಗಿದೆ.

ಇನ್ನು ನಾಲ್ಕು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜಿಲ್ಲೆಯಾದ್ಯಂತ ಅರೆಂಜ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದೆ.

ಇನ್ನು ದಾವಣಗೆರೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ವರುಣ ಅಬ್ಬರಿಸುತ್ತಿದ್ದಾನೆ. ಬೆಳಗ್ಗೆ 5 ಗಂಟೆಯಿಂದ ಮಳೆ ಶುರುವಾಗಿದೆ. ಲಾಕ್​ಡೌನ್ ಹಿನ್ನೆಲೆ ಜಿಲ್ಲಾಡಳಿತ ಇಂದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಆದ್ರೆ ಅಗತ್ಯ ವಸ್ತುಗಳನ್ನ ಕೊಳ್ಳೊಕೆ ಹೋಗಲು ಜನರು ಪರದಾಡುವಂತಾಗಿದೆ.

ಮಳೆಯಿಂದಾಗಿ ಜನರು ಮನೆ ಬಿಟ್ಟು ಆಚೆ ಬಾರದಂತಾಗಿದೆ, ವಾಹನಸವಾರರಿಗೂ ಕಿರಿಕಿರಿ ಉಂಟಾಗಿದೆ. ಇನ್ನು ಬಿತ್ತನೆಗೆ ಭೂಮಿ ಹದಗೊಳಿಸಿದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

The post ಉಡುಪಿ-ದಾವಣಗೆರೆಯಲ್ಲಿ ವರುಣನ ಆರ್ಭಟ appeared first on News First Kannada.

Source: newsfirstlive.com

Source link